ನಾನು ಕೀವ್‌ನಲ್ಲೇ ಇದ್ದೇನೆ, ಯಾರಿಗೂ ಹೆದರುವುದಿಲ್ಲ!: ರಷ್ಯಾಗೆ ಝೆಲೆನ್ಸ್ಕಿ ಸವಾಲು

ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಶತ್ರುದೇಶಕ್ಕೆ ಸವಾಲು ಹಾಕಿದ್ದಾರೆ. ಉಕ್ರೇನ್ ನ ರಾಷ್ಟ್ರಪತಿ ಭವನದಿಂದ ಶತ್ರು ಸೇನೆಗೆ ಅವರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. 

Written by - Puttaraj K Alur | Last Updated : Mar 8, 2022, 07:16 PM IST
  • ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಇದೀಗ 13ನೇ ದಿನಕ್ಕೆ ಕಾಲಿಟ್ಟಿದೆ
  • ನಾನು ಯಾವುದೇ ಬಂಕರ್ ನಲ್ಲಿ ಅಡಗಿ ಕುಳಿತಿಲ್ಲ, ಕೈವ್ ನಲ್ಲಿಯೇ ಇದ್ದೇನೆ
  • ಯುದ್ಧದಿಂದ ದೂರ ಸರಿಯುವ ಮಾತೇ ಇಲ್ಲವೆಂದು ರಷ್ಯಾಗೆ ಸವಾಲು ಹಾಕಿದ ಝೆಲೆನ್ಸ್ಕಿ
ನಾನು ಕೀವ್‌ನಲ್ಲೇ ಇದ್ದೇನೆ, ಯಾರಿಗೂ ಹೆದರುವುದಿಲ್ಲ!: ರಷ್ಯಾಗೆ ಝೆಲೆನ್ಸ್ಕಿ ಸವಾಲು   title=
ರಷ್ಯಾಗೆ ಸವಾಲು ಹಾಕಿದ ಝೆಲೆನ್ಸ್ಕಿ

ನವದೆಹಲಿ: ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಶತ್ರುದೇಶಕ್ಕೆ ಸವಾಲು ಹಾಕಿದ್ದಾರೆ. ಉಕ್ರೇನ್ ನ ರಾಷ್ಟ್ರಪತಿ ಭವನದಿಂದ ಶತ್ರು ಸೇನೆಗೆ ಅವರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಗೆಲುವು ಸಾಧಿಸುವವರೆಗೂ ದೇಶಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಅವರೇ ಉಕ್ರೇನ್‌ನ ರಾಷ್ಟ್ರಪತಿ ಭವನದಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಝೆಲೆನ್ಸ್ಕಿ ರಷ್ಯಾಗೆ ಮತ್ತು ವ್ಲಾದಿಮಿರ್ ಪುಟೀನ್(Vladimir Putin)ಗೆ ಸವಾಲು ಹಾಕಿದ್ದಾರೆ.

ಪುಟೀನ್ ಗೆ ಹೊಸ ಸವಾಲು ಹಾಕಿದ ಝೆಲೆನ್ಸ್ಕಿ

ಯುದ್ಧಪೀಡಿತ ಉಕ್ರೇನ್(Russia Ukraine War)ನಿಂದ ಝೆಲೆನ್ಸ್ಕಿ ಪೋಲೆಂಡ್‌ಗೆ ಪಲಾಯನ ಮಾಡಿದ್ದಾರೆಂಬ ವದಂತಿಗಳು ವ್ಯಾಪಕವಾಗಿ ಹರಡಿವೆ. ವಿಡಿಯೋ ಬಿಡುಗಡೆ ಮಾಡುವ ಮೂಲಕ ಈ ಎಲ್ಲಾ ವದಂತಿಗಳನ್ನು ಝೆಲೆನ್ಸ್ಕಿ ತಳ್ಳಿಹಾಕಿದ್ದಾರೆ. ನಾನು ದೇಶಬಿಟ್ಟು ಪಲಾಯನ ಮಾಡಿದ್ದೇನೆ ಎನ್ನುವುದು ಶುದ್ಧ ಸುಳ್ಳು, ಯಾರೂ ಈ ಸುಳ್ಳುಸುದ್ದಿಗಳನ್ನು ನಂಬಬೇಡಿ ಅಂತಾ ಹೇಳಿದ್ದಾರೆ.  

