Viral News: ಮೂವರು ಸಹೋದರಿಯರನ್ನ ಮದುವೆಯಾದ ಭೂಪ: ಒಬ್ಬೊಬ್ಬರಿಗೆ ಒಂದೊಂದು ದಿನ ಫಿಕ್ಸ್ ಮಾಡಿದ್ದಾನೆ ಈ ಚನ್ನಿಗರಾಯ!

Kenya Man Married triplets: ಡೈಲಿ ಸ್ಟಾರ್ ವರದಿಯ ಪ್ರಕಾರ, ಗಾಸ್ಪೆಲ್ ಸಂಗೀತದಲ್ಲಿ ವೃತ್ತಿಜೀವನವ ನಡೆಸುತ್ತಿದ್ದ ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕೀನ್ಯಾದ ಸ್ಟೀವೊ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮೊದಲು ಕೇಟ್, ಸ್ಟೀವೊ ಅವರನ್ನು ಭೇಟಿಯಾಗಿದ್ದರು. ಆ ನಂತರ ಆಕೆಯ ಸಹೋದರಿಯರನ್ನು ಭೇಟಿಯಾದರು.

Written by - Bhavishya Shetty | Last Updated : Feb 9, 2023, 04:58 PM IST
    • ಸಹೋದರಿಯರು ಒಂದೇ ಪುರುಷನನ್ನು ಮದುವೆಯಾಗುವುದು ಅಸಾಮಾನ್ಯ ಸಂಗತಿ ಎನ್ನಬಹುದು.
    • ಆದರೆ ಕೀನ್ಯಾದಲ್ಲಿ ವಿಚಿತ್ರವಾದ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ.
    • ತ್ರಿವಳಿ ಸಹೋದರಿಯರು ಒಬ್ಬ ವ್ಯಕ್ತಿಯನ್ನೇ ವಿವಾಹವಾಗಿದ್ದಾರೆ
Viral News: ಮೂವರು ಸಹೋದರಿಯರನ್ನ ಮದುವೆಯಾದ ಭೂಪ: ಒಬ್ಬೊಬ್ಬರಿಗೆ ಒಂದೊಂದು ದಿನ ಫಿಕ್ಸ್ ಮಾಡಿದ್ದಾನೆ ಈ ಚನ್ನಿಗರಾಯ!  title=
Kenya Man Married triplets

Kenya Man Married triplets: ಇಂದಿನ ಸಮಾಜದಲ್ಲಿ ಬಹುಪತ್ನಿತ್ವ ಸಾಮಾನ್ಯವಲ್ಲ. ಅದರಲ್ಲೀ ಸಹೋದರಿಯರು ಒಂದೇ ಪುರುಷನನ್ನು ಮದುವೆಯಾಗುವುದು ಅಸಾಮಾನ್ಯ ಸಂಗತಿ ಎನ್ನಬಹುದು. ಆದರೆ ಕೀನ್ಯಾದಲ್ಲಿ ವಿಚಿತ್ರವಾದ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ತ್ರಿವಳಿ ಸಹೋದರಿಯರು ಒಬ್ಬ ವ್ಯಕ್ತಿಯನ್ನೇ ವಿವಾಹವಾಗಿದ್ದಾರೆ. ಈ ವಿಚಾರ ತಿಳಿದ ಯುವಕರ ಹೃದಯ ಒಡೆದು ಚೂರಾದಂತಾಗಿದೆ.

ಇದನ್ನೂ ಓದಿ: ಟರ್ಕಿಗೆ ನೆರವು ನೀಡಲು ಮುಂದಾಗಿದ್ದ ಭಾರತಕ್ಕೆ ವಾಯುಪ್ರದೇಶ ನಿರಾಕರಿಸಿದ ಪಾಕ್

ಡೈಲಿ ಸ್ಟಾರ್ ವರದಿಯ ಪ್ರಕಾರ, ಗಾಸ್ಪೆಲ್ ಸಂಗೀತದಲ್ಲಿ ವೃತ್ತಿಜೀವನವ ನಡೆಸುತ್ತಿದ್ದ ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕೀನ್ಯಾದ ಸ್ಟೀವೊ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮೊದಲು ಕೇಟ್, ಸ್ಟೀವೊ ಅವರನ್ನು ಭೇಟಿಯಾಗಿದ್ದರು. ಆ ನಂತರ ಆಕೆಯ ಸಹೋದರಿಯರನ್ನು ಭೇಟಿಯಾದರು. ಈ ಭೇಟಿಯ ಬಗ್ಗೆ ಖುದ್ದಾಗಿ ಮಾತನಾಡಿದ ಸ್ಟೀವೊ, “ನಾನು ಈ ಮೂವರ ಬಗ್ಗೆಯೂ ಕಾಳಜಿ ವಹಿಸಿದೆ, ನನ್ನ ಮಾತುಕತೆ ಒಬ್ಬರ ಮೇಲೆ ಕೇಂದ್ರೀಕೃತವಾಗಿರಲಿಲ್ಲ” ಎಂದು ಹೇಳಿದ್ದಾರೆ.

