ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತದ ಅವಶ್ಯಕತೆ ಇದೆ- ಫ್ರಾನ್ಸ್
ಭಾರತ, ಜರ್ಮನಿ, ಬ್ರೆಜಿಲ್ ಮತ್ತು ಜಪಾನ್ ನಂತರ ರಾಷ್ಟ್ರಗಳು ಸಮಕಾಲಿನ ವಾಸ್ತವಿಕ ವಿಷಯಗಳನ್ನು ಪ್ರತಿಬಿಂಬಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸದಸ್ಯ ಸ್ಥಾನಮಾನ ಅಗತ್ಯವೆಂದು ಫ್ರಾನ್ಸ್ ನ ವಿಶ್ವಸಂಸ್ಥೆ ರಾಯಭಾರಿ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಭಾರತ, ಜರ್ಮನಿ, ಬ್ರೆಜಿಲ್ ಮತ್ತು ಜಪಾನ್ ನಂತರ ರಾಷ್ಟ್ರಗಳು ಸಮಕಾಲಿನ ವಾಸ್ತವಿಕ ವಿಷಯಗಳನ್ನು ಪ್ರತಿಬಿಂಬಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸದಸ್ಯ ಸ್ಥಾನಮಾನ ಅಗತ್ಯವೆಂದು ಫ್ರಾನ್ಸ್ ನ ವಿಶ್ವಸಂಸ್ಥೆ ರಾಯಭಾರಿ ಅಭಿಪ್ರಾಯಪಟ್ಟಿದ್ದಾರೆ.
"ಕಾಯ್ದೆಯ ದೃಷ್ಟಿಯಿಂದ, ಫ್ರಾನ್ಸ್ ಮತ್ತು ಜರ್ಮನಿಗಳು ಭದ್ರತಾ ಮಂಡಳಿಯನ್ನು ವಿಸ್ತರಿಸಲು ಮಾತುಕತೆಯನ್ನು ನಡೆಸಿದ್ದು, ಪ್ರಪಂಚದ ಪ್ರಾತಿನಿಧಿಕತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಭದ್ರತಾ ಮಂಡಳಿ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕೆಂದು ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ ನ ಖಾಯಂ ಪ್ರತಿನಿಧಿಯಾಗಿರುವ ಫ್ರಾಂಕೋಯಿಸ್ ಡೆಲಾಟ್ರಿ ಹೇಳಿದರು.
ಜರ್ಮನಿ, ಜಪಾನ್, ಭಾರತ, ಬ್ರೆಜಿಲ್ ಮತ್ತು ವಿಶೇಷವಾಗಿ ಆಫ್ರಿಕಾದ ನ್ಯಾಯೋಚಿತ ಪ್ರಾತಿನಿಧ್ಯದ ಅಗತ್ಯವಿದೆ ಎಂದು ಫ್ರಾನ್ಸ್ ಪರಿಗಣಿಸಿದೆ.ಆದ್ದರಿಂದ ಭದ್ರತಾ ಮಂಡಳಿ ಉತ್ಕೃಷ್ಟ ಪ್ರತಿನಿಧಿತ್ವವನ್ನು ಪಡೆಯಲು ಇದು ನಮಗೆ ಆದ್ಯತೆಯ ವಿಷಯವಾಗಿದೆ ಎಂದು ತಿಳಿಸಿದರು.
ಭಾರತ ಹಲವಾರು ದಶಕಗಳಿಂದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಲು ಯತ್ನಿಸುತ್ತಿದೆ.ಆದರೆ ಭಾರತದ ಈ ಪ್ರಯತ್ನಕ್ಕೆ ಚೀನಾ ದೇಶವು ಬೆಂಬಲ ವ್ಯಕ್ತಪಡಿಸುತ್ತಿಲ್ಲ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸಯ್ಯದ್ ಅಕಬರುದ್ದೀನ್ ಇತ್ತೀಚೆಗೆ ಭದ್ರತಾ ಮಂಡಳಿ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.