Lion Buffalo Fight Video - ಸಿಂಹಕ್ಕೆ ದುಸ್ವಪ್ನವಾಗಿ ಪರಿಣಮಿಸಿದ ಕಾಡುಕೋಣದ ಜೊತೆಗಿನ ಕಾದಾಟ
Lion Buffalo Fight Video - ಎರಡು ಕೊಂಬಿನ ಕಾಡುಕೋಣದ ಜೊತೆಗೆ ಕಾದಾಟಕ್ಕೆ ಇಳಿದು ಸಿಂಹವೊಂದು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಸಿಂಹ ಎದುರಿಗೆ ಬಂದರೆ ಸಾಕು ದೊಡ್ಡ ದೊಡ್ಡ ಪ್ರಾಣಿಗಳೇ ತನ್ನ ದಾರಿಯನ್ನು ಬದಲಿಸುತ್ತವೆ, ಆದರೆ, ಈ ಎರಡು ಕೊಂಬಿನ ಕಾಡುಕೋಣ, ಸಿಂಹದ ಪ್ರಾಣವನ್ನೇ ಹೀರಲು ಮುಂದಾಗಿದೆ ಎಂಬಂತೆ ಈ ವಿಡಿಯೋದಲ್ಲಿ ತೋರುತ್ತಿದೆ.
Lion Buffalo Fight Video: ಸಾಮಾನ್ಯವಾಗಿ ಸಿಂಹ ತನ್ನ ಬೇಟೆಯನ್ನು ಕ್ಷಣಾರ್ಧದಲ್ಲಿ ಸೀಳಿ ಹಾಕುತ್ತದೆ. ಅದರ ಒಂದು ಘರ್ಜನೆ ಕೇಳಿದರೆ ಸಾಕು, ಕಾಡಿನ ಎಲ್ಲಾ ಪ್ರಾಣಿಗಳು ತತ್ತರಿಸುತ್ತವೆ. ನೀರಿನ ಒಳ ಹೊಕ್ಕು ಕೂಡ ಸಿಂಹ ಮೊಸಳೆಯ ಬೇಟೆ ಮಾಡುವ ಸಾಕಷ್ಟು ವಿಡಿಯೋಗಳನ್ನು (Viral News) ನೀವು ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಿಸಿರಬಹುದು. ಕೇವಲ ನೋಡಿದರೆಯೇ ಭಯ ಹುಟ್ಟಿಸುವ ಗೆಂಡಾಮೃಗದಿಂದ ಹಿಡಿದು ಜೀರಾಫೆವರೆಗಿನ ಎಲ್ಲಾ ಪ್ರಾಣಿಗಳನ್ನು ಕ್ಷಣಾರ್ಧದಲ್ಲಿ ತನ್ನ ಹರಿತವಾದ ಹಲ್ಲುಗಳಿಂದ ಚಿರನಿದ್ರೆಗೆ ಜಾರುವಂತೆ ಮಾಡುವ ಸಾಮರ್ಥ್ಯ ಸಿಂಹಕ್ಕಿದೆ.
ಸಿಂಹದ ಪ್ರಾಣ ತೆಗೆಯಲು ಮುಂದಾದ ಎರಡು ಕೊಂಬುಗಳ ಕಾಡುಕೋಣ
ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಸಿಂಹವೊಂದು ಎರಡು ಕೊಂಬುಗಳಿರುವ ಕಾಡುಕೋಣದ ಮುಂದೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ.
ಇದನ್ನೂ ಓದಿ-Viral Video : ಎಷ್ಟು ದೂರ ಸರಿದರೂ ಮತ್ತೆ ಮತ್ತೆ ಸಿಂಹಕ್ಕೆ ಮುತ್ತಿಕ್ಕುತ್ತಿರುವ ಆಮೆ
ಸಿಂಹದ ಪ್ರಾಣವನ್ನೇ ತೆಗೆಯಲು ಮುಂದಾದ ಕಾಡುಕೋಣ
ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಸಿಂಹವೊಂದು ಎರಡು ಕೊಂಬುಗಳಿರುವ ಕಾಡುಕೋಣದ ಎದುರು ತನ್ನ ಪ್ರಾಣವನ್ನು ರಕ್ಷಿಸಿಕೊಂಡು ಓಡುತ್ತಿರುವುದನ್ನು ನೀವು ಗಮನಿಸಬಹುದು. ಕಾಡಿನಲ್ಲಿ ದೊಡ್ಡ ದೊಡ್ಡ ಪ್ರಾಣಿಗಳೇ ಸಿಂಹವನ್ನು ಕಂಡು ತನ್ನ ದಾರಿ ಬದಲಾಯಿಸುತ್ತವೆ. ಆದರೆ, ಇಲ್ಲಿ ಎರಡು ಕೊಂಬಿನ ಕಾಡುಕೋಣ ಸಿಂಹದ ಪ್ರಾಣವನ್ನೇ ತೆಗೆಯಲು ಮುಂದಾಗಿದೆ. ಈ ಕಾಡುಕೋಣದ ಮುಂದೆ ಕಾಡಿನ ರಾಜನಿಗೆ ತನ್ನ ಪ್ರಾಣ ಉಳಿಸಿಕೊಳ್ಳುವುದು ಕಷ್ಟ ಎಂಬಂತೆ ತೋರುತ್ತಿದೆ.
ಇದನ್ನೂ ಓದಿ-Viral video : ಮೊಟ್ಟೆ ಕದಿಯಲು ಬಂದವನ ಮೇಲೆ ದಾಳಿ ಮಾಡಿದ ನವಿಲು, ಎದ್ದು ಬಿದ್ದು ಓಡಿದ ಯುವಕ
ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ಸಿಂಹ ಖಾಲಿ ಇರುವ ಮೈದಾನದಲ್ಲಿ ವೇಗವಾಗಿ ಓಡುತ್ತಿದೆ. ಇನ್ನೊಂದೆಡೆ ಕಾಡುಕೋಣ, ಕಾಡಿನ ರಾಜನನ್ನು ಜವರಾಯನಂತೆ ಬೆನ್ನಟ್ಟುತ್ತಿದೆ. ಅಂದರೆ, ಸುಲಭವಾದ ಬೇಟೆಯೊಂದರಿಂದ ಸಿಂಹ ತನ್ನ ಪ್ರಾಣ ರಕ್ಷಿಸಿಕೊಳ್ಳುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಸಾಮಾನ್ಯವಾಗಿ ಸಿಂಹಗಳು ಕಾಡುಕೋಣಗಳನ್ನು ಕ್ಷಣಾರ್ಧದಲ್ಲಿ ಸೀಳಿ ನೆಲಕ್ಕುರುಳಿಸುವ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಈ ವಿಡಿಯೋದಲ್ಲಿ ಸೀನ್ ಉಲ್ಟಾ ಹೊಡೆದಿದೆ ಎಂಬಂತಿದೆ. ಈ ವಿಡಿಯೋವನ್ನು wild_animal_shorts_ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.