ಇದನ್ನೂ ಓದಿ: Russia-Ukraine War:ಯುದ್ಧದ ನಡುವೆಯೇ 11 ವರ್ಷದ ಬಾಲಕನ 1000 ಕೀ.ಮೀ ಪಯಣ, 'ಹೀರೋ' ಎಂದ ಸರ್ಕಾರ

ಕೈವ್‌ನಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಕಿಂಗ್ ಮಾಡುತ್ತಾ ಝೆಲೆನ್ಸ್ಕಿ(Volodymyr Zelenskyy) ವಿಡಿಯೋದಲ್ಲಿ ಮಾತನಾಡಿದ್ದಾರೆ. ‘ನಾನು ರಾಜಧಾನಿ ಕೈವ್‌ನಲ್ಲಿಯೇ ಇದ್ದೇನೆ ಮತ್ತು ಯಾರಿಗೂ ಹೆದರುವುದಿಲ್ಲ ಎಂದು ಖಡಕ್ ಆಗಿಯೇ ಹೇಳಿದ್ದಾರೆ. ನಾನು ಯಾವುದೇ ಬಂಕರ್‌ನಲ್ಲಿ ಅಡಗಿಕೊಂಡಿಲ್ಲ. ನನ್ನ ದೇಶಕ್ಕಾಗಿ ಈ ಯುದ್ಧವನ್ನು ಗೆಲ್ಲುವವರೆಗೂ ನಾನು ಕೈವ್‌ನಲ್ಲಿಯೇ ಇರುತ್ತೇನೆ. ಯುದ್ಧದಿಂದ ದೂರ ಸರಿಯುವ ಮಾತೇ ಇಲ್ಲ ಅಂತಾ ರಷ್ಯಾಗೆ ಖಡಕ್ ಸಂದೇಶ ರವಾನಿಸಿದ್ದಾರೆ.  

ಕೈವ್ ಸುತ್ತುವರೆದಿರುವ ರಷ್ಯಾ ಸೇನೆ

ರಷ್ಯಾದ ಸೈನ್ಯವು ಉಕ್ರೇನಿಯನ್ ರಾಜಧಾನಿ ಕೈವ್(Russia Ukraine Crisis)ಅನ್ನು ಎಲ್ಲಾ ಕಡೆಯಿಂದ ಮುತ್ತಿಗೆ ಹಾಕಿದೆ. ಇದೇ ಸಮಯದಲ್ಲಿ ಝೆಲೆನ್ಸ್ಕಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಹೊಸ ಸವಾಲು ಎಸೆದಿದ್ದಾರೆ. ‘ಸೋಮವಾರ ನಮಗೆ ಬಹಳ ಕಷ್ಟದ ದಿನ ಎಂದು ಯಾವಾಗಲೂ ಹೇಳುತ್ತಿದ್ದೆ. ನಮ್ಮ ದೇಶದಲ್ಲಿ ಯುದ್ಧ ನಡೆಯುತ್ತಿದೆ. ಹೀಗಾಗಿ ನಮಗೆ ಪ್ರತಿ ದಿನವೂ ಸೋಮವಾರ ಅಂತಾ ಝೆಲೆನ್ಸ್ಕಿ ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾದ ಟ್ಯಾಂಕ್‌ಗಳ ಮೇಲಿರುವ Z ಚಿಹ್ನೆಯ ಅರ್ಥವೇನು ? ಈ ಗುರುತಿನ ಬಗ್ಗೆಯೇ ನಡೆಯುತ್ತಿದೆ ಚರ್ಚೆ  

ಸುಮಿಯಲ್ಲಿ ಭಾರೀ ವಿನಾಶ 

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ(Russia Ukraine War) ಇದೀಗ 13ನೇ ದಿನಕ್ಕೆ ಕಾಲಿಟ್ಟಿದೆ. ಈ ಯುದ್ಧದಲ್ಲಿ ಉಕ್ರೇನ್ ಇಲ್ಲಿಯವರೆಗೆ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಉಕ್ರೇನ್‌ನ ಅನೇಕ ನಗರಗಳು ಮತ್ತು ವಸತಿ ಪ್ರದೇಶಗಳು ನಾಶವಾಗಿವೆ. ಇಂದು ಮಂಗಳವಾರ ರಷ್ಯಾದ ಸೇನೆಯು ಉಕ್ರೇನ್‌ನ ಸುಮಿ ನಗರದಲ್ಲಿ ದೊಡ್ಡ ವಿನಾಶವನ್ನು ಉಂಟುಮಾಡಿದೆ. ರಷ್ಯಾದ ಸೇನಾ ದಾಳಿಗೆ ಸುಮಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 21 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News