ಮಾಸ್ಕೋ: Russia-Ukraine Border Crisis - ರಷ್ಯಾ-ಉಕ್ರೇನ್ (Russia-Ukraine Border) ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ವಿಶ್ವ ಯುದ್ಧದ (World War 3) ಭಯ ಹೆಚ್ಚಾಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ, ಒಂದು ತಿಂಗಳಲ್ಲಿ, ಪ್ರಪಂಚವು ಕರೋನವೈರಸ್(Coronavirus) ಬಿಕ್ಕಟ್ಟಿನ ನಡುವೆ ಭೀಕರ ಯುದ್ಧವನ್ನು ಎದುರಿಸಬೇಕಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ರಷ್ಯಾ ಇತ್ತೀಚೆಗೆ ತನ್ನ 4,000 ಸೈನಿಕರನ್ನು ವಿವಾದಿತ ಗಡಿಗೆ ರವಾನಿಸಿದೆ. ರಷ್ಯಾದ (Russia) ಸೈನ್ಯದ ಈ ದೊಡ್ಡ ನಿಯೋಜನೆಯಿಂದ ಒಂದೆಡೆ ಯುರೋಪ್ ಹೆಚ್ಚಿನ ಅಲರ್ಟ್ ಎದುರಿಸುತ್ತಿದ್ದರೆ, ಇನ್ನೊಂದೆಡೆ ವಿಶ್ವ ಯುದ್ಧದ ಬೆದರಿಕೆ ಕೂಡ ಹೆಚ್ಚಾಗತೊಡಗಿದೆ.
ಸತತವಾಗಿ ಆತಂಕ ಹೆಚ್ಚಾಗುತ್ತಿದೆ
ನಮ್ಮ ಅಂಗಸಂಸ್ಥೆ WION ಮಾಡಿರುವ ವರದಿಯೊಂದರ ಪ್ರಕಾರ, ಮುಂದಿನ ಕೆಲವು ವಾರಗಳಲ್ಲಿ ಯುರೋಪ್ ಅಥವಾ ವಿಶ್ವ ಯುದ್ಧದಂತಹ ದೊಡ್ಡ ಬೆದರಿಕೆ ಎದುರಾಗಲಿದೆ ಎಂದು ಹೇಳಿದರೆ ತಪ್ಪಾಗಲಾರದು ಎಂದು ರಷ್ಯಾದ ಸ್ವತಂತ್ರ ಮಿಲಿಟರಿ ವಿಶ್ಲೇಷಕ ಪಾವೆಲ್ ಫೆಲ್ಗೆನ್‌ಹೌರ್ ಹೇಳಿದ್ದಾರೆ. 'ಅಪಾಯವು ಹೆಚ್ಚುತ್ತಿದೆ ಮತ್ತು ವೇಗವಾಗಿ ಹೆಚ್ಚುತ್ತಿದೆ. ಮಾಧ್ಯಮಗಳಲ್ಲಿ ಇದರ ಬಗ್ಗೆ ಹೆಚ್ಚು ಚರ್ಚೆ ಇಲ್ಲದಿರಬಹುದು, ಆದರೆ ನಾವು ತುಂಬಾ ಕೆಟ್ಟ ಸಂಕೇತಗಳನ್ನು ಗಮನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ವಿವಾದ ಕೇವಲ ಎರಡು ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಫೆಲ್ಗೆನ್ಹಾರ್ ಹೇಳಿದ್ದಾರೆ. ಇದು ಯುರೋಪಿಯನ್ ಅಥವಾ ಜಾಗತಿಕ ಮಟ್ಟದಲ್ಲಿ ಯುದ್ಧದ ಸ್ವರೂಪ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆದೇಶದ ಮೇರೆಗೆ 4,000 ರಷ್ಯಾದ ಸೈನಿಕರು, ಟ್ಯಾಂಕ್‌ಗಳು ಮತ್ತು ಇತರೆ ಶಸ್ತ್ರಸಜ್ಜಿತ ಗಡಿಭಾಗಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.
