Fuel Price in Pakistan: ಸಾಲದಲ್ಲಿ ಮುಳುಗಿರುವ ಪಾಕಿಸ್ತಾನದ ಆಡಳಿತಗಾರರು, ಇದೀಗ ಮುಳುಗುತ್ತಿರುವ ಆರ್ಥಿಕತೆಯನ್ನು ಮೇಲೆತ್ತಲು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಮೂಲಕ ದಬ್ಬಾಳಿಕೆ ನಡೆಸುತ್ತಿದೆ. ಹಣದುಬ್ಬರದಿಂದ ಒಂದು ಹೊತ್ತಿನ ಆಹಾರಕ್ಕಾಗಿ ಪರದಾಡುತ್ತಿರುವ ಲಕ್ಷಾಂತರ ಜನರಿಗೆ ಭಾನುವಾರ ಬೆಳಿಗ್ಗೆ ಮತ್ತೊಂದು ಕೆಟ್ಟ ಸುದ್ದಿ ಬಂದಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತಕ್ಷಣದಿಂದಲೇ ಜಾರಿಗೆ ತಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Pakistan Economic Crisis: ಮುಳುಗುತ್ತಿರುವ ಪಾಕಿಸ್ತಾನವನ್ನು ರಕ್ಷಿಸಲು ಬಂತು ಈ ದೇಶ: ಭಾರೀ ಹೂಡಿಕೆಯ ಘೋಷಣೆ!


ಪಾಕಿಸ್ತಾನ ಸರ್ಕಾರದ ವಿಚಿತ್ರ ತರ್ಕ:


ಪಾಕಿಸ್ತಾನವು ಭಾನುವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 35 ರೂ.ಹೆಚ್ಚಳ ಮಾಡಿದೆ. ದೂರದರ್ಶನದ ಸಂಕ್ಷಿಪ್ತ ಭಾಷಣದಲ್ಲಿ ಹಣಕಾಸು ಸಚಿವ ಇಶಾಕ್ ದಾರ್ ಈ ಘೋಷಣೆ ಮಾಡಿದ್ದಾರೆ. ಸೀಮೆಎಣ್ಣೆ ಮತ್ತು ಲಘು ಡೀಸೆಲ್ ತೈಲದ ಬೆಲೆಯನ್ನು ಲೀಟರ್‌ಗೆ 18 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪೆಟ್ರೋಲಿಯಂ ಕೊರತೆಯ ಕುರಿತು ‘ಕೃತಕ’ ಅಭಾವ ಸೃಷ್ಟಿಸಲಾಗುತ್ತಿದೆ ಎಂದರು.


ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಮಾತನಾಡಿ, 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 50 ರೂ.ಗಳಷ್ಟು ಹೆಚ್ಚಳದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ಸೃಷ್ಟಿಯಾಗಿತ್ತು. ಇದೇ ವೇಳೆ ಕಳೆದ ವಾರ ಪಾಕಿಸ್ತಾನದ ರೂಪಾಯಿ ಅಪಮೌಲ್ಯಗೊಂಡಿತು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇಕಡಾ 11 ರಷ್ಟು ಹೆಚ್ಚಾಗಿದೆ. ಅದಕ್ಕಾಗಿಯೇ ನಾವು ಬಲವಂತವಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಈ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ವರದಿಗಳು ನಮಗೆ ಬಂದಿವೆ. ಈ ಪರಿಸ್ಥಿತಿಯನ್ನು ಕೊನೆಗೊಳಿಸಲು, ಸರ್ಕಾರವು ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: Trans fat foods: 5 ಶತಕೋಟಿ ಜನರು ಈ ವಿಷ ತಿನ್ನುವ ಮೂಲಕ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ!


ಸರ್ಕಾರದ ಆದೇಶ ಜಾರಿಯಾದ ತಕ್ಷಣ ಪಾಕಿಸ್ತಾನದಲ್ಲಿ ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕಾಳಸಂತೆಯಲ್ಲಿ 10,000 ರೂ.ಗೆ ಲಭ್ಯವಾಗುತ್ತಿದೆ. ಜನವರಿ 29 ರಂದು ಅಂದರೆ ಇಂದು ಬೆಳಿಗ್ಗೆ 11 ಗಂಟೆಯವರೆಗೆ ಪೆಟ್ರೋಲ್ ಲೀಟರ್‌ಗೆ 249.80 ರೂ., ಹೈಸ್ಪೀಡ್ ಡೀಸೆಲ್ ಲೀಟರ್‌ಗೆ 262.80 ರೂ., ಸೀಮೆಎಣ್ಣೆ ಲೀಟರ್‌ಗೆ 189.83 ರೂ. ಮತ್ತು ಲಘು ಡೀಸೆಲ್ ಲೀಟರ್‌ಗೆ 187 ರೂ.ಗೆ ಮಾರಾಟವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.