ಅಮೇರಿಕಾಕ್ಕೆ ಸೆಡ್ಡು ಹೊಡೆಯಲು ಸನ್ನದ್ದವಾದ ಉತ್ತರ ಕೊರಿಯಾ
ಕಳೆದ ಎರಡು ವರ್ಷಗಳಲ್ಲಿ ಪಯೋಂಗ್ಯಾಂಗ್ ಮತ್ತು ವಾಷಿಂಗ್ಟನ್ ನಡುವಿನ ಸಂಬಂಧಗಳಲ್ಲಿ ಯಾವುದೇ ಸುಧಾರಣೆಯಿಲ್ಲದ ಕಾರಣ ಕಿಮ್ ಜೊಂಗ್ ನೇತೃತ್ವದ ಉತ್ತರ ಕೊರಿಯಾ ಅಮೆರಿಕದಿಂದ ಮಿಲಿಟರಿ ಬೆದರಿಕೆಗಳ ವಿರುದ್ಧ ಹೆಚ್ಚು ವಿಶ್ವಾಸಾರ್ಹ ಬಲವನ್ನು ನಿರ್ಮಿಸುವುದಾಗಿ ಎಚ್ಚರಿಸಿದೆ.
ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಪಯೋಂಗ್ಯಾಂಗ್ ಮತ್ತು ವಾಷಿಂಗ್ಟನ್ ನಡುವಿನ ಸಂಬಂಧಗಳಲ್ಲಿ ಯಾವುದೇ ಸುಧಾರಣೆಯಿಲ್ಲದ ಕಾರಣ ಕಿಮ್ ಜೊಂಗ್ ನೇತೃತ್ವದ ಉತ್ತರ ಕೊರಿಯಾ ಅಮೆರಿಕದಿಂದ ಮಿಲಿಟರಿ ಬೆದರಿಕೆಗಳ ವಿರುದ್ಧ ಹೆಚ್ಚು ವಿಶ್ವಾಸಾರ್ಹ ಬಲವನ್ನು ನಿರ್ಮಿಸುವುದಾಗಿ ಎಚ್ಚರಿಸಿದೆ.
ಕಿಮ್ ಜೊಂಗ್-ಉನ್ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಐತಿಹಾಸಿಕ ಶೃಂಗಸಭೆಯ ಎರಡು ವರ್ಷಗಳ ನಂತರ ಇವರಿಬ್ಬರ ನಡುವಿನ ಸಂಬಂಧದಲ್ಲಿ ಯಾವುದೇ ಸುಧಾರಣೆಗೆ ಕಾರಣವಾಗದ ಕಾರಣ ತಮ್ಮ ದೇಶವು ಶ್ವೇತಭವನದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸುವ ಪ್ರಯತ್ನಗಳನ್ನು ತ್ಯಜಿಸುತ್ತಿದೆ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವ ರಿ ಸನ್-ಗ್ವಾನ್ ಹೇಳಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ದಾಖಲೆಗೆ ಸಹಿ ಹಾಕಿದ ಡೊನಾಲ್ಡ್ ಟ್ರಂಪ್, ಕಿಮ್ ಜಾಂಗ್ ಉನ್
ಅಧ್ಯಕ್ಷ ಟ್ರಂಪ್ ಮತ್ತು ಕಿಮ್ ನಡುವಿನ ಐತಿಹಾಸಿಕ ಹ್ಯಾಂಡ್ಶೇಕ್ ಎರಡು ವರ್ಷಗಳ ನಂತರ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಆಶಾವಾದದ ಒಂದು ತೆಳು ಕಿರಣ ಕೂಡ ಕರಾಳ ದುಃಸ್ವಪ್ನವಾಗಿ ಮರೆಯಾಯಿತು ಎಂದು ರಿ ಸೋನ್-ಗ್ವಾನ್ ಹೇಳಿದ್ದಾರೆ.ಟ್ರಂಪ್ ತನ್ನ ರಾಜಕೀಯ ಸಾಧನೆಗಳೆಂದು ಹೆಮ್ಮೆಪಡಲು ಬಳಸಬಹುದಾದ ಮತ್ತೊಂದು ಪ್ಯಾಕೇಜ್ ಅನ್ನು ಪಯೋಂಗ್ಯಾಂಗ್ ಯುಎಸ್ ಗೆ ಎಂದಿಗೂ ಒದಗಿಸುವುದಿಲ್ಲ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವರು ಹೇಳಿದರು.
ಉತ್ತರ ಕೊರಿಯಾದ ಸುರಕ್ಷಿತ ಕಾರ್ಯತಂತ್ರದ ಗುರಿ ಯುಎಸ್ನಿಂದ ದೀರ್ಘಕಾಲದ ಮಿಲಿಟರಿ ಬೆದರಿಕೆಗಳನ್ನು ನಿಭಾಯಿಸಲು ಹೆಚ್ಚು ವಿಶ್ವಾಸಾರ್ಹ ಬಲವನ್ನು ನಿರ್ಮಿಸುವುದು. ಇದು ಜೂನ್ 12 ರ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಯುಎಸ್ಗೆ ನಮ್ಮ ಸಂದೇಶವಾಗಿದೆ ಎಂದು ರಿ ಸೋನ್-ಗ್ವಾನ್ ಹೇಳಿದ್ದಾರೆ.