ಯುದ್ಧವನ್ನು ಅಲ್ಲಗಳೆದ ರಷ್ಯಾ
ಕಳೆದ ವಾರ, ಉಕ್ರೇನ್ (Ukraine)ನ ಕಮಾಂಡರ್-ಇನ್-ಚೀಫ್ ರುಸ್ಲಾನ್ ಖೋಮ್ಚಾ ಸಂಸತ್ತಿನಲ್ಲಿ ರಷ್ಯನ್ ಒಕ್ಕೂಟ ನಮ್ಮ ದೇಶದ ವಿರುದ್ಧ ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದ್ದರು. ಗಡಿ ಪ್ರದೇಶದಲ್ಲಿ ರಷ್ಯಾ ಕನಿಷ್ಠ 25 ಟ್ಯಾಕ್ಟಿಕಲ್ ಗ್ರೂಪ್ ಗಳನ್ನು ನಿಯೋಜಿಸಿದೆ. ಇವೆಲ್ಲವೂ ಈಗಾಗಲೇ ಉಕ್ರೇನ್ ಗಡಿಯಲ್ಲಿ ನಿಯೋಜಿಸಲಾದ ರಷ್ಯಾದ ಪಡೆಗಳಿಗೆ ಹೆಚ್ಚುವರಿಯಾಗಿವೆ. ಇದೇ ವೇಳೆ, ರಷ್ಯಾ ತನ್ನ ಸೈನ್ಯದ ಚಲನೆಯಿಂದ ಭಯಪಡುವ ಅಗತ್ಯವಿಲ್ಲ ತಾವು ಯಾವುದೇ ರೀತಿಯ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿಲ್ಲ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ-Tokyo Olympics: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ಉತ್ತರ ಕೊರಿಯಾ ನಿರ್ಧಾರ
World War 03 ಶಂಕೆ ಯಾಕೆ?
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಜಾಗತಿಕ ಸಮರವಾಗಿ ಪರಿವರ್ತನೆಯಾಗಲು ಹಲವು ಕಾರಣಗಳಿವೆ. ಮೊದಲನೆಯದಾಗಿ, ರಷ್ಯಾ ಮತ್ತು ಅಮೆರಿಕ (America) ಪರಸ್ಪರ ವಿರುದ್ಧವಾಗಿವೆ ಮತ್ತು ಉಕ್ರೇನ್ ಅಮೆರಿಕಕ್ಕೆ ಹತ್ತಿರದ ಸ್ನೇಹಿ ರಾಷ್ಟ್ರವಾಗಿದೆ. ರಷ್ಯಾ ಉಕ್ರೇನ್‌ಗೆ ಹಾನಿ ಮಾಡಿದರೆ, ಅಮೆರಿಕ ಉಕ್ರೇನ್ ಅನ್ನು ಬೆಂಬಲಿಸುತ್ತದೆ ಮತ್ತು ಈ ರೀತಿಯಾಗಿ ಇತರ ದೇಶಗಳು ಸಹ ಈ ಹೋರಾಟಕ್ಕೆ ಸೇರುತ್ತವೆ. ಇತ್ತೀಚೆಗೆ, ಯುಎಸ್ನಿಂದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತುಂಬಿದ ಸರಕು ಹಡಗು ಉಕ್ರೇನ್ ತಲುಪಿತ್ತು. ಇದಕ್ಕೆ ರಷ್ಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಉಕ್ರೇನ್ ಮತ್ತು ಅಮೆರಿಕಾದಲ್ಲಿ ಹೆಚ್ಚುತ್ತಿರುವ ಸಾಮೀಪ್ಯದೊಂದಿಗೆ ರಷ್ಯಾ ಈಗಾಗಲೇ ರೋಸಿಹೋಗಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Global Warming ವಿರುದ್ಧ ರಚನೆಯಾಗಲಿದೆ ರಣನೀತಿ : ಮೋದಿ ಸೇರಿದಂತೆ ೪೦ ರಾಷ್ಟ್ರಗಳ ನಾಯಕರಿಗೆ ಅಮೆರಿಕ ಆಹ್ವಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