US Military Airstrike On ISIS- K: ಕಾಬೂಲ್ - ISIS-K ನ ನೆಲೆಗಳನ್ನು ಗುರಿಯಾಗಿಸಿ ಮೇಲೆ US ಸೇನೆಯು ವಾಯುದಾಳಿಯನ್ನು ನಡೆಸಿದೆ. ಪೂರ್ವ ಅಫ್ಘಾನಿಸ್ತಾನದಲ್ಲಿ ಈ ಡ್ರೋನ್ ದಾಳಿ ನಡೆದಿದೆ. ಕಾಬೂಲ್ (Kabul) ಸ್ಫೋಟದ ನಂತರ ಅಮೆರಿಕ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿತ್ತು. ಈ ದಾಳಿಯಲ್ಲಿ ಐಸಿಸ್-ಕೆ ನ ಮಾಸ್ಟರ್ ಮೈಂಡ್ ಸಾವನ್ನಪ್ಪಿದ್ದಾನೆ ಎಂದು ಅಮೆರಿಕ ಹೇಳಿಕೊಂಡಿದೆ.
ISIS ನೆಲೆಗಳ ಮೇಲೆ ವಾಯು ದಾಳಿ
ಕಾಬೂಲ್ (Kabul Serial Blasts) ಸರಣಿ ಸ್ಫೋಟಗಳಿಗೆ ಪ್ರತಿಕ್ರಿಯೆಯಾಗಿ, ಅಮೆರಿಕವು ಐಸಿಸ್-ಕೆ ಮೇಲೆ ಈ ವಾಯುದಾಳಿ ನಡೆಸಿದೆ ಎಂಬುದು ಇಲ್ಲಿ ಗಮನಾರ್ಹ. ಈ ದಾಳಿಯಲ್ಲಿ ಐಸಿಸ್-ಕೆ ಭಾರೀ ನಷ್ಟವನ್ನು ಅನುಭವಿಸಿದೆ ಎಂದು ವರದಿಯಾಗಿದೆ. ಕಾಬೂಲ್ ವಿಮಾನ ನಿಲ್ದಾಣದ (Kabul Airport) ಮೇಲೆ ದಾಳಿ ನಡೆದ 36 ಗಂಟೆಗಳಲ್ಲಿ, ಯುಎಸ್ ಐಸಿಸ್-ಕೆ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಯುಎಸ್ ಡ್ರೋನ್ ಐಸಿಸ್-ಕೆ ಅನ್ನುಗುರಿಯಾಗಿಸಿದೆ.
ದಾಳಿಯಲ್ಲಿ ಹಲವು ಉಗ್ರರ ಹತ್ಯೆ
ಅಫ್ಘಾನಿಸ್ತಾನದ (Afghanistan) ನಂಗರ್ ಹಾರ್ ಪ್ರಾಂತ್ಯದಲ್ಲಿರುವ ಐಸಿಸ್-ಕೆ ನೆಲೆಗಳ ಮೇಲೆ ಯುಎಸ್ ಸೇನೆಯು ವಾಯುದಾಳಿ ನಡೆಸಿದೆ ಎಂದು ಯುಎಸ್ ಸೇನೆಯ ವಕ್ತಾರ ನೇವಿ ಕ್ಯಾಪ್ಟನ್ ಬಿಲ್ ಅರ್ಬನ್ ಹೇಳಿದ್ದಾರೆ. ನಾವು ನಿಗದಿತ ಗುರಿಯನ್ನು ಮುಟ್ಟಿದ್ದೇವೆ ಮತ್ತು ಈ ಕುರಿತು ಸೂಚನೆಗಳು ಕೂಡ ಲಭಿಸಿವೆ ಆದರೆ, ಈ ದಾಳಿಯಲ್ಲಿ ಯಾವುದೇ ನಾಗರಿಕ ಸಾವನ್ನಪ್ಪಿಲ್ಲ ಎಂದು ಅವರು ಹೇಳಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಸುರಕ್ಷತೆಯಲ್ಲಿ ಹೆಚ್ಚಳ
ಅಮೆರಿಕದ ರಾಷ್ಟ್ರೀಯ ಭದ್ರತಾ ತಂಡವು ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿ ಮಾಡಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಕೋರಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸುತ್ತಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭಯೋತ್ಪಾದಕ ದಾಳಿಯ ಸಾಧ್ಯತೆಯನ್ನು ಅಮೆರಿಕ ವ್ಯಕ್ತಪಡಿಸಿದೆ.
ಇದನ್ನೂ ಓದಿ-Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್
ಅಫ್ಘಾನಿಸ್ತಾನದ ನಂಗರ್‌ಹಾರ್‌ನಲ್ಲಿ ಯುಎಸ್ ಸೇನೆಯ ವಾಯುದಾಳಿ ನಡೆದಿದೆ. ನಂಗರ್‌ಹಾರ್‌ನಲ್ಲಿ ಐಸಿಸ್ ಭಯೋತ್ಪಾದಕರು ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಈ ಪ್ರದೇಶವು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿದೆ. ಅಫ್ಘಾನಿಸ್ತಾನದ ವಶಕ್ಕೆ ಪಡೆದ ಬಳಿಕ ತಾಲಿಬಾನ್ (Taliban) ಆಫ್ಘಾನಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದ ಹಲವು ISIS-K ಭಯೋತ್ಪಾದಕರು ಸೇರಿದಂತೆ ಇತರೆ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದು ಇಲ್ಲಿ ಗಮನಾರ್ಹ .
ಇದನ್ನೂ ಓದಿ-Pakistan ಚಿತ್ರಣವನ್ನು ಬದಲಾಯಿಸಲು ಪತ್ರಕರ್ತರ ಮೊರೆ ಹೋದ ಪಾಕಿಸ್ತಾನ, ನೀಡಿದೆ ಈ ದೊಡ್ಡ ಜವಾಬ್ದಾರಿ
ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಬಳಿಕ ಮಾತನಾಡಿದ್ದ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್, ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಸರಣಿ ಬಾಂಬ್ ಬ್ಲಾಸ್ಟ್ ನಲ್ಲಿ ಶಾಮೀಲಾಗಿರುವ ಉಗ್ರರನ್ನು ಹೆಕ್ಕಿ ಹತ್ಯೆಗೈಯಲಾಗುವುದು ಎಂದು ಅವರು ಹೇಳಿದ್ದರು. ಅಫ್ಘಾನಿಸ್ತಾನದಲ್ಲಿರುವ ಐಸಿಸ್-ಕೆ ನೆಲೆಗಳ ಮೇಲೆ ವಾಯು ದಾಳಿ ನಡೆಸುವ ಮೂಲಕ ಯುಎಸ್ ಸೇನೆಯು ಹೇಳಿದಂತೆಯೇ ಮಾಡಿ ತೋರಿಸಿದೆ. ಕಾಬೂಲ್ ಸ್ಫೋಟದಲ್ಲಿ ಅಮೆರಿಕದ ಸೈನಿಕರು ಹತ್ಯೆಯಾದ ನಂತರ ಯುಎಸ್ ಒಂದು ರೀತಿಯಲ್ಲಿ ಒತ್ತಡದಲ್ಲಿದ್ದು, ನಂತರ ಈ ಏರ್ ಸ್ಟ್ರೈಕ್ ನಡೆಸಿದೆ.
ಇದನ್ನೂ ಓದಿ-Kabul Blast Update: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ಬಗ್ಗೆ ಅಮೇರಿಕ ಎಚ್ಚರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.