Corona ನಿಯಮ ಉಲ್ಲಂಘಿಸಿದ ನಾಗರಿಕನ ಪ್ರಾಣವನ್ನೇ ತೆಗೆಯಿಸಿದ Kim Jong Un

ಸಾರ್ವಜನಿಕರಲ್ಲಿ ಭಯ ಉಂಟುಮಾಡಲು ಕೂಡ ಕಿಮ್ ಜೊಂಗ್ ಉನ್ ಈ ರೀತಿ ಮಾಡಿದ್ದಾನೆ ಎಂದೂ ಕೂಡ ಹೇಳಲಾಗಿದೆ.

Last Updated : Dec 5, 2020, 07:31 PM IST
  • ಕೊರೊನಾ ನಿಯಮ ಉಲ್ಲಂಘಿಸಿದವನನ್ನು ಗುಂಡಿಕ್ಕಿ ಸಾಯಿಸಲು ಆದೇಶ ನೀಡಿದ ಕಿಮ್ ಜೊಂಗ್ ಉನ್.
  • ಈ ಕುರಿತು ನವೆಂಬರ್ 28 ರಂದು ಕಿಮ್ ಜೊಂಗ್ ಉನ್ ಆದೇಶ ಹೊರಡಿಸಿದ್ದ.
  • ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಲು ವ್ಯಕ್ತಿಯನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ.
Corona ನಿಯಮ ಉಲ್ಲಂಘಿಸಿದ ನಾಗರಿಕನ ಪ್ರಾಣವನ್ನೇ ತೆಗೆಯಿಸಿದ Kim Jong Un  title=

ನವದೆಹಲಿ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್   ವಿಶ್ವದಾದ್ಯಂತ ತನ್ನ ಕ್ರೂರತೆಗಾಗಿ ಹೆಸರುವಾಸಿಯಾಗಿದ್ದಾನೆ. ಆತನನ್ನು ವಿಶ್ವಕ್ಕೆ ಬೆದರಿಕೆಯೋಡ್ಡುವವ ಹಾಗೂ ಕ್ರೂರ ಪ್ರವೃತ್ತಿ ಹೊಂದಿದವ ಎಂದೇ ಜನರು ಅವನನ್ನು ಗುರುತಿಸುತ್ತಾರೆ. ಆತನ ನಿರ್ಧಾರಗಳು ಎಷ್ಟೊಂದು ಕ್ರೂರಾಗಿರುತ್ತವೆ ಎಂದರೆ, ಒಂದು ಸಣ್ಣ ತಪ್ಪಿಗೆ ಆತ ನಾಗರಿಕನೋಬ್ಬನ ಪ್ರಾಣ ಕೂಡ ತೆಗೆಯಬಹುದು.  ಕೊಲ್ಲುವ ಶಿಕ್ಷೆ ಯಾರಿಗಾದರೂ ದೊಡ್ಡ ವಿಷಯವಾಗಿದ್ದರೂ, ಅದು ಕಿಮ್‌ಗೆ ಮಾತ್ರ ಸಾಮಾನ್ಯವಾಗಿದೆ. ತನ್ನ ಕುಟುಂಬ ಮತ್ತು ಸಂಬಂಧಿಕರನ್ನು ಕೊಳ್ಳಲು ಕೂಡ ಆತ ಹಿಂಜರಿಯುವುದಿಲ್ಲ. ಸದ್ಯ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಒಂದು ಸಣ್ಣ ತಪ್ಪಿಗೆ ನಾಗರಿಕನೋರ್ವನ ಪ್ರಾಣ ತೆಗೆಯಲು ಕಿಮ್ ಆದೇಶ ನೀಡಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ- ಅಮೇರಿಕಾಕ್ಕೆ ಸೆಡ್ಡು ಹೊಡೆಯಲು ಸನ್ನದ್ದವಾದ ಉತ್ತರ ಕೊರಿಯಾ

ಉತ್ತರ ಕೊರಿಯಾದಲ್ಲಿ ಸದ್ಯ ಕೊರೊನಾ ಹಾಹಾಕಾರ ಸೃಷ್ಟಿಸಿದೆ ಹಾಗೂ ಈ ಹಿನ್ನೆಲೆಯಲ್ಲಿ ಅಲ್ಲಿ ಕಠಿಣ ನಿರ್ಬಂಧನೆಗಳನ್ನು ವಿಧಿಸಲಾಗಿದೆ. ಸ್ವತಃ ಕಿಮ್ ಜೊಂಗ್ ಉನ್ (Kim Jong Un) ಕಳೆದ ಹಲವು ದಿನಗಳಿಂದ ನಾಗರಿಕರಿಂದ ದೂರ ಉಳಿದಿದ್ದಾನೆ ಎನ್ನಲಾಗಿದೆ. ಸದ್ಯ ಬಂದಿರುವ ಒಂದು ವರದಿಯ ಪ್ರಕಾರ ಅಲ್ಲಿನ ನಾಗರಿಕನೋರ್ವ ಕೊರೊನಾ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಹಾಗೂ ಈ ಕಾರಣದಿಂದ ಆತ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಆ ವ್ಯಕ್ತಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಎಂಬ ವಿಷಯ ಕಿಮ್ ಗೆ ತಿಳಿದ ತಕ್ಷಣ ಆತ ಫೈರಿಂಗ್ ಸ್ಕ್ವಾಡ್ ಗೆ ಆ ವ್ಯಕ್ತಿಯನ್ನು ಗುಂಡಿಕ್ಕಿ ಸಾಯಿಸುವಂತೆ ಆದೇಶ ನೀಡಿದ್ದಾನೆ.

ಇದನ್ನು ಓದಿ-ವಿಶ್ವದ ಅತ್ಯಂತ ಶಕ್ತಿಶಾಲಿ Missile ಅನಾವರಣಗೊಳಿಸಿದ ಉತ್ತರ ಕೊರಿಯಾ

ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಲಿ ಎಂಬ ಕಾರಣದ ಹಿನ್ನೆಲೆ ಕೂಡ ಕಿಮ್ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. 'ಡೆಲಿ ಮೇಲ್' ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ನವೆಂಬರ್ 28 ರಂದು ಹೊರಡಿಸಿರುವ ಒಂದು ಆದೇಶದಲ್ಲಿ ಕಿಮ್ ಕೊರೊನಾ ನಿಮಯಗಳನ್ನು ಗಳನ್ನು ಉಲ್ಲಂಘಿಸಿದವರನ್ನು ಗುಂಡಿಕ್ಕಿ ಸಾಯಿಸಲು ಆದೇಶ ನೀಡಿದ್ದ ಎನ್ನಲಾಗಿದೆ. ಕಠಿಣ ನಿರ್ಬಂಧನೆಗಳ ಹೊರತಾಗಿಯೂ ಕೂಡ ವ್ಯಕ್ತಿ ಚೀನಾ ಸರಕುಗಳ ಸ್ಮಗಲಿಂಗ್ ನಲ್ಲಿ ತೊಡಗಿದ್ದ ಎಂದು ಆರೋಪಿಸಲಾಗಿದ್ದು, ಸದ್ಯ ಅವನನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.

Trending News