ಇಮ್ರಾನ್ ಮೇಲಿನ ದಾಳಿಯ ನಂತರ ಇಸ್ಲಾಮಾಬಾದ್‌ನಲ್ಲಿ ಲಾಕ್‌ಡೌನ್
Lockdown In Islamabad: ಗುರುವಾರ ಗುಜ್ರಾನ್‌ವಾಲಾದಲ್ಲಿ ಮಾಜಿ ಪ್ರಧಾನಿ ಮತ್ತು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರ ಮೇಲೆ ನಡೆದ ಮಾರಣಾಂತಿಕ ದಾಳಿಯ ನಂತರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಅನ್ನು ಸೀಲ್ ಮಾಡಲಾಗಿದೆ.
Lockdown In Islamabad: ಗುರುವಾರ ಗುಜ್ರಾನ್‌ವಾಲಾದಲ್ಲಿ ಮಾಜಿ ಪ್ರಧಾನಿ ಮತ್ತು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರ ಮೇಲೆ ನಡೆದ ಮಾರಣಾಂತಿಕ ದಾಳಿಯ ನಂತರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಅನ್ನು ಸೀಲ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಇಸ್ಲಾಮಾಬಾದ್‌ನಲ್ಲಿ ಲಾಕ್‌ಡೌನ್ ಇರುತ್ತದೆ ಎಂದು ಶೆಹಬಾಜ್ ಷರೀಫ್ ಸರ್ಕಾರ ಆದೇಶಿಸಿದೆ. ಆದಾಗ್ಯೂ, ಇಸ್ಲಾಮಾಬಾದ್‌ನಲ್ಲಿ ಲಾಕ್‌ಡೌನ್ ಸಮಯದಲ್ಲಿ, ಅಗತ್ಯ ಸೇವೆಗಳಿಗೆ ಯಾವುದೇ ನಿಷೇಧವಿರುವುದಿಲ್ಲ. ನೀರು ಸರಬರಾಜು, ಪಡಿತರ ಪೂರೈಕೆ ಮತ್ತು ವೈದ್ಯಕೀಯ ಸೇವೆಗಳು ಇತ್ಯಾದಿಗಳು ಮುಂದುವರಿಯುತ್ತವೆ ಎನ್ನಲಾಗಿದೆ.
[[{"fid":"264343","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಕಾಲಿಗೆ ಗುಂಡು ತಗುಲಿ ಗಾಯಗೊಂಡಿರುವ ಇಮ್ರಾನ್:
ಗುರುವಾರ ಸಂಜೆ, ಪಾಕಿಸ್ತಾನದ ಗುಜ್ರಾನ್‌ವಾಲಾದಲ್ಲಿ ದಾಳಿಕೋರರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಮ್ರಾನ್ ಖಾನ್ ಕಾಲಿಗೆ ಗುಂಡು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಘಟನೆಯ ನಂತರ ಇಮ್ರಾನ್ ಖಾನ್ ಬೆಂಬಲಿಗರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಮ್ರಾನ್ ಖಾನ್ ಅವರ ಪಕ್ಷದ ಪರವಾಗಿ, ದಾಳಿಯ ಹಿಂದೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್, ಆಂತರಿಕ ಸಚಿವ ರಾಣಾ ಸನಾವುಲ್ಲಾ ಮತ್ತು ಹಿರಿಯ ಮಿಲಿಟರಿ ಅಧಿಕಾರಿಯ ಕೈವಾಡವಿದೆ ಎಂದು ಇಮ್ರಾನ್ ಖಾನ್ ಶಂಕಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ- ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ,ಪ್ರಾಣಪಾಯದಿಂದ ಪಾರು
ದಾಳಿ ಖಂಡಿಸಿ ಪ್ರತಿಭಟನೆ:
ಗಮನಾರ್ಹವಾಗಿ, ಗುಜ್ರಾನ್‌ವಾಲಾದಲ್ಲಿ ಪಿಟಿಐನ ಮೆರವಣಿಗೆಯಲ್ಲಿ ಇಮ್ರಾನ್ ಖಾನ್ ಮತ್ತು ಇತರ ಪಿಟಿಐ ನಾಯಕರ ಮೇಲೆ ಗುಂಡು ಹಾರಿಸಿದ ನಂತರ, ದೇಶದಾದ್ಯಂತ ಅನೇಕ ನಗರಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ದಾಳಿಯಲ್ಲಿ ಇಮ್ರಾನ್ ಖಾನ್ ಸೇರಿದಂತೆ ಪಕ್ಷದ ಹಲವು ನಾಯಕರು ಗಾಯಗೊಂಡಿದ್ದಾರೆ.
ಎಆರ್‌ವೈ ನ್ಯೂಸ್‌ನ ವರದಿಯ ಪ್ರಕಾರ, ಪಿಟಿಐನ ಮೆರವಣಿಗೆಯ ವೇಳೆ ಅಲ್ಲಾವಾಲಾ ಚೌಕ್‌ನಲ್ಲಿರುವ ಪಿಟಿಐ ಸ್ವಾಗತ ಶಿಬಿರದ ಬಳಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಮತ್ತು ಇತರ ಪಿಟಿಐ ನಾಯಕರು ಗಾಯಗೊಂಡಿದ್ದಾರೆ. ದಾಳಿಯ ನಂತರ, ಇಮ್ರಾನ್ ಖಾನ್ ಹತ್ಯೆಗೆ ಯತ್ನ ನಡೆದಿದೆ ಎಂದು ಆರೋಪಿಸಿ ದೇಶಾದ್ಯಂತ ಹಲವು ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ ಎಂದು ವರದಿ ಹೇಳಿದೆ.
ಇಮ್ರಾನ್ ಖಾನ್ ಅವರ ಕಂಟೈನರ್ ಮೇಲಿನ ದಾಳಿಯನ್ನು ವಿರೋಧಿಸಿ ಪಿಟಿಐ ಕಾರ್ಯಕರ್ತರು ಕರಾಚಿಯ 17 ಪ್ರದೇಶಗಳಲ್ಲಿ ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದಾರೆ. ಉಗ್ರಗಾಮಿ ಕಾರ್ಯಕರ್ತರು ಉತ್ತರ ಕರಾಚಿಯ ಪವರ್ ಹೌಸ್ ಚೌರಿಂಗ್‌ಘಿಯಲ್ಲಿ ರಸ್ತೆ ತಡೆ ನಡೆಸಿದರೆ, ಕೊರಂಗಿ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಪಿಟಿಐ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕರಾಚಿಯ ಹಲವು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಹಲವಾರು ಪ್ರದೇಶಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಕಂಡುಬಂದಿದೆ.
ಇದನ್ನೂ ಓದಿ- “ನನ್ನ ಮೇಲಿನ ಗುಂಡಿನ ದಾಳಿಗೆ ಮೂವರು ವ್ಯಕ್ತಿಗಳು ಕಾರಣ” ಎಂದ ಇಮ್ರಾನ್ ಖಾನ್
ಇದಲ್ಲದೇ ಲಾಹೋರ್‌ನ ಲಿಬರ್ಟಿ ಚೌಕ್‌ನಲ್ಲಿಯೂ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಫೈಸಲಾಬಾದ್‌ನಲ್ಲಿ, ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಜಮಾಯಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.