ವಿಶ್ವದ ನಂ.1 ಶ್ರೀಮಂತ ಸಿಇಒ ರಾಜೀನಾಮೆ ನಿರ್ಧಾರ ಏಕೆ..? Amazonನಲ್ಲಿ ಅಂತಾದ್ದೇನಾಗಿತ್ತು..?
ಅಮೆಜಾನ್ ಸಿಇಒ ಜೆಫ್ ಬೆಜೊಸ್ ಶೀಘ್ರವೇ ತಮ್ಮ ಪದವಿಗೆ ರಾಜೀನಾಮೆ ನೀಡಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವರು ಪದತ್ಯಾಗ ಮಾಡುವ ಸಾಧ್ಯತೆಗಳಿವೆ.
ವಾಷಿಂಗ್ಟನ್ : ಅಮೆಜಾನ್ (Amazon) ಸಿಇಒ (CEO) ಜೆಫ್ ಬೆಜೊಸ್ (Jeff Bezos) ಶೀಘ್ರವೇ ತಮ್ಮ ಪದವಿಗೆ ರಾಜೀನಾಮೆ ನೀಡಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವರು ಪದತ್ಯಾಗ ಮಾಡುವ ಸಾಧ್ಯತೆಗಳಿವೆ. ತಮ್ಮ ಕಂಪನಿಯ ನೌಕರರಿಗೆ ಒಂದು ಪತ್ರ ಬರೆದಿರುವ ಜೆಫ್ ಬೆಜೊಸ್, ಅದರಲ್ಲಿ ತಮ್ಮ ನಿರ್ಣಯ ಪ್ರಕಟಿಸಿದ್ದಾರೆ. ಅಂಡಿ ಜೆಸಿ (Andy Jassy) ಕಂಪನಿಯ ಮುಂದಿನ ಸಿಇಒ ಆಗಲಿದ್ದಾರೆ ಎಂದು ಜೆಫ್ ಪತ್ರದಲ್ಲಿ ಹೇಳಿದ್ದಾರೆ.
ಜೆಫ್ ಬರೆದ ಪತ್ರದಲ್ಲೇನಿದೆ..?:
“ನಾನು ಕಂಪನಿಯ ಸಿಇಒ ಸ್ಥಾನ ತ್ಯಜಿಸುತ್ತಿದ್ದೇನೆ. ಕಾರ್ಯಕಾರಿ ಅಧ್ಯಕ್ಷನಾಗಿ (President) ಮುಂದುವರಿಯಲಿದ್ದೇನೆ. ಅಮೆಜಾನ್ ವೆಬ್ ಪೋರ್ಟಲ್ (Web Portal) ಮುಖ್ಯಸ್ಥರಾಗಿರುವ ಅಂಡಿ ಜೆಸಿ ಕಂಪನಿಯ ಹೊಸ ಸಿಇಒ ಆಗಲಿದ್ದಾರೆ. ಅಂಡಿ ಜೆಸಿ ಬಗ್ಗೆ ನನಗೆ ತುಂಬಾ ಭರವಸೆ ಇದೆ. ಅವರೊಬ್ಬ ಶ್ರೇಷ್ಠ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಕಂಪನಿಯ ಕಾರ್ಯಕಾರಿ ಅಧ್ಯಕ್ಷನಾಗಿ ನಾನು ಹೊಸ ಉತ್ಪನ್ನಗಳತ್ತ ಗಮನ ಕೇಂದ್ರೀಕರಿಸುತ್ತೇನೆ ’’ ಎಂದು ಬರೆದಿದ್ದಾರೆ.
“ಈ ಯಾತ್ರೆ 27 ವರ್ಷದ ಹಿಂದೆ ಶುರುವಾಗಿತ್ತು. ಆಗ ಅಮೆಜಾನ್ ಒಂದು ವಿಚಾರಧಾರೆಯಾಗಿತ್ತು. ಯಾವುದೇ ಹೆಸರು ಇರಲಿಲ್ಲ. 13 ಲಕ್ಷ ಜನರಿಗೆ ನಾವು ಉದ್ಯೋಗ ನೀಡುತ್ತಿದ್ದೇವೆ. ಅಸಂಖ್ಯ ಗ್ರಾಹಕರು ನಮ್ಮೊಂದಿಗಿದ್ದಾರೆ. ಜಗತ್ತಿನ ಯಶಸ್ವಿ ಕಂಪನಿಗಳೊಂದಿಗೆ ನಮ್ಮ ತುಲನೆಯಾಗುತ್ತಿದೆ” ಎಂದು ಜೆಫ್ (Jeff Bezos) ಹೇಳಿದ್ದಾರೆ.
ಇದನ್ನೂ ಓದಿ :
ವಿಶ್ವದ ನಂ1. ಶ್ರೀಮಂತ ಸಿಇಒ ಜೆಫ್ :
ಅಮೆಜಾನಿನ (Amazon) ಸಿಇಒ ಜೆಫ್ ಬೆಜೋಸ್ ವಿಶ್ವದ ನಂ.1 ಶ್ರೀಮಂತ ಸಿಇಒ ಎಂದೆನಿಸಿದ್ದಾರೆ. ಅವರ ಆಸ್ತಿ ಮೌಲ್ಯ ಹೆಚ್ಚುಕಡಿಮೆ 120 ಶತಕೋಟಿ ಡಾಲರ್. ಸಂಪೂರ್ಣ ವಿಶ್ವವೇ ಕರೋನಾ (COVID-19) ಮಹಾಮಾರಿಯಂದ ಬಳಲುತ್ತಿರುವಾಗಲೂ, ಜೆಫ್ ಬೆಜೋಸ್ ನೇತೃತ್ವದ ಅಮೆಜಾನ್ ಸಾಕಷ್ಟು ಭರ್ಜರಿ ಲಾಭ ಗಳಿಸಿತ್ತು. ಜೆಫ್ ಬೆಜೋಸ್ ಇನ್ನು ಅಮೆಜಾನಿನ ಭವಿಷ್ಯದ ಉತ್ಪನ್ನಗಳತ್ತ ತಮ್ಮ ಗಮನ ಕೇಂದ್ರೀಕರಿಸಲಿದ್ದಾರೆ.
ಇದನ್ನೂ ಓದಿ :
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.