ನವದೆಹಲಿ: ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದಿನ್ ರವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ ಪಾಕಿಸ್ತಾನದ ಧ್ವಜ ಹಾಗೂ ಅಧ್ಯಕ್ಷ ಮಮ್ನೂನ್ ಹುಸೈನ್ ರವರ ಫೋಟೋಗ್ರಾಪ್ ಗಳನ್ನು ಹ್ಯಾಕರ್ಸ್ ಪೋಸ್ಟ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಭಾನುವಾರದಂದು ಹ್ಯಾಕ್ ಆದಂತ ಸಂದರ್ಭದಲ್ಲಿ ಖಚಿತಪಡಿಸಿದ ಖಾತೆಗೆ ಇರುವ ನೀಲಿ ಮಾರ್ಕ್ ಕೂಡ ಸಯ್ಯದ್ ಅಕ್ಬರುದ್ದೀನ್ ರವರ ಖಾತೆಯಲ್ಲಿ ನಾಪತ್ತೆಯಾಗಿತ್ತು, ನಂತರ ಇದನ್ನು ಟ್ವಿಟ್ಟರ್ ಗಮನಕ್ಕೆ ತಂದ ನಂತರ ಖಾತೆಯನ್ನು ಸರಿಪಡಿಸಿ ಅಸಂಬದ್ಧ ಟ್ವೀಟ್ ಗಳನ್ನು ಅಳಿಸಿಹಾಕಲಾಯಿತು.


ಇತ್ತೀಚಿಗೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು ಸೈಬರ್ ದಾಳಿಯ ಮೂಲಕ ನಿರಂತರವಾಗಿ ಭಾರತದ ಸರ್ಕಾರಿ ಖಾತೆಗಳಿಗೆ ಹ್ಯಾಕ್ ಮಾಡುವ ಗುರಿ ಹೊಂದಿದ್ದಾರೆ. ಇದರ ಭಾಗವಾಗಿ ಈ ಹಿಂದೆ 2016 ರಲ್ಲಿ ಒಟ್ಟು 199 ಸರ್ಕಾರಿ ವೆಬ್ಸೈಟ್ ಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಗೃಹ ಸಚಿವಾಲಯ ಸಂಸತ್ತಿಗೆ ತಿಳಿಸಿತ್ತು. ಇದುವರೆಗೆ 2013ರಿಂದ 2016 ರವರೆಗೆ 700 ಕ್ಕೂ ಹೆಚ್ಚು ವೆಬ್ಸೈಟ್ ಗಳನ್ನು ಹ್ಯಾಕ್ ಮಾಡಲಾಗಿದೆ.