Watch: ಹಾಲಿವುಡ್ ಸ್ಟಾರ್ ಅರ್ನಾಲ್ಡ್ ಶ್ವಾರ್ಜಿನೆಗರ್ ಗೆ ಬಿತ್ತು ಒದೆ....!
ದಕ್ಷಿಣ ಆಫ್ರಿಕಾದ ಕ್ರೀಡಾ ಸ್ಪರ್ಧೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗರ್ ವ್ಯಕ್ತಿಯೊಬ್ಬ ಏಕಾಏಕಿ ಹಾರಿ ಒದ್ದಿರುವ ಘಟನೆ ನಡೆದಿದೆ.
ನವದೆಹಲಿ: ದಕ್ಷಿಣ ಆಫ್ರಿಕಾದ ಕ್ರೀಡಾ ಸ್ಪರ್ಧೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗರ್ ವ್ಯಕ್ತಿಯೊಬ್ಬ ಏಕಾಏಕಿ ಹಾರಿ ಒದ್ದಿರುವ ಘಟನೆ ನಡೆದಿದೆ.
ಜೋಹಾನ್ಸ್ ಬರ್ಗ್ ಸ್ಯಾಂಡ್ಟನ್ ಕನ್ವೆನ್ಷನ್ ಸೆಂಟರ್ ನಲ್ಲಿ ಅಭಿಮಾನಿಗಳ ಜೊತೆ ಸಂವಾದದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅವರಿಗೆ ವ್ಯಕ್ತಿಯೊಬ್ಬ ಹಾರಿ ಒದ್ದಿದ್ದಾನೆ. ಇದರಿಂದ ಅವರು ಒಂದು ಕ್ಷಣಕಾಲ ವಿಚಲಿತರಾಗಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
"ನಾನು ಅಭಿಮಾನಿಗಳ ನೂಕು ನುಗ್ಗಲಿನಿಂದ ಈ ಘಟನೆ ಸಂಭವಿಸಿತು ಎಂದುಕೊಂಡಿದ್ದೆ.ಆದರೆ ಈ ವಿಡಿಯೋ ನೋಡಿದಾಗ ನನಗೆ ಯಾರೋ ಒದ್ದಿದ್ದಾರೆ ಎಂದು ತಿಳಿಯಿತು. ಪುಣ್ಯಕ್ಕೆ ಆ ಮೂರ್ಖ ವರ್ತನೆ ನನ್ನ ಸಂವಾದಕ್ಕೆ ಅಡ್ಡಿಯಾಗಲಿಲ್ಲವೆಂದರು.ಹಾಲಿವುಡ್ ನಟ ಶ್ವಾರ್ಜಿನೆಗ್ಗರ್ ವಾರ್ಷಿಕ ಆರ್ನಾಲ್ಡ್ ಕ್ಲಾಸಿಕ್ ಆಫ್ರಿಕಾಕ್ಕಾಗಿ ಅಂತರರಾಷ್ಟ್ರೀಯ ಮಲ್ಟಿ-ಸ್ಪೋರ್ಟ್ಸ್ ಉತ್ಸವಕ್ಕಾಗಿ ಜೊಹಾನ್ಸ್ ಬರ್ಗ್ ಗೆ ಆಗಮಿಸಿದ್ದರು.