ಬಿಲಿಯನೇರ್ ಪವರ್ ಕಪಲ್ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ 27 ವರ್ಷಗಳ ಕಾಲ ಜೊತೆಗಿದ್ದು ಈಗ ಬೇರೆಯಾಗುವ ನಿರ್ಧಾರವನ್ನು ಮೇ 4 ರಂದು ಘೋಷಿಸಿದಾಗ ಇಡೀ ಜಗತ್ತನ್ನು ದಿಗ್ಭ್ರಮೆಗೊಳಿಸಿದರು. ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಈಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಮತ್ತು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ವಿಚ್ಛೇದನವು ಬಿಲ್ ಗೇಟ್ಸ್ ಮತ್ತು ಮೆಲಿಂಡಾ(Bill Gates and Melinda Gates) ಒಡೆತನದ USD 140 ಶತಕೋಟಿ ಆಸ್ತಿಯ ವಿಭಜನೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿತು. ಗಮನಿಸಬೇಕಾದ ಸಂಗತಿಯೆಂದರೆ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ವಾಷಿಂಗ್ಟನ್‌ನಲ್ಲಿ ಒಂದು ಅರಮನೆಯ ಹೊಂದಿದ್ದು ಮತ್ತು ಈ ಆಸ್ತಿ 120 ಮಿಲಿಯನ್ ಡಾಲರ್‌ಗಳಷ್ಟು ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಈ ಬೃಹತ್ ಎಸ್ಟೇಟ್ ಗೆ  "Xanadu 2.0" ಎಂದು ಹೆಸರಿಸಲಾಗಿದೆ. ಇದು ಖಾಸಗಿ ಕಡಲತೀರವನ್ನು ಸಹ ಹೊಂದಿದೆ.


ಇದನ್ನೂ ಓದಿ : Viarl News: ಪಿಜ್ಜಾದಲ್ಲಿ ನಟ್ಟು-ಬೋಲ್ಟು ಕಂಡು ಹೌಹಾರಿದ ಮಹಿಳೆ..!


ವಿಶ್ವದ ಅತ್ಯಂತ ಆಧುನಿಕ ಖಾಸಗಿ ನಿವಾಸಗಳಲ್ಲಿ ಒಂದಾಗಿರುವ ಬಿಲ್ ಗೇಟ್ಸ್ ಅರಮನೆಯ ಒಳಗಿನ ಫೋಟೋಗಳನ್ನ ನೋಡೋಣ ಬನ್ನಿ..


1. Xanadu 2.0 ಅರಮನೆಯ ನೆಟ್ ವರ್ತ್ 


ಈ ಅರಮನೆ(Xanadu 2.0 Home)ಯು 66,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಬಿಲ್ ಗೇಟ್ಸ್ 1988 ರಲ್ಲಿ ಸುಮಾರು 2 ಮಿಲಿಯನ್ ಯುಎಸ್ ಡಾಲರ್ ನೀಡಿ ಈ ಭೂಮಿಯನ್ನು ಖರೀದಿಸಿದರು. Xanadu 2.0 ಅರಮನೆ ನಿರ್ಮಾಣವನ್ನು ಪೂರ್ಣಗೊಳಿಸಲು ಸುಮಾರು ಏಳು ವರ್ಷ ತೆಗೆದುಕೊಂಡಿತು.
 
2. Xanadu 2.0 ಅನ್ನು 'ಭೂಮಿ-ಆಶ್ರಯ ಮನೆ' ಎಂದೂ ಕರೆಯುತ್ತಾರೆ


Xanadu 2.0 ಅನ್ನು "ಭೂಮಿ-ಆಶ್ರಯ ಮನೆ"('Earth-sheltered house) ಎಂದು ಕರೆಯಲಾಗುತ್ತದೆ ಏಕೆಂದರೆ ಅದು ಇರುವ ಬೆಟ್ಟದಲ್ಲಿ ಭಾಗಶಃ ಸಮಾಧಿ ಮಾಡಲಾಗಿದೆ. ಮನೆ ಕಡಿಮೆ ವೆಚ್ಚ ಮತ್ತು ಪರಿಸರ ಸ್ನೇಹಿಯಾಗಿದೆ.


ಇದನ್ನೂ ಓದಿ : Ukraine Plane Hijacked: ಕಾಬೂಲ್ ನಿಂದ ಹೋರಟ ಉಕ್ರೈನ್ ವಿಮಾನ ಹೈಜಾಕ್! ವಿಮಾನ ಅಪಹರಣ ನಿರಾಕರಿಸಿದ ಕೀವ್ ?


3. Xanadu 2.0 - ಒಳಾಂಗಣ


ಅರಮನೆಯು ಒಟ್ಟು 24 ಸ್ನಾನಗೃಹಗಳನ್ನು(Bath Room) ಹೊಂದಿದೆ, ಅದರಲ್ಲಿ 10 ಪೂರ್ಣ ಸ್ನಾನಗೃಹಗಳು ಮತ್ತು 14 ಅರ್ಧ ಸ್ನಾನಗೃಹಗಳು. ಮನೆಯಲ್ಲಿ 7 ಮಲಗುವ ಕೋಣೆಗಳಿವೆ.


4. Xanadu 2.0 - 60 ಅಡಿ ಪೂಲ್


ಈ ಐಷಾರಾಮಿ ಅರಮನೆಯಲ್ಲಿ 60 ಅಡಿಗಳಷ್ಟು ಪೂಲ್ ಅನ್ನು ಪಳೆಯುಳಿಕೆ-ಮೋಟಿಫ್ ಮಹಡಿ ಮತ್ತು ನೀರೊಳಗಿನ ಸಂಗೀತ ವ್ಯವಸ್ಥೆಯನ್ನು ಮಾಡಲಾಗಿದೆ.


ಇದನ್ನೂ ಓದಿ : Taliban: ಜೀನ್ಸ್ ಧರಿಸಿದರೆ ಥಳಿತ, ನೇಲ್ ಪಾಲಿಶ್ ಹಾಕಿದರೆ ಸಿಗಲಿದೆ ಭಯಾನಕ ಶಿಕ್ಷೆ
 
5.  Xanadu 2.0 - ರಿಸೆಪ್ಷನ್ ಹಾಲ್


' Xanadu 2.0' ನ ರಿಸೆಪ್ಷನ್ ಹಾಲ್(Reception Hall) 2,300-ಚದರ ಅಡಿ ವಿಸ್ತಾರವಾಗಿದೆ. ಸಭಾಂಗಣವು 200 ಅತಿಥಿಗಳಿಗೆ ಕಾಕ್ಟೇಲ್ ಪಾರ್ಟಿಗೆ ಮತ್ತು ಸುಮಾರು 150 ಅತಿಥಿಗಳಿಗೆ ಔತಣಕೂಟಕ್ಕೆ ಅವಕಾಶ ಕಲ್ಪಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.