ಸಿರಿಯಾದ ಎರಡು ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿ, `ಐಸಿಸ್ ನಂತೆಯೇ ಹಮಾಸ್ ಅನ್ನೂ ಕೂಡ ಕೊಚ್ಚಿಹಾಕುವೆವು` ಎಂದ ನೆತನ್ಯಾಹು
Israel Attack On Hamas: ಜೆರುಸಲೆಮ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೋಂದರ ಪ್ರಕಾರ, ಇಸ್ರೇಲ್ ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆ ಬಾಂಬ್‌ಗಳನ್ನು ಎಸಗಿದೆ, ಇದರಿಂದಾಗಿ ಅಲ್ಲಿ ಭಾರಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಇರಾನ್‌ನ ವಿದೇಶಾಂಗ ಸಚಿವರೂ ಸಿರಿಯಾಕ್ಕೆ ಬರಲಿದ್ದಾರೆ. ಆದರೆ ಅದಕ್ಕೂ ಮುನ್ನವೇ, ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದ್ದು, ಇರಾನ್‌ನ ವಿದೇಶಾಂಗ ಸಚಿವರು ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
Israel-Syria War: ಇಸ್ರೇಲ್ ಮೇಲೆ ಹಮಾಸ್ ದಾಳಿ ಬಳಿಕ ಇದೀಗ ಅದರ ಅಸ್ತಿತ್ವಕ್ಕೂ ಅಪಾಯ ಎದುರಾಗಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ನ ವೈಮಾನಿಕ ದಾಳಿ ನಿಲ್ಲುತ್ತಿಲ್ಲ. ಏತನ್ಮಧ್ಯೆ, ಲೆಬನಾನ್ ನಂತರ ಇಸ್ರೇಲ್ ಕೂಡ ಸಿರಿಯಾ ಮೇಲೆ ಬಾಂಬ್ ದಾಳಿ ಮಾಡಿದೆ. ಜೆರುಸಲೆಮ್ ಪೋಸ್ಟ್ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇಸ್ರೇಲ್ ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆ ಬಾಂಬ್‌ಗಳನ್ನು ಎಸೆದಿದೆ, ಇದರಿಂದಾಗಿ ಅಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಯಾಗಿದೆ. ಇರಾನ್‌ನ ವಿದೇಶಾಂಗ ಸಚಿವರೂ ಸಿರಿಯಾಕ್ಕೆ ಬರಲಿದ್ದಾರೆ. ಆದರೆ ಅದಕ್ಕೂ ಮೊದಲು, ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದ್ದು, ಇರಾನ್‌ನ ವಿದೇಶಾಂಗ ಸಚಿವರು ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ಗಾಜಾದಲ್ಲಿ ಅಂಗಡಿಗಳ ಹೊರಗೆ ಸರದಿ ಸಾಲುಗಳು
ಮತ್ತೊಂದೆಡೆ, ವಿದ್ಯುತ್ ಸರಬರಾಜು ಸ್ಥಗಿತಗೊಂಡ ಬಳಿಕ, ಗಾಜಾದ ಜನರು ಕಿರಾಣಿ ಅಂಗಡಿಗಳ ಮುಂದೆ ಗುರುವಾರ ಸುದೀರ್ಘ ಸರತಿ ಸಾಲುಗಳಲ್ಲಿ ನಿಂತಿರುವುದು ಕಂಡುಬಂದಿದೆ. ಇಸ್ರೇಲ್ ಕೂಡ ಈ ಪ್ರದೇಶದಲ್ಲಿ ತಾಜಾ ವೈಮಾನಿಕ ದಾಳಿಗಳನ್ನು ಆರಂಭಿಸಿದೆ ಮತ್ತು ಸಂಭವನೀಯ ಗ್ರೌಂಡ್ ಆಕ್ಷನ್ ಗಾಗಿ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಇಸ್ರೇಲ್ ಗಾಜಾಕ್ಕೆ ಆಹಾರ, ನೀರು, ಇಂಧನ ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದ ಬಳಿಕ ಈ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂತರರಾಷ್ಟ್ರೀಯ ನೆರವು ಗುಂಪುಗಳು ಎಚ್ಚರಿಸಿವೆ.
ಪ್ಯಾಲೆಸ್ಟೈನ್‌ನ ಭಯೋತ್ಪಾದಕ ಗುಂಪು ಹಮಾಸ್ ಶನಿವಾರ ಬೆಳಗ್ಗೆ ಇಸ್ರೇಲ್‌ಗೆ ಪ್ರವೇಶಿಸಿ ದಾಳಿ ನಡೆಸಿದ ಬಳಿಕ ಅಲ್ಲಿ ಯುದ್ಧ ಪ್ರಾರಂಭವಾಗಿದೆ ಮತ್ತು ಎರಡೂ ಕಡೆಯಿಂದ ಇದುವರೆಗೆ ಸುಮಾರು 2500 ಕ್ಕೂ ಜನರು ಬಲಿಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಇಸ್ರೇಲಿ ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಕ್ಟ್, ಗುರುವಾರ ಯುದ್ಧದ ನಿರ್ಧಾರ ತೆಗೆದುಕೊಂಡ ಬಳಿಕ ಭದ್ರತಾ ಪಡೆಗಳು ಗ್ರೌಂಡ್ ಆಕ್ಷನ್ ಗಾಗಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ರಾಜಕೀಯ ಮುಂದಾಳತ್ವ ಇನ್ನೂ ಆದೇಶ ಹೊರಡಿಸಿಲ್ಲ ಎಂದು ಅವರು ಹೇಳಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗಬಹುದು
ಗಾಜಾ ಕೇವಲ 40 ಕಿಲೋಮೀಟರ್ ಉದ್ದದ ಪಟ್ಟಿಯಾಗಿದ್ದು, ಇದರಲ್ಲಿ 23 ಲಕ್ಷ ಜನರು ವಾಸಿಸುತ್ತಿದ್ದಾರೆ ಮತ್ತು ಯಾವುದೇ ಗ್ರೌಂಡ್ ಆಕ್ಷನ್ ಉಭಯ ಪಕ್ಷಗಳ ಸಾವಿನ ಸಂಖ್ಯೆಯನ್ನು ಹೆಚ್ಚಿಸಬಹುದು. ಹಮಾಸ್ ಶನಿವಾರ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್‌ಗಳನ್ನು ಹಾರಿಸಿತ್ತು, ನಂತರ ಇಸ್ರೇಲ್‌ನ ವಿಧ್ವಂಸಕತೆಯನ್ನು ಕಂಡು ಜಗತ್ತು ತಲ್ಲಣಗೊಂಡಿದೆ. ಒಂದು ಅಂದಾಜಿನ ಪ್ರಕಾರ, ಹಮಾಸ್ 150 ಇಸ್ರೇಲಿ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎನ್ನಲಾಗುತ್ತಿದೆ.
