ಕಾಬೂಲ್: ಅಫಘಾನ್ ರಾಜಧಾನಿಯ ಶಿಕ್ಷಣ ಕೇಂದ್ರವೊಂದರ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿ (Suicide bomb attack)ಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ಏರಿದ್ದು, ಕನಿಷ್ಠ 70 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲವು ಸ್ಪುಟ್ನಿಕ್ಗೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಏತನ್ಮಧ್ಯೆ ಅಫಘಾನ್ ಆರೋಗ್ಯ ಸಚಿವಾಲಯದ ಮೂಲವೊಂದು ಸ್ಪುಟ್ನಿಕ್ಗೆ ಸ್ಫೋಟದಿಂದ ಸಾವನ್ನಪ್ಪಿದವರ ಸಂಖ್ಯೆ 18 ಆಗಿದ್ದು, ಇನ್ನೂ 50 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು.
ಮೂಲಗಳ ಪ್ರಕಾರ,  ಗಾಯಾಳುಗಳಲ್ಲಿ 37 ಮಂದಿಯನ್ನು ಕಾಬೂಲ್‌ನ ಜಿನ್ನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


ಶನಿವಾರ ಆತ್ಮಾಹುತಿ ದಾಳಿಕೋರರು ಕಾಬೂಲ್‌ನ (Kabul) ಪಶ್ಚಿಮ ದಶ್-ಎ-ಬಾರ್ಚಿ ನೆರೆಹೊರೆಯ ಪುಲ್-ಎ-ಖೋಷ್ಕ್ ಪ್ರದೇಶದ ಕಾವ್ಸರ್ ಇ-ಡ್ಯಾನಿಶ್ ಶಿಕ್ಷಣ ಕೇಂದ್ರದ ಬಳಿ ಬಾಂಬ್ ಸ್ಫೋಟಿಸಿದ್ದಾರೆ.


ಅಫ್ಘಾನಿಸ್ತಾನದ (Afghanistan) ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಪ್ರಕಾರ ದಾಳಿಕೋರನು ಶಿಕ್ಷಣ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ದಾಳಿಕೋರನನ್ನು ಭದ್ರತಾ ಸಿಬ್ಬಂದಿ ಗುರುತಿಸಿದ್ದಾರೆ "ನಂತರ ಅವನು ತನ್ನ ಸ್ಫೋಟಕಗಳನ್ನು ಅಲ್ಲೆ ಸ್ಫೋಟಿಸಿದನು" ಎಂದು ತಿಳಿದುಬಂದಿದೆ.


ಅಫ್ಘಾನಿಸ್ತಾನ: ಕಾಬೂಲ್‌ನ ಗುರುದ್ವಾರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಓರ್ವ ಭಾರತೀಯ ಮೃತ


ಇಸ್ಲಾಮಿಕ್ ಸ್ಟೇಟ್ ಗುಂಪು ತನ್ನ ಸೋಷಿಯಲ್ ಮೀಡಿಯಾ ಚಾನೆಲ್‌ಗಳಲ್ಲಿ ಪೋಸ್ಟ್ ಮಾಡಿದ ಸಂದೇಶಗಳಲ್ಲಿ ಈ ದಾಳಿಯ ಹಿಂದೆ ಇದೆ ಎಂದು ಹೇಳಿದೆ, ಆದರೆ ಇದಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ. ಇದಕ್ಕೂ ಮೊದಲು ತಾಲಿಬಾನ್ ದಾಳಿಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿತ್ತು


ಕಾಬೂಲ್‌ನ ತರಬೇತಿ ಕೇಂದ್ರವೊಂದರ ಮೇಲೆ ನಡೆದ ಆತ್ಮಾಹುತಿ ದಾಳಿಯನ್ನು ಅಮಾನವೀಯ ಮತ್ತು ಇಸ್ಲಾಮಿಕ್ ತತ್ವಗಳು ಮತ್ತು ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ರಾಷ್ಟ್ರೀಯ ಸಾಮರಸ್ಯದ ಉನ್ನತ ಮಂಡಳಿಯ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.