ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ ಮತ್ತು ಗಾಯಗೊಂಡವರ ಸಂಖ್ಯೆಯು 107 ತಲುಪಿದೆ. ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಉಪಾಧ್ಯಕ್ಷ  ಅಬ್ದುಲ್ ರಶೀದ್ ದೋಸ್ತಮ್ ಆಗಮನದ ನಂತರ ಆತ್ಮಹತ್ಯಾ ಬಾಂಬರ್ ದಾಳಿ ನಡೆದಿತ್ತು. 


COMMERCIAL BREAK
SCROLL TO CONTINUE READING

ಸುಮಾರು ಒಂದು ವರ್ಷದ ನಂತರ ದೋಸ್ತಮ್ ಟರ್ಕಿಯಿಂದ ಮನೆಗೆ ಮರಳಿದ್ದಾರೆ. ಅಬ್ದುಲ್ ರಶೀದ್ ದೋಸ್ತಮ್  ಸ್ವಾಗತಿಸಲು  ಸರ್ಕಾರದ ಹಿರಿಯ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಅವರ ಬೆಂಬಲಿಗರು ಆಗಮಿಸಿದ್ದರು. ದೋಸ್ತಮ್ ವಿಮಾನ ನಿಲ್ದಾಣದಿಂದ ಹೊರಡುವ ಸಂದರ್ಭದಲ್ಲಿ ಈ ದಾಳಿ ನಡೆದಿತ್ತು. 


ಸಾರ್ವಜನಿಕ ಆರೋಗ್ಯ ಸಚಿವಾಲಯದ ಪ್ರೆಸ್ ಆಫೀಸ್ನ ಅಧಿಕೃತ ಅಧಿಕಾರಿಯೊಬ್ಬರು ಅನಾಮಧೇಯತೆಯ ಸ್ಥಿತಿಯ ಕುರಿತು ಎಎಫ್ಎ ಸುದ್ದಿ ಸಂಸ್ಥೆಗೆ ತಿಳಿಸಿದರು, "ಸತ್ತವರ ಸಂಖ್ಯೆಯು 23ಕ್ಕೆ ತಲುಪಿದೆ ಮತ್ತು 107 ಜನರು ಗಾಯಗೊಂಡಿದ್ದಾರೆ". ಸತ್ತವರು ಮತ್ತು ಗಾಯಗೊಂಡವರಲ್ಲಿ ನಾಗರೀಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ ಎಂದು ಅವರು ಹೇಳಿದರು. ಸತ್ತವರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದ್ದು, ಅವರಲ್ಲಿ ಎಷ್ಟು ಮಂಡಿ ನಾಗರಿಕರು ಮತ್ತು ಎಷ್ಟು ಮಂಡಿ ಸಿಬ್ಬಂದಿ ಎಂದು ನಂತರವಷ್ಟೇ ತಿಳಿಯಲಿದೆ ಎಂದಿದ್ದಾರೆ.


ಭಯೋತ್ಪಾದಕ ಸಂಸ್ಥೆ ಇಸ್ಲಾಮಿಕ್ ಸ್ಟೇಟ(ಐಸಿಸ್) ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಅಬ್ದುಲ್ ರಶೀದ್ ದೋಸ್ತಮ್ ತನ್ನ ಗುರಿ ಎಂದು ಐಸಿಸ್ ಹೇಳಿದೆ.