ಪ್ಯೊಂಗ್ಯಾಂಗ್: ದೀರ್ಘಕಾಲದಿಂದ ಇಡೀ ಜಗತ್ತಿಗೆ ತಲೆನೋವಾಗಿರುವ ಉತ್ತರ ಕೊರಿಯಾ  ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಪಾಯವನ್ನುಂಟುಮಾಡಬಹುದು. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರು ಅಂತರರಾಷ್ಟ್ರೀಯ ಒತ್ತಡ ಮತ್ತು ಎಲ್ಲಾ ನಿರ್ಬಂಧಗಳ ನಡುವೆಯೂ ತಮ್ಮ ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಭೆಯ ಮುಕ್ತಾಯದಲ್ಲಿ, ಶತ್ರುಗಳಿಗೆ ಸೂಕ್ತವಾದ ಉತ್ತರವನ್ನು ನೀಡಲು ಸೈನ್ಯವನ್ನು ಬಲಪಡಿಸಲು, ಗರಿಷ್ಠ ಗಮನ ನೀಡಲಾಗುವುದು ಎಂದು ಕಿಮ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

8 ದಿನಗಳ ಸಭೆ :
ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ) ಪ್ರಕಾರ, ಎಂಟು ದಿನಗಳ ಕಾಂಗ್ರೆಸ್ ಸಭೆ ಮಂಗಳವಾರ ಕೊನೆಗೊಂಡಿದೆ. ಈ ಸಂದರ್ಭದಲ್ಲಿ ಕಿಮ್ ಜೊಂಗ್ ಉನ್, "ನಾವು ನಮ್ಮ ಮಿಲಿಟರಿ ಸಾಮರ್ಥ್ಯಗಳನ್ನು ಬಲಪಡಿಸಬೇಕು, ನಾವು ಹೊಸ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಪರಮಾಣು ಯುದ್ಧ ತಡೆಗಟ್ಟುವ ದಳವನ್ನು ಪರಿಣಾಮಕಾರಿಯಾಗಿ ಮಾಡಬೇಕು" ಎಂದು ಹೇಳಿದರು. ಸರ್ವಾಧಿಕಾರಿ ಕಿಮ್ ಜೊಂಗ್ ಉನ್ (Kim Jong Un) ದೇಶದ ಕ್ಷೀಣಿಸುತ್ತಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಬಗ್ಗೆಯೂ ಮಾತನಾಡಿದರು. ಹಿಂದಿನ ಅನುಭವಗಳ ಆಧಾರದ ಮೇಲೆ ಮುಂದಿನ ಐದು ವರ್ಷಗಳ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಅದರ ಸಹಾಯದಿಂದ ನಾವು ಮತ್ತೆ ಆರ್ಥಿಕತೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಇದರಲ್ಲಿ ಕೃಷಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ  ಎಂದು ಕಿಮ್ ಹೇಳಿದರು.


ಇದನ್ನೂ ಓದಿ - ಅಪರೂಪದ ಕಾರ್ಡ್‌ನೊಂದಿಗೆ ‘Happy New Year’ ತಿಳಿಸಿದ Kim Jong-un : ಶಾಕ್ ಆದ ಜನ


ಅಪಾಯಕಾರಿ ಶಸ್ತ್ರಾಸ್ತ್ರಗಳ ತಯಾರಿಕೆಗೆ ಆದೇಶ : 
ಮಿಲಿಟರಿ ಪಡೆಗಳನ್ನು ಬಲಪಡಿಸಲು, ಹಲವಾರು ಸಿಡಿತಲೆ ಕ್ಷಿಪಣಿಗಳು, ನೀರೊಳಗಿನ ಪರಮಾಣು ಕ್ಷಿಪಣಿಗಳು, ಪತ್ತೇದಾರಿ ಉಪಗ್ರಹಗಳು ಮತ್ತು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸಲು ಆದೇಶಿಸಲಾಗಿದೆ ಎಂದು ಕಿಮ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮಿಲಿಟರಿ ಶಕ್ತಿಯನ್ನು ಹೆಚ್ಚಿಸದಿದ್ದರೆ ಅದು ತುಂಬಾ ಮೂರ್ಖತನ ಎಂದು ಅಭಿಪ್ರಾಯಪಟ್ಟಿರುವ ಕಿಮ್ ಜಾಂಗ್ ಉನ್ ಪ್ರತಿಯೊಂದು ಅಪಾಯಕ್ಕೂ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ಸರಿಯಾದ ಉತ್ತರವನ್ನು ನೀಡಲು ನಾವು ಸಮರ್ಥರು ಎಂದು ಶತ್ರುಗಳಿಗೆ ಮನವರಿಕೆ ಮಾಡಬೇಕು ಎಂದು ಕರೆ ನೀಡಿದರು.


