ಅಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದಲ್ಲಿ ಸ್ಫೋಟ, 12 ಸಾವು; ಹಲವರಿಗೆ ಗಾಯ

ಈ ಹಿಂದೆ ಅಕ್ಟೋಬರ್ 3 ರಂದು, ಕಾಬೂಲ್‌ನ ಮಸೀದಿಯ ಹೊರಗೆ ಸ್ಫೋಟ ಸಂಭವಿಸಿತ್ತು.  ಈ ಸ್ಫೋಟದಲ್ಲಿ ಐದು ಮಂದಿ ಸಾವನ್ನಪ್ಪಿದ್ದರು. 

Written by - Ranjitha R K | Last Updated : Oct 8, 2021, 06:47 PM IST
  • ಅಫ್ಘಾನಿಸ್ತಾನದ ಕುಂದುಂಜ್‌ ಪ್ರಾಂತ್ಯದಲ್ಲಿ ಶುಕ್ರವಾರ ಭಾರೀ ಸ್ಫೋಟ
  • ಹನ್ನೆರಡು ಮಂದಿ ಸಾವು, ಹಲವರಿಗೆ ಗಾಯ
  • ಭಾನುವಾರವೂ ಸಂಭವಿಸಿತ್ತು ಸ್ಫೋಟ
ಅಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದಲ್ಲಿ  ಸ್ಫೋಟ, 12 ಸಾವು; ಹಲವರಿಗೆ ಗಾಯ title=
ಅಫ್ಘಾನಿಸ್ತಾನದ ಕುಂದುಂಜ್‌ ಪ್ರಾಂತ್ಯದಲ್ಲಿ ಶುಕ್ರವಾರ ಭಾರೀ ಸ್ಫೋಟ (file photo)

ಕುಂದುಂಜ್‌ : ಅಫ್ಘಾನಿಸ್ತಾನದ  (Afghanistan) ಕುಂದುಂಜ್‌  (Kunduz) ಪ್ರಾಂತ್ಯದಲ್ಲಿ ಶುಕ್ರವಾರ ಭಾರೀ ಸ್ಫೋಟ (Bomb Blast) ಸಂಭವಿಸಿದೆ. ಘಟನೆಯಲ್ಲಿ 12 ಜನರು ಮೃತಪಟ್ಟಿದ್ದಾರೆ. ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಆಡಳಿತದ ಪ್ರಕಾರ, ಶಿಯಾ ಮಸೀದಿಯ (Shia Mosque)  ಬಳಿ ಸ್ಫೋಟ ಸಂಭವಿಸಿದೆ. ಪ್ರಸ್ತುತ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಮಾಡಲಾಗುತ್ತಿದೆ.

ಭಾನುವಾರವೂ ಸಂಭವಿಸಿತ್ತು ಸ್ಫೋಟ : 
ಈ ಹಿಂದೆ ಅಕ್ಟೋಬರ್ 3 ರಂದು, ಕಾಬೂಲ್‌ನ ಮಸೀದಿಯ (Kabul Mosque) ಹೊರಗೆ ಸ್ಫೋಟ ಸಂಭವಿಸಿತ್ತು.  ಈ ಸ್ಫೋಟದಲ್ಲಿ ಐದು ಮಂದಿ ಸಾವನ್ನಪ್ಪಿದ್ದರು. ಸಂಘಟನೆಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ತಾಯಿಯ ಸಾವಿಗೆ ಸಂತಾಪ ಸೂಚಿಸಲು ಜನರು ಮಸೀದಿಯಲ್ಲಿ ಜಮಾಯಿಸಿದ್ದರು ಎಂದು ತಾಲಿಬಾನ್ ಅಧಿಕಾರಿ ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆಗಳೂ ಹೊತ್ತುಕೊಂಡಿಲ್ಲ. ಆದರೆ ಘಟನೆಯ ಹಿಂದೆ, ಇಸ್ಲಾಮಿಕ್ ಸ್ಟೇಟ್ (Islamic state) ಗುಂಪಿನ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಈ ಸಂಘಟನೆ, ಕಾಬೂಲ್ ಅನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ ತಾಲಿಬಾನ್ (Taliban) ವಿರುದ್ಧ ದಾಳಿಗಳನ್ನು ತೀವ್ರಗೊಳಿಸಿದೆ.

ಇದನ್ನೂ ಓದಿ : Corona Vaccine: ಭಾರತದ ಕಠಿಣತೆಗೆ ತಲೆಬಾಗಿದ ಬ್ರಿಟನ್, ಲಸಿಕೆ ಪಡೆದ ಭಾರತೀಯರಿಗೆ ನೀಡಿದೆ ಈ ವಿನಾಯಿತಿ

ಆ ಸ್ಫೋಟದ ಕೆಲವು ಗಂಟೆಗಳ ನಂತರ, ಇಸ್ಲಾಮಿಕ್ ಸ್ಟೇಟ್ ಅಡಗುತಾಣದ ಮೇಲೆ ದಾಳಿ ಮಾಡುವ ಮೂಲಕ ತಮ್ಮ ಜನರ ಸಾವಿಗೆ ಪ್ರತೀಕಾರ ತೆಗೆದುಕೊಂಡಿದೆ.  ಕಾಬೂಲ್‌ನ (Kabul) ಉತ್ತರದಲ್ಲಿರುವ ಖೈರ್ ಖಾನಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಕೇಂದ್ರದ ಮೇಲೆ ತಾಲಿಬಾನ್ ಪಡೆಗಳು ದಾಳಿ ನಡೆಸಿವೆ ಎಂದು ಮುಜಾಹಿದ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ, ಎಷ್ಟು ಮಂದಿ ಹತರಾಗಿದ್ದಾರೆ ಎನ್ನುವ ಮಾಹಿತಿಯನ್ನು ಮಾತ್ರ ಬಹುರಂಗಪಡಿಸಿರಲಿಲ್ಲ. 

ಆಕ್ರಮಣದ ನಂತರ ಅತ್ಯಂತ ಅಪಾಯಕಾರಿ ಸ್ಫೋಟ:
ತಜ್ಞರ ಪ್ರಕಾರ, ತಾಲಿಬಾನ್ ಅಫ್ಘಾನಿಸ್ತಾನವನ್ನು (Afghanistan) ವಶಪಡಿಸಿಕೊಂಡ ನಂತರ ಭಾನುವಾರದ ಸ್ಫೋಟದ ದಾಳಿ ಅತ್ಯಂತ ಅಪಾಯಕಾರಿಯಾಗಿತ್ತು. ಈ ಹಿಂದೆ ಆಗಸ್ಟ್ 26 ರಂದು, ಇಸ್ಲಾಮಿಕ್ ಸ್ಟೇಟ್ ಗುಂಪು ಭಯಾನಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು, ಇದರಲ್ಲಿ ಕಾಬೂಲ್ ವಿಮಾನ ನಿಲ್ದಾಣದ (Kabul airport) ಹೊರಗೆ 169 ಕ್ಕೂ ಹೆಚ್ಚು ಅಫಘಾನ್ ಮತ್ತು 13 ಅಮೆರಿಕನ್ ಸೈನಿಕರು ಹತರಾಗಿದ್ದರು. 

ಇದನ್ನೂ ಓದಿ : Nobel Prize 2021 : ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾಹ್ 'ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ'

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News