ವೈಮಾನಿಕ ದಾಳಿಯಿಂದ ಉಂಟಾದ ವಿನಾಶದ ಭೀತಿಯಿಂದ ಪ್ಯಾಲೆಸ್ಟೀನಿಯಾದವರು ಈಗಾಗಲೇ ತಮ್ಮ ಸರಕುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಯತ್ನಿಸುತ್ತಿದ್ದಾರೆ. ಯುಎನ್ ನಡೆಸುವ ಶಾಲೆಗಳಲ್ಲಿ ಸಾವಿರಾರು ಜನರು ಆಶ್ರಯ ಪಡೆದಿದ್ದಾರೆ, ಇತರರು ತಮ್ಮ ಸಂಬಂಧಿಕರ ಮನೆಗಳಲ್ಲಿ ಮತ್ತು ಅಪರಿಚಿತರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಬೇಕರಿಗಳು ಮತ್ತು ದಿನಸಿ ಅಂಗಡಿಗಳು ಕೆಲವು ಗಂಟೆಗಳ ಕಾಲ ತೆರೆದುಕೊಂಡಿವೆ ಮತ್ತು ಈ ಸಮಯದಲ್ಲಿ ಜನರ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿವೆ. ಏಕೆಂದರೆ ಜನರು ಮುಂದಿನ ದಿನಗಳಲ್ಲಿ ಮನೆಯಲ್ಲಿ ಆಹಾರ ಖಾಲಿಯಾಗುವ ಮೊದಲು ಆಹಾರವನ್ನು ವ್ಯವಸ್ಥೆ ಮಾಡಲು ಯತ್ನಿಸುತ್ತಿದ್ದಾರೆ.
ಇದನ್ನೂ ಓದಿ-'ಸುರಕ್ಷಾ ಕವಚ'ವನ್ನು ಭೇದಿಸಿ ಇಸ್ರೇಲ್ ಗೆ ಹಮಾಸ್ ಹೇಗೆ ಪ್ರವೇಶಿಸಿದೆ ಗೊತ್ತಾ? Watch Video
ಆಸ್ಪತ್ರೆಗಳಲ್ಲಿ ವಿದ್ಯುತ್ ಇಲ್ಲ
ಇಂಧನದ ಕೊರತೆಯಿಂದಾಗಿ ಗಾಜಾದ ಏಕೈಕ ವಿದ್ಯುತ್ ಸ್ಥಾವರವನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ, ಈ ಕಾರಣದಿಂದಾಗಿ ಗಾಜಾ ಈಗ ವಿದ್ಯುತ್ಗಾಗಿ ಕೆಲವು ಜನರೇಟರ್‌ಗಳ ಮೇಲೆ ಅವಲಂಬಿತವಾಗಿದೆ. ರೆಡ್‌ಕ್ರಾಸ್‌ನ ಪ್ರಾದೇಶಿಕ ನಿರ್ದೇಶಕ ಫ್ಯಾಬ್ರಿಜಿಯೊ ಕಾರ್ಬೋನಿ ಮಾತನಾಡಿ, 'ಗಾಜಾದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ, ಆಸ್ಪತ್ರೆಗಳಲ್ಲಿ ವಿದ್ಯುತ್ ಇಲ್ಲ, ಇದು ನವಜಾತ ಶಿಶುಗಳ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಮತ್ತು ಇನ್‌ಕ್ಯುಬೇಟರ್‌ಗಳಲ್ಲಿ ಇರಿಸಲಾಗಿರುವ ಮತ್ತು ವಯಸ್ಸಾದ ರೋಗಿಗಳ ಆಮ್ಲಜನಕ, ಕಿಡ್ನಿ.ಡಯಾಲಿಸಿಸ್ ಕೂಡ ನಿಲ್ಲಿಸಲಾಗಿದೆ, ಎಕ್ಸ್ ರೇ ಮಾಡಲಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-ಇಸ್ರೇಲ್ ಮೇಲೆ ಹಮಾಸ್ ದಾಳಿ, ತುರ್ತುಸಭೆ ಕರೆದ ನೆತನ್ಯಾಹು, ಯುದ್ಧ ಘೋಷಣೆ!
ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಗಾಜಾಕ್ಕೆ ಯಾವುದೇ ಸರಕುಗಳನ್ನು ಸರಬರಾಜು ಮಾಡುವುದಿಲ್ಲ ಎಂದು ಇಸ್ರೇಲ್‌ನ ಇಂಧನ ಸಚಿವ ಕಾಟ್ಜ್ ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