ಕ್ಷಿಣ ಕೊರಿಯಾದ ಮೇಲೆ ದಾಳಿ : 
ಅದೇ ಸಮಯದಲ್ಲಿ ಕಿಮ್‌ನ ಸಹೋದರಿ ದಕ್ಷಿಣ ಕೊರಿಯಾದ (South Korea) ಮಿಲಿಟರಿಯನ್ನು ಪಯೋಂಗ್ಯಾಂಗ್‌ನ ಮಿಲಿಟರಿ ಪೆರೇಡ್ ಎಂದು ಹೇಳಿದ್ದಕ್ಕಾಗಿ ಟೀಕಿಸಿದ್ದಾರೆ. ಕಳೆದ ವರ್ಷ ಕೊರಿಯಾದ ಅಂತರ ಸಂಬಂಧಗಳ ಉಸ್ತುವಾರಿ ವಹಿಸಿಕೊಂಡಿದ್ದ ಕಿಮ್ ಯೋ ಜೊಂಗ್, ದಕ್ಷಿಣ ಕೊರಿಯಾ ನಮ್ಮನ್ನು ಈ ರೀತಿ ಕಣ್ಗಾವಲು ಮಾಡಿರುವುದು ಅದರ ಪ್ರತಿಕೂಲ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ದಕ್ಷಿಣ ಕೊರಿಯಾದ ಸೈನ್ಯದ ಪರವಾಗಿ ಇದು ಪಯೋಂಗ್ಯಾಂಗ್‌ನಲ್ಲಿ ನಡೆದ ಮಿಲಿಟರಿ ಮೆರವಣಿಗೆಗೆ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ. 


ಇದನ್ನೂ ಓದಿ -  Corona ನಿಯಮ ಉಲ್ಲಂಘಿಸಿದ ನಾಗರಿಕನ ಪ್ರಾಣವನ್ನೇ ತೆಗೆಯಿಸಿದ Kim Jong Un


ಮೊದಲ ಬಾರಿಗೆ ತಪ್ಪನ್ನು ಒಪ್ಪಿಕೊಂಡ ಕಿಮ್ ಜೊಂಗ್ ಉನ್ :
ಈ ಮೊದಲು ಸಭೆಯಲ್ಲಿ ಕಿಮ್ ಜೊಂಗ್ ಉನ್ ಆರ್ಥಿಕ ರಂಗದಲ್ಲಿನ ವೈಫಲ್ಯವನ್ನು ಒಪ್ಪಿಕೊಂಡರು. ದೇಶವು ತನ್ನ ಶಕ್ತಿ ಮತ್ತು ಜಾಗತಿಕ ಖ್ಯಾತಿಯನ್ನು ಬಲಪಡಿಸುವಲ್ಲಿ ಅದ್ಭುತ ವಿಜಯವನ್ನು ಸಾಧಿಸಿದೆ. ಆದರೆ 2016ರಲ್ಲಿ ನಾವು ಐದು ವರ್ಷಗಳ ಆರ್ಥಿಕ ಯೋಜನೆಯನ್ನು ಪೂರ್ಣಗೊಳಿಸಿದ್ದೇವೆ.  ನಾವು ಪ್ರತಿ ವಲಯದಲ್ಲೂ ನಕಾರಾತ್ಮಕ ಪರಿಣಾಮಗಳನ್ನು ನೋಡುತ್ತಿದ್ದೇವೆ. ಕಠಿಣ ಪರಿಶ್ರಮದ ನಂತರ ನಾವು ಸಾಧಿಸಿದ ನಮ್ಮ ಯಶಸ್ಸು ಮತ್ತು ವಿಜಯಗಳನ್ನು ನಾವು ಮುಂದುವರಿಸಬೇಕು ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ನಾವು ಹಿಂದಿನ ಕೆಲವು ಕಹಿ ಅನುಭವಗಳಿಂದ ಪಾಠ ಕಲಿತು ಮುಂದುವರೆಯಬೇಕು ಎಂದವರು ದೇಶವಾಸಿಗಳಿಗೆ ಕರೆ ನೀಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.