Kabul Airport ಬಳಿ ರಾಕೆಟ್ ದಾಳಿ, ಸ್ಫೋಟದಲ್ಲಿ ಇಬ್ಬರ ಸಾವು, ಮೂವರಿಗೆ ಗಾಯ
Rocket Attack Near Kabul Airport - ಕಾಬೂಲ್ ವಿಮಾನ ನಿಲ್ದಾಣದ (Kabul Airport)ಬಳಿ ಮತ್ತೊಮ್ಮೆ ದೊಡ್ಡ ದಾಳಿ (Terror Attack) ನಡೆದಿದೆ. ಈ ಬಾರಿ ಭಯೋತ್ಪಾದಕರು ರಾಕೆಟ್ ನಿಂದ ಮನೆಯೊಂದನ್ನು ಗುರಿಯಾಗಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ.
ಕಾಬುಲ್: Rocket Attack Near Kabul Airport - ಅಫ್ಘಾನಿಸ್ತಾನದಲ್ಲಿ (Afghanistan) ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಏತನ್ಮಧ್ಯೆ, ಕಾಬೂಲ್ ವಿಮಾನ ನಿಲ್ದಾಣದ (Kabul Airport) ಬಳಿ ಖ್ವಾಜಾ ಬುಗ್ರಾ ಪ್ರದೇಶದಲ್ಲಿ ರಾಕೆಟ್ ದಾಳಿ (Rocket Attack) ನಡೆದ ಕುರಿತು ವರದಿಯಾಗಿದೆ. ಈ ದಾಳಿಯ ವೀಡಿಯೋ ಕೂಡ ಹೊರಬಂದಿದ್ದು, ಇದರಲ್ಲಿ ಮನೆಯೊಂದರಿಂದ ಹೊಗೆ ಬರುತ್ತಿದೆ.
ಇದನ್ನೂ ಓದಿ-Afghanistan Crisis: ಅಫ್ಘಾನಿಸ್ತಾನದ ಮೇಲೆ ಯಾರ ಕಂಟ್ರೋಲ್, ನೇತೃತ್ವಕ್ಕಾಗಿ ತಾಲಿಬಾನಿಗಳಲ್ಲಿ ಗುಂಪುಗಾರಿಕೆ
Kabul Airport Alert: ತನ್ನ ನಾಗರಿಕರಿಗೆ ಕಾಬೂಲ್ ವಿಮಾನ ನಿಲ್ದಾಣ ಪ್ರದೇಶ ತೊರೆಯುವಂತೆ ಹೇಳಿದ ಅಮೆರಿಕ
ಈ ಮೊದಲೇ US ಎಚ್ಚರಿಕೆಯನ್ನು ನೀಡಿತ್ತು (Kabul Airport Attack)
ಇಂದು ಬೆಳಗ್ಗೆ ಕಾಬೂಲ್ ವಿಮಾನ ನಿಲ್ದಾಣದ (Kabul Airport) ಬಳಿ ಮತ್ತೊಂದು ಭಯೋತ್ಪಾದಕ ದಾಳಿಯ ನಡೆಯುವ ಕುರಿತು ಅಮೆರಿಕ ಎಚ್ಚರಿಕೆಯನ್ನು ನೀಡಿತ್ತು. ಅಮೆರಿಕದ ನಾಗರಿಕರು ಈ ಸಮಯದಲ್ಲಿ ವಿಮಾನ ನಿಲ್ದಾಣ ಮತ್ತು ಅದರ ಎಲ್ಲಾ ದ್ವಾರಗಳ ಕಡೆಗೆ ಹೋಗುವುದನ್ನು ತಪ್ಪಿಸಬೇಕು ಎಂದು ಯುಎಸ್ ರಾಜ್ಯ ಇಲಾಖೆ ಗುಪ್ತಚರ ವರದಿಯ ಆಧಾರದ ಮೇಲೆ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ವರದಿ ನಿರ್ದಿಷ್ಟವಾಗಿ ದಕ್ಷಿಣ (ಏರ್ಪೋರ್ಟ್ ಸರ್ಕಲ್) ಗೇಟ್ ಮತ್ತು ವಿಮಾನ ನಿಲ್ದಾಣದ ವಾಯುವ್ಯ ಭಾಗದಲ್ಲಿರುವ ಪಂಜಶೀರ್ ಪೆಟ್ರೋಲ್ ಸ್ಟೇಷನ್ ಬಳಿಯ ಗೇಟ್ ಅನ್ನು ಉಲ್ಲೇಖಿಸುತ್ತದೆ.
ಇದನ್ನೂ ಓದಿ-ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.