ಕ್ಯಾನ್ಬೆರಾ: ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್(Australia's Queensland)ನಲ್ಲಿ ವ್ಯಕ್ತಿಯೊಬ್ಬ ತನ್ನ ಮಾಲೀಕನ ವಿರುದ್ಧವೇ 5 ಮಿಲಿಯನ್ ಡಾಲರ್ ಗೆ ಮೊಕದ್ದಮೆ ಹೂಡಿದ್ದು, ನ್ಯಾಯಾಲಯ ಆತನ ಪರವಾಗಿ ತೀರ್ಪು ನೀಡಿದೆ. ವಾಸ್ತವವಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ, ಮಾಲೀಕರ ಹೊಲದಲ್ಲಿರುವ ಬಾಳೆಮರದಿಂದ ಸುಮಾರು 70 ಕೆಜಿ ಬಾಳೆಹಣ್ಣುಗಳು ತನ್ನ ಮೇಲೆ ಬಿದ್ದಿವೆ ಎಂದು ಆರೋಪಿಸಿದ್ದ. ಇದರಿಂದ ತನಗೆ ತೀವ್ರ ತೆರನಾದ ಗಾಯಗಳಾಗಿರುವುದಾಗಿಯೂ ಹಾಗೂ ತನಗೆ ಪರಿಹಾರವಾಗಿ 5 ಲಕ್ಷ ಡಾಲರ್‌ಗಳನ್ನು ನೀಡಬೇಕೆಂದು ಆತ ಒತ್ತಾಯಿಸಿದ್ದ.


COMMERCIAL BREAK
SCROLL TO CONTINUE READING

2016ರಲ್ಲಿ ಈ ಘಟನೆ ನಡೆದಿತ್ತು


ವರದಿಗಳ ಪ್ರಕಾರ ಜೈಮ್ ಲಾಂಗ್‌ಬಾಟಮ್(Jaime Longbottom)ಎಂಬ ವ್ಯಕ್ತಿ ಕ್ವೀನ್ಸ್‌ ಲ್ಯಾಂಡ್‌ನ ಕುಕ್‌ಟೌನ್ ಬಳಿ ಇರುವ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಆತನ ಮೇಲೆ ಸುಮಾರು 70 ಕೆಜಿ ತೂಕದ ಬಾಳೆಹಣ್ಣುಗಳು ಬಿದ್ದಿದ್ದವು. ಎಲ್ & ಆರ್ ಕಾಲಿನ್ಸ್ ತೋಟ(L&R Collins farm)ದಲ್ಲಿ ಬಾಳೆ ಕಟಾವು ಮಾಡುವಾಗ ಜೂನ್ 2016ರಲ್ಲಿ ಈ ಘಟನೆಯು ನಡೆದಿತ್ತು. ಇದರ ನಂತರ ತನಗೆ ಪರಿಹಾರ ನೀಡುವಂತೆ ಆತ ನ್ಯಾಯಾಲಯದ ಮೊರೆ ಹೋಗಿದ್ದ. ಇದೀಗ ನ್ಯಾಯಲಯವು ಆತನ ಪರಿವಾಗಿಯೇ ತೀರ್ಪು ನೀಡಿದೆ.


ಇದನ್ನೂ ಓದಿ: ಅಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದಲ್ಲಿ ಸ್ಫೋಟ, 12 ಸಾವು; ಹಲವರಿಗೆ ಗಾಯ


ಕಾರ್ಮಿಕನ ಈ ವಾದಕ್ಕೆ ಸಿಕ್ತು ದೊಡ್ಡ ಮೊತ್ತ


ದೊಡ್ಡ ದೊಡ್ಡ ಮರಗಳಿಂದ ಬಾಳೆಹಣ್ಣು(Banana)ಗಳನ್ನು ಹೇಗೆ ಸಂಗ್ರಹಿಸುವುದು ಎಂಬುದರ ಕುರಿತು ಸಮರ್ಪಕ ತರಬೇತಿ ನೀಡದೆ ಕಂಪನಿಯು ಅಸಡ್ಡೆ ತೋರಿದೆ ಎಂದು ಕೆಲಸಗಾರನು ವಾದಿಸಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕ್ಯಾಥರೀನ್ ಹೋಮ್ಸ್, ‘ಬಾಳೆ ಮರ ಅಸಾಮಾನ್ಯವಾದ ಎತ್ತರದಲ್ಲಿದೆ ಮತ್ತು ಅದರಲ್ಲಿರುವ ಬಾಳೆಹಣ್ಣುಗಳು ಕೂಡ ಎತ್ತರದಲ್ಲಿಯೇ ಇದ್ದವು. ಬಾಳೆಹಣ್ಣಿನ ಗೊನೆ(Banana Fruit) ಕಾರ್ಮಿಕನ ತಲೆಯ ಮೇಲೆ ಬೀಳುತ್ತಿದ್ದಂತೆಯೇ ಆತ ಮೇಲಿನಿಂದ ಕೆಳಕ್ಕೆ ಬಿದ್ದಿದ್ದಾನೆ. ಘಟನೆ ನಂತರ ಆತನನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಬಾಳೆಹಣ್ಣು ತಲೆಮೇಲೆ ಬಿದ್ದ ಪರಿಣಾಮ ಆತ ಮತ್ತೆ ತನ್ನ ಕೆಲಸಕ್ಕೆ ಮರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಆತನಿಗೆ ನೀವು ಪರಿಹಾರ ನೀಡಲೇಬೇಕು’ ಎಂದು ಆದೇಶಿಸಿದ್ದರು.


70 ಕೆಜಿ ಬಾಳೆಹಣ್ಣಿನ ಚಮತ್ಕಾರ


ಕಾರ್ಮಿಕನ ತಲೆಮೇಲೆ ಬಿದ್ದ ಬಾಳೆಹಣ್ಣಿನ ತೂಕ ಸುಮಾರು 70 ಕೆಜಿ ಎಂದು ಹೇಳಲಾಗಿದೆ. ಆ ಕಾರ್ಮಿಕ ನಂತರ ಕೆಲಸ ಮಾಡದ ಪರಿಸ್ಥಿತಿ ತಲುಪಿದ್ದ. ಏಕೆಂದರೆ ಬಾಳೆಹಣ್ಣು ಬಿದ್ದು ಆದ ಗಾಯಗಳಿಂದ ಆತನಿಗೆ ಆತನಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪ್ರಕರಣದ ವಿಚಾರಣೆಯ ನಂತರ ನ್ಯಾಯಾಧೀಶ ಹೋಮ್ಸ್, ಸದ್ಯದ ಪರಿಸ್ಥಿತಿಯಲ್ಲಿ ಕೆಲಸಗಾರನಿಗೆ ನಿಜಕ್ಕೂ ಪರಿಹಾರದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ತಮ್ಮ ಅಂತಿಮ ಆದೇಶದಲ್ಲಿ ಅವರು ಕಾರ್ಮಿಕನಿಗೆ ಮಾಲೀಕರು 502,740 ಅಮೆರಿಕನ್ ಡಾಲರ್ ಅಂದರೆ ಸುಮಾರು 3,77,15,630 ರೂ. ನೀಡುವಂತೆ ಸೂಚಿಸಿದ್ದರು.


ಇದನ್ನೂ ಓದಿ: Nobel Peace Prize 2021: ಮಾರಿಯಾ ರೆಸ್ಸಾ ಮತ್ತು ಡಿಮಿಟ್ರಿ ಮುರಾಟೋವ್ ಗೆ ನೊಬೆಲ್ ಶಾಂತಿ ಪ್ರಶಸ್ತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.