ವಿಮಾನದಲ್ಲಿ Wine ಸಿಕ್ಕಿಲ್ಲ ಎಂದು ಈ Instagram Model ಮಾಡಿದ ಕೆಲಸ ಏನು ಗೊತ್ತಾ ?
ಇನ್ಸ್ಟಾಗ್ರಾಮ್ ಮಾಡೆಲ್ ಹನ್ನಾ ಲೀ ಪಿಯರ್ಸನ್ ವಿರುದ್ಧ ಏರ್ ನ್ಯೂಜಿಲೆಂಡ್ನಲ್ಲಿ ಪ್ರಯಾಣ ಬೆಳೆಸಿದ್ದಳು. ವಿಮಾನದಲ್ಲಿ ಊಟದ ಸಮಯದಲ್ಲಿ ವಿಮಾನ ಸಿಬ್ಬಂದಿ ಆಹಾರ ಪೂರೈಸಿದ್ದಾರೆ.
ವೆಲ್ಲಿಂಗ್ಟನ್: ಇದು ಎಲ್ಲರೂ ಅಚ್ಚರಿ ಪಡುವ ಘಟನೆ. ತನ್ನ ಬೇಡಿಕೆ ಈಡೇರಲಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬ Instagram Model ವಿಮಾನದಲ್ಲಿ ಆತಂಕ ಸೃಷ್ಟಿಸಿದ್ದಾಳೆ. ತನ್ನ ಬೇಡಿಕೆ ಈಡೇರದಿದ್ದರೆ ವಿಮಾನವನ್ನೇ ಸ್ಪೋಟಿಸುವ ಬೆದರಿಕೆ ಒಡ್ಡಿದ್ದಾಳೆ. ಅಷ್ಟಕ್ಕೂ ಆಕೆ ಇಟ್ಟಿರುವ ಬೇಡಿಕೆಯೇ ಹಾಸ್ಯಾಸ್ಪದವಾಗಿದೆ.
ಇನ್‌ಸ್ಟಾಗ್ರಾಮ್ ಮಾಡೆಲ್ ದುರ್ವರ್ತನೆ :
ಇನ್ಸ್ಟಾಗ್ರಾಮ್ ಮಾಡೆಲ್ (Instagram Model) ಹನ್ನಾ ಲೀ ಪಿಯರ್ಸನ್ ವಿರುದ್ಧ ಏರ್ ನ್ಯೂಜಿಲೆಂಡ್ನಲ್ಲಿ (NewZealand)ಪ್ರಯಾಣ ಬೆಳೆಸಿದ್ದಳು. ವಿಮಾನದಲ್ಲಿ ಊಟದ ಸಮಯದಲ್ಲಿ ವಿಮಾನ ಸಿಬ್ಬಂದಿ ಆಹಾರ ಪೂರೈಸಿದ್ದಾರೆ. ಈ ವೇಳೆ ಮಾಡೆಲ್ ತನಗೆ ವೈನ್ (Wine) ಬೇಕು ಎಂದು ಕೇಳಿದ್ದಾರೆ. ಆಗ ವಿಮಾನ ಸಿಬ್ಬಂದಿ ಊಟದ ಜೊತೆ ವೈನ್ ಸಿಗುವುದಿಲ್ಲ. ನಿಮಗೆ ವೈನ್ ಬೇಕೆಂದಿದ್ದರೆ ಅದಕ್ಕೆ ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗುತ್ತದೆ ಎಂದಿದ್ದಾರೆ. ಇಷ್ಟಕ್ಕೆ ಈ Instagram Model ಕೋಪಗೊಂಡಿದ್ದಾಳೆ. ವಿಮಾನ ಸಿಬ್ಬಂದಿಯನ್ನು ನಿಂದಿಸಲು ಆರಂಭಿಸಿದ್ದಾಳೆ.
ಇದನ್ನೂ ಓದಿ : World War 3: Ukrain Border ಮೇಲೆ ಭಾರಿ ಪ್ರಮಾಣದ ಸೈನ್ಯ ನಿಯೋಜಿಸಿದ Russia, ಹೆಚ್ಚಾದ ಮೂರನೇ ಮಹಾಯುದ್ಧದ ಆತಂಕ
ಹೊಡೆದಾಟಕ್ಕೆ ಇಳಿದ ಮಾಡೆಲ್ :
ಊಟದ ಜೊತೆ ಏನು ನೀಡಲಾಗುತ್ತದೆ ಏನು ನೀಡುವುದಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ನನಗೆ ವೈನ್ ಬೇಕು ಎಂದು ಇನ್‌ಸ್ಟಾಗ್ರಾಮ್ ಮಾಡೆಲ್ ಹನ್ನಾ ಲೀ ಪಿಯರ್ಸನ್ ಪತ್ತು ಹಿಡಿದಿದ್ದಳು. ಈಕೆಯ ಅರಚಾಟ ಕಿರುಚಾಟಕ್ಕೆ ಸಿಬ್ಬಂದಿ ಬಗ್ಗದೇ ಹೋದಾಗ ಹೊಡೆದಾಟಕ್ಕೆ ಇಳಿದಿದ್ದಾಳೆ. ಒಂದಷ್ಟು ಹೊತ್ತು ಇಡೀ ವಿಮಾನದಲ್ಲಿ (Flight) ಆತಂಕದ ವಾತಾವರಣವನ್ನೇ ಸೃಷ್ಟಿಸಿ ಬಿಟ್ಟಿದ್ದಳು.
ವಿಮಾನ ಸ್ಪೋಟಿಸುವ ಬೆದರಿಕೆ :
ಸಿಬ್ಬಂದಿ ಯಾವುದೇ ಕಾರಣಕ್ಕೂ ಈಕೆಯ ಬೇಡಿಕೆ ಈಡೆರಿಸುವುದಿಲ್ಲ ಎನ್ನುವುದನ್ನು ಅರಿತ ಮಾಡೆಲ್ ತನಗೆ ವೈನ್ ಸಿಕ್ಕಿಲ್ಲ ಎಂದಾದರೆ ವಿಮಾನವನ್ನೇ ಸ್ಪೋಟಿಸುವುದಾಗಿ ಬೆದರಿಕೆ ಒಡ್ಡಿದ್ದಾಳೆ. ಕೊನೆಗೆ ಈಕೆಯ ಅತಿರೇಕದ ವರ್ತನೆಯಿಂದ ಬೇಸತ್ತ ಸಿಬ್ಬಂದಿ ಈಕೆಯ ಕೈಗಳನ್ನು ಚೈನ್ ನಿಂದ ಕಟ್ಟಿ ಹಾಕಿ, ಸೀಟ್ ಬೆಲ್ಟ್ (Seat Belt) ಹಾಕಿ ಕೂರಿಸಿದ್ದಾರೆ.
ಇದನ್ನೂ ಓದಿ : ಕೊನೆ ಕ್ಷಣದಲ್ಲಿ ವರನಿಗೆ ತಿಳಿಯಿತು ತಾನು ಮದುವೆಯಾಗುತ್ತಿರುವುದು ತಂಗಿಯನ್ನೇ ಎಂಬ ಸತ್ಯ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.