ತೆಹರಾನ್:  ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಜೆರುಸೇಲಂನ್ನು ಇಸ್ರೇಲ್ ರಾಜಧಾನಿಯಾಗಿ ಘೋಷಿಸಿರುವುದಕ್ಕೆ ಕಿಡಿಕಾರಿರುವ ಇರಾನ್ ಅಧ್ಯಕ್ಷ ಹಸ್ಸನ್ ರೌಹಾನಿ  ಅದನ್ನು ನಮ್ಮ ದೇಶ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಏರ್ದೊನ್ರವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ  ಟ್ರಂಪ್ ನಡೆಯನ್ನು ಖಂಡಿಸಿ ಇದು ಅಪಾಯಕಾರಿ ಉತ್ತೇಜನ ಎಂದು ಹೇಳಿದ್ದಾರೆ ಎಂದು ಇರಾನ್ನ ಸರ್ಕಾರಿ ವೆಬಸೈಟ್ ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ಮೊಹಮ್ಮದ ಪೈಗಂಬರ್ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ  ಮಾತನಾಡುತ್ತಾ ಇರಾನ್ ದೇಶವು ಯಾವುದೇ ರೀತಿ ಪಾಶ್ಚಿಮಾತ್ಯರ  ಇಸ್ಲಾ0 ಮೇಲಿನ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಟ್ರಂಪ ರ ಜೆರುಸೇಲಂ ಕುರಿತಾದ ಘೋಷಣೆ ಬಗೆಯನ್ನು ತೀವ್ರವಾಗಿ ಖಂಡಿಸಿದರು. ಇದೆ ಸಂಧರ್ಭದಲ್ಲಿ  ಮಾತನಾಡಿದ ಆಯತೊಲ್ಲಾ ಅಲಿ ಖಾಮೆನಿ ಇಂಥ ನಿರ್ಧಾರಗಳ ವಿರುದ್ದ ಇಡಿ ಮುಸ್ಲಿಮರು ಒಂದಾಗಬೇಕೆಂದು ಕರೆ ನೀಡಿದರು.


ಪ್ರಮುಖ ಸಂಗತಿ ಎಂದರೆ 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ನ ವಿದೇಶಾಂಗ ನೀತಿಯು ಪ್ಯಾಲೆಸ್ತೀನ್ ಕೇಂದ್ರಿತವಾಗಿದೆ ಮತ್ತು ಅದು ಇಸ್ರೇಲ್ ನ್ನು ಈ ವಿಷಯದಲ್ಲಿ ನಿರಂತರವಾಗಿ ಖಂಡಿಸುತ್ತಾ ಬಂದಿರುವುದು ಗಮನಾರ್ಹ ಸಂಗತಿ.