Okinoshima Island: ಜಗತ್ತಿನಲ್ಲಿ ಇಂತಹದ್ದೊಂದು ದ್ವೀಪವಿದೆ ಎಂದರೆ ಶಾಕ್ ಆಗೋದು ಖಂಡಿತ. ಇಲ್ಲಿನ ಸಂಪ್ರದಾಯವು ಸಾಕಷ್ಟು ಆಘಾತಕಾರಿಯಾಗಿದೆ. ಈ ವಿಶಿಷ್ಟ ಸ್ಥಳದಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಪುರುಷರು ಮಾತ್ರ ಇಲ್ಲಿಗೆ ಬರಬಹುದು. ಅವರು ಸಮುದ್ರದ ದೇವಿಯ ರೂಪವನ್ನು ಪೂಜಿಸುತ್ತಾರೆ. ಈ ಸಂಪ್ರದಾಯದ ಹಿಂದಿನ ಕಾರಣವನ್ನು ನಾವು ನಿಮಗೆ ಹೇಳುತ್ತೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral News: ಮೂವರು ಸಹೋದರಿಯರನ್ನ ಮದುವೆಯಾದ ಭೂಪ: ಒಬ್ಬೊಬ್ಬರಿಗೆ ಒಂದೊಂದು ದಿನ ಫಿಕ್ಸ್ ಮಾಡಿದ್ದಾನೆ ಈ ಚನ್ನಿಗರಾಯ!


ನಾವು ಮಾತನಾಡುತ್ತಿರುವ ಸ್ಥಳ ಜಪಾನ್‌ನ ಓಕಿನೋಶಿಮಾ ದ್ವೀಪ. ಈ ದ್ವೀಪವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ. ಈ ದ್ವೀಪವು ಒಟ್ಟು 700 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿದೆ. ನಾಲ್ಕನೇ ಶತಮಾನದಿಂದ ಒಂಬತ್ತನೇ ಶತಮಾನದವರೆಗೆ ಈ ದ್ವೀಪವು ಕೊರಿಯನ್ ದ್ವೀಪಗಳು ಮತ್ತು ಚೀನಾದ ನಡುವಿನ ವ್ಯಾಪಾರದ ಕೇಂದ್ರವಾಗಿತ್ತು ಎಂದು ಹೇಳಲಾಗುತ್ತದೆ.


ಈ ದ್ವೀಪವನ್ನು ಧಾರ್ಮಿಕವಾಗಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ದ್ವೀಪದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಧಾರ್ಮಿಕ ನಿರ್ಬಂಧಗಳು ಇಂದಿಗೂ ಮಾನ್ಯವಾಗಿವೆ. ಇಲ್ಲಿಗೆ ಬರುವ ಪುರುಷರಿಗೂ ಕೆಲವು ಕಠಿಣ ನಿಯಮಗಳಿವೆ. ಅದನ್ನು ಅವರು ಅನುಸರಿಸಬೇಕು. ಇಲ್ಲಿಗೆ ಹೋಗುವ ಮೊದಲು ಪುರುಷರು ಸ್ನಾನ ಮಾಡುವುದು ಅವಶ್ಯಕ ಎಂದು ಹೇಳಲಾಗುತ್ತದೆ. ಇಲ್ಲಿನ ನಿಯಮಗಳು ಎಷ್ಟು ಕಟ್ಟುನಿಟ್ಟಾಗಿದೆ ಎಂದರೆ ಇಡೀ ವರ್ಷದಲ್ಲಿ ಕೇವಲ 200 ಪುರುಷರು ಮಾತ್ರ ಇಲ್ಲಿಗೆ ಬರಬಹುದು. ಇಲ್ಲಿಗೆ ಬರುವಾಗ ತಮ್ಮೊಂದಿಗೆ ಏನನ್ನೂ ತರುವಂತಿಲ್ಲ. ಅಷ್ಟೇ ಅಲ್ಲ, ಇಲ್ಲಿಂದ ಏನನ್ನೂ ಓಯ್ಯುವಂತಿಲ್ಲ. ಅವರ ಈ ಪ್ರವಾಸವೂ ಗೌಪ್ಯವಾಗಿರಬೇಕು.


ಇದನ್ನೂ ಓದಿ: ಟರ್ಕಿ- ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 16,000ಕ್ಕೆ ಏರಿಕೆ ! ಎತ್ತ ನೋಡಿದರೂ ಆಘಾತಕಾರಿ ದೃಶ್ಯಗಳೇ !


ಒಂದು ವರದಿಯ ಪ್ರಕಾರ, ಮುನಕಟಾ ತೈಶಾ ಒಕಿತ್ಸು ದೇವಾಲಯವು ಇಲ್ಲಿ ನೆಲೆಗೊಂಡಿದೆ. ಅಲ್ಲಿ ಸಮುದ್ರದ ದೇವತೆಯನ್ನು ಪೂಜಿಸಲಾಗುತ್ತದೆ. 17 ನೇ ಶತಮಾನದಲ್ಲಿ ಸಮುದ್ರಯಾನದಲ್ಲಿ ಹಡಗುಗಳ ಸುರಕ್ಷತೆಗಾಗಿ ಪೂಜೆಯನ್ನು ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.