Lost City - ಈಜಿಪ್ಟಿನ ಲಕ್ಸಾರ್ ನಗರದ ಪಶ್ಚಿಮ ದಂಡೆಯಲ್ಲಿ 3,000 ವರ್ಷಗಳಷ್ಟು ಹಳೆಯದಾದ (3000 Year Old City Found) ನಗರವೊಂದು ಪತ್ತೆಯಾಗಿದೆ. ನಗರ ಪತ್ತೆಯಾದಾದ ಪ್ರುರತತ್ವ ವಿಭಾಗದ ಶಾಸ್ತ್ರಜ್ಞರು ಇಲ್ಲಿ ಶವಾಗಾರವೊಂದನ್ನು ಪತ್ತೆಹಚ್ಚಲು ಹೋಗಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ನಗರದ ಹೆಸರು ಎಟನ್ (Aten)
ಕಳೆದ ವರ್ಷ ಏಪ್ರಿಲ್‌ನಲ್ಲಿ ಪತ್ತೆಯಾದ ಈ ನಗರವು ಸುಮಾರು 3000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಅದರ ಹೆಸರು ಅಟೆನ್. ಕಳೆದುಹೋದ ಈ ನಗರವನ್ನು, ಟುಟಾನ್ ಖಾಮೆನ್ ಸಮಾಧಿಯ ನಂತರ ಆವಿಷ್ಕರಿಸಲಾದ ಅತ್ಯಂತ ಪ್ರಮುಖವಾದ ನಗರ ಎಂದು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಲ್ಲಿ ಪರಿಗಣಿಸಲಾಗುತ್ತಿದೆ.


ಇದನ್ನೂ ಓದಿ-Russia-Ukraine War: ಪಾಶ್ಚಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪುಟಿನ್


ಈ ನಗರವು ಅತ್ಯಂತ ಶಕ್ತಿಶಾಲಿಯಾಗಿತ್ತು (World News In Kannada)
ಮಾಹಿತಿಯ ಪ್ರಕಾರ, ಒಂದು ಕಾಲದಲ್ಲಿ ಈ ನಗರ ಈಜಿಪ್ಟಿನ ಅತ್ಯಂತ ಶಕ್ತಿಶಾಲಿ ಫೇರೋ ಸಾಮ್ರಾಜ್ಯವಾಗಿತ್ತು ಎನ್ನಲಾಗಿದೆ. ಇದನ್ನು ಅಮೆನ್‌ಹೋಟೆಪ್ III ಸ್ಥಾಪಿಸಿದ್ದ ಎನ್ನಲಾಗುತ್ತಿದೆ, ಅವನು ಕ್ರಿಸ್ತ ಪೂರ್ವ 1391 ರಿಂದ 1353 BC ವರೆಗೆ ಈಜಿಪ್ಟ್ ಅನ್ನು ಆಳಿದ್ದನು.


ಇದನ್ನೂ ಓದಿ-Watch:ಭಾರೀ ಮಳೆಯ ಬೆನ್ನಲ್ಲೇ ವಿಲಕ್ಷಣ 'ಏಲಿಯನ್ ತರಹದ' ಜೀವಿ ಪತ್ತೆ!


ಈ ನಗರದ ಕುರಿತು ಮಾಹಿತಿ ನೀಡಿರುವ ಬಾಲ್ಟಿಮೋರ್‌ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ (John Hopkins University) ಬೋಧಿಸುತ್ತಿರುವ ಪ್ರೊಫೆಸರ್ ಬೆಟ್ಸಿ ಬ್ರೈನ್, ಅಟೆನ್ ನಗರವು ಪುರಾತನ ಕಾಲದ ಜೀವನದ ಒಂದು ನೋಟವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಈ ಪಾಳುಬಿದ್ದ ನಗರದಲ್ಲಿ ಬಣ್ಣದ ಮಡಿಕೆಗಳು, ಆಭರಣಗಳು ಮತ್ತು ಮಣ್ಣಿನ ಇಟ್ಟಿಗೆಗಳಂತಹ ವಸ್ತುಗಳು ಪತ್ತೆಯಾಗಿವೆ.


ಇದನ್ನೂ ಓದಿ-ರಷ್ಯಾದಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ಸ್ಥಗಿತಗೊಳಿಸಿದ ಮೆಕ್‌ಡೊನಾಲ್ಡ್ಸ್, ಸ್ಟಾರ್‌ಬಕ್ಸ್, ಕೋಕ್, ಪೆಪ್ಸಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.