ನೂತನ ವರ್ಷದಂದು ಅತಿ ಹೆಚ್ಚು ಮಕ್ಕಳ ಜನನದಲ್ಲಿ ಚೀನಾ ಹಿಂದಿಕ್ಕಿದ ಭಾರತ..!
ಹೊಸ ವರ್ಷದ ದಿನದಂದು ವಿಶ್ವದಾದ್ಯಂತ ಸುಮಾರು 400,000 ಶಿಶುಗಳು ಜನಿಸಿದ್ದು, ವಿಶ್ವದಾದ್ಯಂತ ಈ ಜನನಗಳಲ್ಲಿ 67,385 ರಷ್ಟನ್ನು ಭಾರತ ದಾಖಲಿಸಿದೆ ಎಂದು ವಿಶ್ವಸಂಸ್ಥೆ ಮಕ್ಕಳ ಸಂಸ್ಥೆ ತಿಳಿಸಿದೆ.
ನವದೆಹಲಿ: ಹೊಸ ವರ್ಷದ ದಿನದಂದು ವಿಶ್ವದಾದ್ಯಂತ ಸುಮಾರು 400,000 ಶಿಶುಗಳು ಜನಿಸಿದ್ದು, ವಿಶ್ವದಾದ್ಯಂತ ಈ ಜನನಗಳಲ್ಲಿ 67,385 ರಷ್ಟನ್ನು ಭಾರತ ದಾಖಲಿಸಿದೆ ಎಂದು ವಿಶ್ವಸಂಸ್ಥೆ ಮಕ್ಕಳ ಸಂಸ್ಥೆ ತಿಳಿಸಿದೆ.
ಹೊಸ ವರ್ಷದ ದಿನದಂದು ವಿಶ್ವದಾದ್ಯಂತ ಅಂದಾಜು 392,078 ಶಿಶುಗಳು ಜನಿಸಿವೆ ಎಂದು ಯುನಿಸೆಫ್ ತಿಳಿಸಿದೆ. ಇದರಲ್ಲಿ, ಅಂದಾಜು 67,385 ಶಿಶುಗಳು ಭಾರತದಲ್ಲಿ ಜನಿಸಿದ್ದು, ಇದು ಜಾಗತಿಕವಾಗಿ ಅತಿ ಹೆಚ್ಚು ಎನ್ನಲಾಗಿದೆ. ಇನ್ನು 46,299 ಜನನಗಳೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ.
"ಹೊಸ ವರ್ಷ ಮತ್ತು ಹೊಸ ದಶಕದ ಆರಂಭವು ನಮ್ಮ ಭವಿಷ್ಯಕ್ಕಾಗಿ ಮಾತ್ರವಲ್ಲದೆ ನಮ್ಮ ನಂತರ ಬರುವವರ ಭವಿಷ್ಯಕ್ಕಾಗಿ ನಮ್ಮ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಒಂದು ಅವಕಾಶವಾಗಿದೆ" ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಹೇಳಿದರು.
ಪೆಸಿಫಿಕ್ನ ಫಿಜಿ 2020 ರ ಮೊದಲ ಮಗುವನ್ನು ಹೆರಿಗೆ ಮಾಡಿದರೆ, ಹೊಸ ವರ್ಷದ ದಿನದ ಕೊನೆಯ ಹೆರಿಗೆ ಯುಎಸ್ ನದ್ದಾಗಿದೆ. ಜಾಗತಿಕವಾಗಿ, ಭಾರತದಲ್ಲಿ (67,385), ಚೀನಾ (46,299), ನೈಜೀರಿಯಾ (26,039), ಪಾಕಿಸ್ತಾನ (16,787), ಇಂಡೋನೇಷ್ಯಾ (13,020), ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (10,452), ಎಂಟು ದೇಶಗಳಲ್ಲಿ ಈ ಅರ್ಧದಷ್ಟು ಜನನಗಳು ನಡೆದಿವೆ ಎಂದು ಅಂದಾಜಿಸಲಾಗಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (10,247) ಮತ್ತು ಇಥಿಯೋಪಿಯಾ (8,493) ದಲ್ಲಿ ಜನನಗಳಾಗಿವೆ.
ಪ್ರತಿ ಜನವರಿಯಲ್ಲಿ, ಯುನಿಸೆಫ್ ಹೊಸ ವರ್ಷದ ದಿನದಂದು ಜನಿಸಿದ ಶಿಶುಗಳನ್ನು ಆಚರಿಸುತ್ತದೆ, ಇದು ಪ್ರಪಂಚದಾದ್ಯಂತ ಹೆರಿಗೆಗೆ ಶುಭ ದಿನವಾಗಿದೆ ಎಂದು ಹೇಳಿದೆ.