ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮುಂಬೈ ತಲುಪಿದ್ದಾರೆ. ಇಲ್ಲಿ ಅವರು ತಮ್ಮ ಗರ್ಲ್ ಫ್ರೆಂಡ್ ಲಾರೆನ್ ಸಾಂಚೇಸ್ ಅವರ ಜೊತೆ ಬಂದಿದ್ದಾರೆ. ಈ ವೇಳೆ ವೇದಿಕೆಯ ಮೇಲೆ ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ಹಾಗೂ ಜೊಯಾ ಅಖ್ತರ್ ಅವರಿಗೆ ಸಾಥ್ ನೀಡಿದ್ದು, ಶಾರುಕ್ ಮನವಿಗೆ ಸ್ಪಂದಿಸಿರುವ ಜೆಫ್ ಶಾರುಕ್ ಅವರ ಚಿತ್ರ 'ಡಾನ್' ಡೈಲಾಗ್ ಕೂಡ ಹೇಳಿದರು. ವಿಡಿಯೋದಲ್ಲಿ 'ಡಾನ್' ಚಿತ್ರದ ಡೈಲಾಗ್ ಹೇಳುತ್ತಿರುವ ಜೆಫ್, ಡೈಲಾಗ್ ನಲ್ಲಿನ 'ನಾಮುನ್ಕಿನ್' ಪದ ಹೇಳುವ ವೇಳೆ ತಡಬಡಿಸಿದ್ದಾರೆ. ಈ ವೇಳೆ ಅವರು 'ಇಂಪಾಸಿಬಲ್' ಎಂಬ ಇಂಗ್ಲೀಷ್ ಪದ ಬಳಸಿದ್ದಾರೆ. ಜೆಫ್ ಅವರ ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗಿದೆ.



COMMERCIAL BREAK
SCROLL TO CONTINUE READING

'ಝಿರೋ' ಚಿತ್ರದ ಬಳಿಕ ಶಾರುಕ್ ಇದುವರೆಗೆ ಯಾವುದೇ ಚಿತ್ರದಲ್ಲಿ ನಟಿಸಿಲ್ಲ ಹಾಗೂ ಹೊಸ ಚಿತ್ರದ ಘೋಷಣೆ ಕೂಡ ಮಾಡಿಲ್ಲ. ಸದ್ಯ ಅವರು ತಮ್ಮ ಕುಟುಂಬದ ಜೊತೆ ಹ್ಯಾಪಿ ಟೈಮ್ ಕಳೆಯುವಲ್ಲಿ ವ್ಯಸ್ತರಾಗಿದ್ದಾರೆ. ವರ್ಷ 2019ರಲ್ಲಿ ಶಾರುಕ್ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಸಂಯಮ ಕಳೆದುಕೊಂಡಿರುವ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ಅವರಿಗೆ ಮನವಿ ಕೂಡ ಮಾಡಿದ್ದು, ಕೆಲ ದಿನಗಳ ಹಿಂದೆ #WeWantAnnouncementSRK ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿತ್ತು.


2018 ರಲ್ಲಿ ಬಿಡುಗಡೆಯಾಗಿದ್ದ 'ಝೀರೋ' ಚಿತ್ರದಲ್ಲಿ ಶಾರುಖ್ ಕೊನೆ ಬಾರಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ಕೂಡ ಶಾರುಖ್ ಜೊತೆಗೆ ನಟಿಸಿದ್ದರು. ಚಿತ್ರದ ಕಥೆ ಬಗ್ಗೆ ಸಾಕಷ್ಟು ಋಣಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ, ಚಿತ್ರದಲ್ಲಿ ಶಾರುಕ್, ಅನುಷ್ಕಾ ಮತ್ತು ಕತ್ರೀನಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದವು. ಸದ್ಯ ಅವರ ಮುಂದಿನ ಚಿತ್ರದ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ರಾಜ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ 'ಧೂಮ್-4' ಚಿತ್ರದ ಮೂಲಕ ಶಾರುಕ್ ಮತ್ತೆ ತೆರೆ ಮೇಲೆ ತಮ್ಮ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.


ಇಂದು ಶಾರುಕ್ ಬಾಲಿವುಡ್ ನಲ್ಲಿ ಒಂದು ಹಿಟ್ ಗಾಗಿ ಕಾತರರಾಗಿರಬಹುದು. ಆದರೆ, ಒಂದು ಕಾಲದಲ್ಲಿ ಇದೆ ಬಿ-ಟೌನ್ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ದಿಲ್ ವಾಲೆ, ದಿವಾನಾ, ದಿಲ್ ವಾಲೆ ದುಲ್ಹನಿಯಾ ಲೆ ಜಾಯೆಂಗೆ, ಬಾಜಿಗರ್, ಡರ್, ದಿಲ್ ತೋ ಪಾಗಲ್ ಹೈ, ಕರಣ್ ಅರ್ಜುನ್, ದೇವದಾಸ್, ಮೈ ನೆಮ್ ಇಸ್ ಖಾನ್, ಕಭಿ ಖುಷಿ ಕಭಿ ಗಮ್, ಓಂ ಶಾಂತಿ ಓಂ, ಪರದೇಸ್ ಹಾಗೂ ಚಕ್ ದೆ ಇಂಡಿಯಾಗಳಂತಹ ಇನ್ನೂ ಹಲವಾರು ಹಿಟ್ ಚಿತ್ರಗಳಲ್ಲಿ ನೀಡಿರುವುದು ಮಾತ್ರ ನಿಜ.