ತಾನು ಬಹುಪತ್ನಿತ್ವವನ್ನು ಅನುಸರಿಸಿದ್ದೇನೆ ಎಂದು ಹೇಳಿಕೊಳ್ಳುವ ಸ್ಟೀವೊ, ತನ್ನ ಜೀವನದಲ್ಲಿ ಮೂವರು ಮಹಿಳೆಯರೊಂದಿಗೆ ತೃಪ್ತನಾಗಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಮೂವರು ಮಹಿಳೆಯರ ಅಗತ್ಯಗಳನ್ನು ಮತ್ತು ಆಸೆಗಳನ್ನು ಸಮಾನವಾಗಿ ಪೂರೈಸುವುದು ಕಷ್ಟವೇ ಎಂದು ಕೇಳಿದಾಗ, "ನಾನು ಮೂವರು ಮಹಿಳೆಯರನ್ನು ತೃಪ್ತಿಪಡಿಸಬಲ್ಲೆ ಎಂಬ ಅಂಶವನ್ನು ಜನರು ಏಕೆ ನಂಬುತ್ತಿಲ್ಲ? ಅದು ದೊಡ್ಡ ವಿಷಯವಲ್ಲ" ಎಂದು ನೇರವಾಗಿ ಹೇಳಿದ್ದಾರೆ.

ಮಾತು ಮುಂದುವರೆಸಿದ ಸ್ಟೀವೋ, “ಮೂವರಿಗೆ ಸಹ ಅವಕಾಶ ಕಲ್ಪಿಸುವ ಸಲುವಾಗಿ ಅವರಿಗಾಗಿ ವೇಳಾಪಟ್ಟಿಯನ್ನು ತಯಾರಿಸಿದ್ದೇನೆ. ಸೋಮವಾರಗಳು ಮೇರಿಗೆ, ಮಂಗಳವಾರಗಳು ಕೇಟ್‌ಗೆ ಮತ್ತು ಬುಧವಾರಗಳು ಈವ್‌ ಗೆ ಎಂದು ದಿನ ನಿಗದಿ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಇನ್ನು ಈ ವಿವಾಹ ಜೀವನದ ಬಗ್ಗೆ ಮಾತನಾಡಿದ ಸಹೋದರಿಯರು, "ನಾವು ಮೂವರು ಅವನಿಗೆ ಸಾಕು. ಇನ್ನೊಬ್ಬರನ್ನು ತರಲು ನಾವು ಅವಕಾಶ ನೀಡುವುದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: Photos : ಭೂಕಂಪದ ನಂತರ 17 ಗಂಟೆಗಳವರೆಗೆ ತನ್ನ ಪುಟ್ಟ ತಮ್ಮನನ್ನು ಸುರಕ್ಷಿತವಾಗಿರಿಸಿದ ಏಳು ವರ್ಷದ ಬಾಲಕಿ

ಬಹುಪತ್ನಿತ್ವವು ಸಾಮಾಜಿಕ ಮತ್ತು ವಿವಾಹ ಪದ್ಧತಿಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸಂಗಾತಿಗಳನ್ನು ಹೊಂದಿರುತ್ತಾನೆ. ಬಹುಪತ್ನಿತ್ವದಲ್ಲಿ ಬಹು ಪತ್ನಿಯರನ್ನು ಹೊಂದಿರುತ್ತಾರೆ. ಬಹುಪತಿತ್ವದಲ್ಲಿ ಬಹು ಗಂಡಂದಿರನ್ನು ಹೊಂದುವ ಅವಕಾಶವಿರುತ್ತದೆ. ಆದರೆ ಈ ಅನುಸರಣೆ ಈಗಿನ ಸಮಾಜದಲ್ಲಿ ವಿವಾದಾಸ್ಪದವಾಗಿದೆ. ಅಲ್ಲದೆ, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಕಾನೂನುಬಾಹಿರವಾಗಿದೆ.

 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... 

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News