UAE President Pakistan Visit: ಪ್ರಸ್ತುತ ಪಾಕಿಸ್ತಾನವು ಗಂಭೀರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಈ ಮಧ್ಯೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪಾಕಿಸ್ತಾನದ ಮುಳುಗುತ್ತಿರುವ ಹಡಗನ್ನು ಉಳಿಸುವ ಕಾರ್ಯ ಮಾಡುತ್ತಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪಾಕಿಸ್ತಾನದಲ್ಲಿ ಭಾರಿ ಹೂಡಿಕೆ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಯುಎಇ ಸರ್ಕಾರವು ಪಾಕಿಸ್ತಾನದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ಹೆಚ್ಚಿಸಲು ಯೋಜಿಸುತ್ತಿದೆ. ಪಾಕಿಸ್ತಾನದ ಖಜಾನೆ ಖಾಲಿಯಾಗಿದೆ ಮತ್ತು ಈ ಸಮಯದಲ್ಲಿ ಅದಕ್ಕೆ ದೊಡ್ಡ ವಿದೇಶಿ ಹೂಡಿಕೆಯ ಅಗತ್ಯವಿದೆ.
ಇದನ್ನೂ ಓದಿ: Trans fat foods: 5 ಶತಕೋಟಿ ಜನರು ಈ ವಿಷ ತಿನ್ನುವ ಮೂಲಕ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ!
ಪಾಕಿಸ್ತಾನದಲ್ಲಿ ಭಾರಿ ಹೂಡಿಕೆ!!
ಜಿಯೋ ನ್ಯೂಸ್ ಪ್ರಕಾರ, ಯುಎಇ ಅಧ್ಯಕ್ಷ ಜಾಯೆದ್ ಅಲ್ ನಹ್ಯಾನ್ ಅವರು ಖಾಸಗಿ ಭೇಟಿಗಾಗಿ ಪಾಕಿಸ್ತಾನಕ್ಕೆ ಆಗಮಿಸಿದ್ದು, ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. “ಸಿದ್ಧರಾಗಿರಿ, ಯುಎಇ ಪಾಕಿಸ್ತಾನದಲ್ಲಿ ಭಾರಿ ಹೂಡಿಕೆ ಮಾಡಲಿದೆ” ಎಂದು ಅಧ್ಯಕ್ಷ ಜಾಯೆದ್ ಅಲ್ ನಹ್ಯಾನ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಯುಎಇ-ಪಾಕಿಸ್ತಾನ ಸಂಬಂಧಗಳು ದಶಕಗಳಷ್ಟು ಹಳೆಯವು:
ಯುಎಇ ಅಧ್ಯಕ್ಷ ಜಾಯೆದ್ ಅಲ್ ನಹ್ಯಾನ್ ಅವರು ಉಭಯ ದೇಶಗಳ ನಡುವಿನ ಸಹೋದರತ್ವದ ಸಂಬಂಧಗಳು ಬಹಳ ಹಳೆಯದು ಎಂದು ಹೇಳಿದ್ದಾರೆ. ನನ್ನ ತಂದೆ ಪಾಕಿಸ್ತಾನ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಅಡಿಪಾಯ ಹಾಕಿದವರು. ಯುಎಇ ಯಾವಾಗಲೂ ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಅಧ್ಯಕ್ಷ ಜಾಯೆದ್ ಅಲ್ ನಹ್ಯಾನ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಭರವಸೆ ನೀಡಿದ್ದಾರೆ.
ಯುಎಇ ಅಧ್ಯಕ್ಷ ಝಾಯೆದ್ ಅಲ್ ನಹ್ಯಾನ್ ಅವರು ಪಾಕಿಸ್ತಾನಕ್ಕೆ ಆಗಮಿಸಿದಾಗ ಅವರು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ತಮ್ಮ ಖಾಸಗಿ ಜೆಟ್‌ನಲ್ಲಿ ಕರೆದೊಯ್ದರು ಎಂದು ಮೂಲಗಳು ತಿಳಿಸಿವೆ. ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ: Trans fat foods: 5 ಶತಕೋಟಿ ಜನರು ಈ ವಿಷ ತಿನ್ನುವ ಮೂಲಕ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ!
ಗಮನಾರ್ಹವಾಗಿ, ಜನವರಿ 12 ರಂದು ಯುಎಇ ಪಾಕಿಸ್ತಾನಕ್ಕೆ $ 1 ಶತಕೋಟಿ ಸಾಲವನ್ನು ನೀಡಲು ಒಪ್ಪಿಕೊಂಡಿತು. ಜೊತೆಗೆ ಅಸ್ತಿತ್ವದಲ್ಲಿರುವ $ 2 ಶತಕೋಟಿ ಸಾಲವನ್ನು ರೋಲ್ ಓವರ್ ಮಾಡಿದೆ. ಯುಎಇ ಕೂಡ ಪಾಕಿಸ್ತಾನಕ್ಕೆ ಕೊಂಚ ರಿಲೀಫ್ ನೀಡಿದೆ. ವಿನಾಶಕಾರಿ ಪ್ರವಾಹವು ಪಾಕಿಸ್ತಾನದಲ್ಲಿ ಭಾರಿ ವಿನಾಶವನ್ನು ಉಂಟುಮಾಡಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ 30 ಬಿಲಿಯನ್ ಡಾಲರ್‌ಗೂ ಹೆಚ್ಚು ನಷ್ಟವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.