Viarl News: ಪಿಜ್ಜಾದಲ್ಲಿ ನಟ್ಟು-ಬೋಲ್ಟು ಕಂಡು ಹೌಹಾರಿದ ಮಹಿಳೆ..!

ಇಂಗ್ಲೆಂಡಿನಲ್ಲಿ ಪ್ರಸಿದ್ಧ ಡೊಮಿನೋಸ್‌ ರೆಸ್ಟೋರೆಂಟ್ ನಿಂದ ಪಿಜ್ಜಾ ಆರ್ಡರ್ ಮಾಡಿದ ಮಹಿಳೆಗೆ ಆಕೆ ಎಂದಿಗೂ ನಿರೀಕ್ಷಿಸದಂತಹ ಪಿಜ್ಜಾ ದೊರೆತಿದೆ.

Written by - Puttaraj K Alur | Last Updated : Aug 24, 2021, 02:52 PM IST
  • ಆರ್ಡರ್ ಮಾಡಿದ ಪಿಜ್ಜಾದಲ್ಲಿ ಕಂಡುಬಂತು ನಟ್ಟು-ಬೋಲ್ಟು
  • ಪ್ರಸಿದ್ಧ ಡೊಮಿನೋಸ್ ರೆಸ್ಟೋರೆಂಟ್ ವಿರುದ್ಧ ಮಹಿಳೆಯ ಆಕ್ರೋಶ
  • ಪಿಜ್ಜಾ ಆರ್ಡರ್ ಮಾಡುವಾಗ ತುಂಬಾ ಜಾಗರೂಕರಾಗಿರಿ ಎಂದ ಮಹಿಳೆ
Viarl News: ಪಿಜ್ಜಾದಲ್ಲಿ ನಟ್ಟು-ಬೋಲ್ಟು ಕಂಡು ಹೌಹಾರಿದ ಮಹಿಳೆ..! title=
ಪಿಜ್ಜಾದಲ್ಲಿ ಕಂಡುಬಂತು ನಟ್ಟು-ಬೋಲ್ಟು (Photo Courtesy: @DNA)

ನವದೆಹಲಿ: ಪಿಜ್ಜಾ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ಪಿಜ್ಜಾ(Pizza) ಹೆಸರು ಕೇಳುತ್ತಿದ್ದಂತೆ ಬಾಯಿ ನೀರೂರುತ್ತೆ. ಪಿಜ್ಜಾ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಮತ್ತು ನೆಚ್ಚಿನ ಆಹಾರವಾಗಿದೆ. ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನವರಿಗೂ ಪಿಜ್ಜಾ ಬಲುಇಷ್ಟ. ಚಿಕನ್ ಪಿಜ್ಜಾ, ಪೆಪ್ಪೆರೋನಿ ಪಿಜ್ಜಾ ಅಥವಾ ಸರಳ ಚೀಸ್ ಪಿಜ್ಜಾ ಹೀಗೆ ಅನೇಕ ವಿವಿಧ ಪಿಜ್ಜಾಗಳನ್ನು ಜನರು ಇಷ್ಟಪಡುತ್ತಾರೆ. ವಿಲಕ್ಷಣ ಘಟನೆಯೊಂದರಲ್ಲಿ ಮಹಿಳೆಯೊಬ್ಬರಿಗೆ ಪಿಜ್ಜಾ ಜೊತೆಗೆ ನಟ್ಟು-ಬೋಲ್ಟು ಬಂದಿದ್ದು, ಇದಕ್ಕೆ ಆಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾಳೆ.  

ಹೌದು, ಈ ಘಟನೆ ನಡೆದಿರುವುದು ಇಂಗ್ಲೆಂಡಿನಲ್ಲಿ. ಪ್ರಸಿದ್ಧ ಡೊಮಿನೋಸ್‌ ರೆಸ್ಟೋರೆಂಟ್ (Dominos Restaurant)ನಿಂದ ಪಿಜ್ಜಾ ಆರ್ಡರ್ ಮಾಡಿದ ಮಹಿಳೆಗೆ ಆಕೆ ಎಂದಿಗೂ ನಿರೀಕ್ಷಿಸದಂತಹ ಪಿಜ್ಜಾ ದೊರೆತಿದೆ. ಲಂಕಾಶೈರ್‌ನಲ್ಲಿ ವಾಸಿಸುತ್ತಿರುವ ಗೆಮ್ಮಾ ಬಾರ್ಟನ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಾನು ಡೊಮಿನೋಸ್‌ನಿಂದ ಪಿಜ್ಜಾ ಆರ್ಡರ್ ಮಾಡಿದ್ದನ್ನು ಹಂಚಿಕೊಂಡಿದ್ದಾಳೆ. ತಾನು ಸ್ವೀಕರಿಸಿದ ಪಿಜ್ಜಾದಲ್ಲಿ ಡೊಮಿನೋಸ್ ನವರು ಹೇಗೆ ನಟ್ಟು-ಬೋಲ್ಟು ಕಳಿಸಿದ್ದಾರೆ ನೋಡಿ ಅಂತಾ ಅದರ ಫೋಟೋ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ: Taliban: ಜೀನ್ಸ್ ಧರಿಸಿದರೆ ಥಳಿತ, ನೇಲ್ ಪಾಲಿಶ್ ಹಾಕಿದರೆ ಸಿಗಲಿದೆ ಭಯಾನಕ ಶಿಕ್ಷೆ

ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಗಮನ ಹರಿಸದ ಡೊಮಿನೋಸ್ ರೆಸ್ಟೋರೆಂಟ್ (Dominos Restaurant)ಗೆ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಡೊಮಿನೋಸ್ ಪಿಜ್ಜಾ ಪಡೆದ ನನಗೆ ನಿಜವಾಗಿಯೂ ಶಾಕ್ ಆಗಿತ್ತು. ಖುಷಿಯಿಂದ ಸವಿಯಬೇಕೆಂದು ಆರ್ಡರ್ ಮಾಡಿದ ಪಿಜ್ಜಾದಲ್ಲಿ ಡೊಮಿನೋಸ್ ನವರು ನನಗೆ ನಟ್ಟು-ಬೋಲ್ಟು ಹಾಕಿ ಕೊಟ್ಟಿದ್ದಾರೆ. ಪಿಜ್ಜಾ ಪ್ಯಾಕ್ ಓಪನ್ ಮಾಡುತ್ತಲೇ ನನಗೆ ಗಾಬರಿಯಾಯಿತು. ನಾನು ಅರ್ಧದಷ್ಟು ಪಿಜ್ಜಾ ತಿಂದಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಡೊಮಿನೋಸ್ ರೆಸ್ಟೋರೆಂಟ್ ನವರು ಗುಣಮಟ್ಟದ ಪರೀಕ್ಷೆ ಮಾಡುತ್ತಾರೆಯೇ? ಮಾಡಿದರೆ ಪಿಜ್ಜಾದಲ್ಲಿ ನಟ್ಟು ಮತ್ತು ಬೋಲ್ಟು ಹೇಗೆ ಬಂತು’ ಅಂತಾ ಅವರು ಪ್ರಶ್ನಿಸಿದ್ದಾರೆ.

‘ದಯವಿಟ್ಟು ತಿನ್ನುವ ಮೊದಲು ಸಂಪೂರ್ಣವಾಗಿ ನಿಮ್ಮ ಪಿಜ್ಜಾ(Pizza)ಗಳನ್ನು ಎರಡೆರಡು ಬಾರಿ ಪರೀಕ್ಷಿಸಿ. ನನಗೆ ನೀಡಿದ್ದ ಪಿಜ್ಜಾವನ್ನು ಸಂಪೂರ್ಣವಾಗಿ ಸೇವಿಸಿದ್ದರೆ ನನ್ನ ಗತಿ ಏನಾಗಬೇಡಿ ಹೇಳಿ..? ಡೊಮಿನೋಸ್ ನವರ ಈ ಸೇವೆಯಿಂದ ನನಗೆ ತುಂಬಾ ಬೇಸರವಾಗಿದೆ’ ಅಂತಾ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ. ಇದಲ್ಲದೆ ನೀವು ಯಾರಾದರೂ ಪಿಜ್ಜಾ ಆರ್ಡರ್ ಮಾಡುವಾಗ ತುಂಬಾ ಜಾಗರೂಕರಾಗಿರಿ. ಉಸಿರುಗಟ್ಟಿಸುವ ಅಪಾಯವನ್ನು ತಂದುಕೊಳ್ಳಬೇಡಿ ಅಂತಾ ಮಹಿಳೆ ಮನವಿ ಮಾಡಿದ್ದಾಳೆ.

ಇದನ್ನೂ ಓದಿ: Viral News: ಚಿಂಪಾಜಿಯೊಡನೆ ಸಂಬಂಧ; ಮಹಿಳೆಗೆ ಮೃಗಾಲಯಕ್ಕೆ ಬರದಂತೆ ನಿಷೇಧ..!

ಮಹಿಳೆ ನಟ್ಟು-ಬೋಲ್ಟು(Nuts and Bolts)ಗಳಿರುವ ಪಿಜ್ಜಾದ ಫೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟಿಜನ್ ಗಳು ಡೊಮಿನೋಸ್ ರೆಸ್ಟೋರೆಂಟ್ ವಿರುದ್ಧ ಮುಗಿಬಿದ್ದಿದ್ದಾರೆ. ಮತ್ತೊಬ್ಬರ ಜೀವಕ್ಕೆ ಅಪಾಯ ತಂದೊಡ್ಡುವ ಈ ನಿರ್ಲಕ್ಷ್ಯ ಸಲ್ಲದು ಅಂತಾ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದೊಡ್ಡ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಡೊಮಿನೋಸ್ ನವರು ಮಹಿಳೆ ಬಳಿ ಕ್ಷಮೆಯಾಚಿಸಿದ್ದು, ಇನ್ನೊಮ್ಮೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಸಮಜಾಯಿಸಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News