Viral Video: ಗಾಳಿಪಟದೊಂದಿಗೆ ಹಾರಿ ಹೋದ ವ್ಯಕ್ತಿ, ಹೇಗಿತ್ತು ನೋಡಿ ಪರದಾಟ..!
ಗಾಳಿಪಟದ ದಾರದೊಂದಿಗೆ ಮೇಲಕ್ಕೆ ಹಾರಿಹೋಗಿದ್ದ ವ್ಯಕ್ತಿ ಕೆಲ ನಿಮಿಷಗಳ ಕಾಲ ಮೇಲೆಯೇ ನೇತಾಡುತ್ತಿದ್ದ. ಗಾಳಿಯಲ್ಲಿ ಹಾರಾಡಿ ನಂತರ ನೆಲಕ್ಕೆ ಬಿದ್ದು ಇನ್ನಿಲ್ಲದ ಫಜೀತಿ ಅನುಭವಿಸಿದ್ದಾನೆ.
ನವದೆಹಲಿ: ಶ್ರೀಲಂಕಾ(Sri Lanka)ದಲ್ಲಿ ಗಾಳಿಪಟ ಹಾರಿಸುತ್ತಿದ್ದ ವೇಳೆ ವಿಚಿತ್ರ ಘಟನೆಯೊಂದು ನಡೆದಿದೆ. ಆಗಸದಲ್ಲಿ ಹಾರುತ್ತಿದ್ದ ಗಾಳಿಪಟದೊಂದಿಗೆ ವ್ಯಕ್ತಿಯೊಬ್ಬ ಹಾರಿಹೋಗಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ. ಬಲವಾದ ಗಾಳಿ ಬೀಸಿದ ಪರಿಣಾಮ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಮೇಲಕ್ಕೆ ಹಾರಿಹೋಗಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.
ಗಾಳಿಪಟದೊಂದಿಗೆ ಮೇಲಕ್ಕೆ ಹಾರಿಹೋದ ವ್ಯಕ್ತಿ ಕೆಲ ನಿಮಿಷಗಳ ಕಾಲ ಪರದಾಡಿದ್ದಾನೆ. ಹಗ್ಗ ಹಿಡಿದು ನೇತಾಡುವ ಮೂಲಕ ಅಯ್ಯೋ… ನನ್ನನ್ನು ಕಾಪಾಡಿ… ಕಾಪಾಡಿ ಪ್ಲೀಸ್… ಎಂದು ಗೋಗರೆದಿದ್ದಾನೆ. ಗಾಳಿಪಟ(Kite Flying) ಹಾರಿಸಲು ಬಂದಿದ್ದ ವ್ಯಕ್ತಿಗಳು ಕೆಳಗಿನಿಂದ ಹಗ್ಗವನ್ನು ಬಿಗಿಯಾಗಿ ಹಿಡಿದುಕೋ ಅಂತಾ ಚೀರಾಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮೂರನೇ ಬಾರಿ ತನ್ನ ಮದುವೆ ಮುಂದೂಡುತ್ತಿರುವುದಕ್ಕೆ ಪರಿಹಾರ ಕೇಳಿ ಪ್ರಧಾನಿಗೆ ಪತ್ರ ಬರೆದ ಯುವತಿ
ಗಾಳಿಪಟ(Kite)ದ ದಾರದೊಂದಿಗೆ ಮೇಲಕ್ಕೆ ಹಾರಿಹೋಗಿದ್ದ ವ್ಯಕ್ತಿ ಕೆಲ ನಿಮಿಷಗಳ ಕಾಲ ಮೇಲೆಯೇ ನೇತಾಡುತ್ತಿದ್ದ. ಗಾಳಿಯಲ್ಲಿ ಹಾರಾಡಿ ನಂತರ ನೆಲಕ್ಕೆ ಬಿದ್ದು ಇನ್ನಿಲ್ಲದ ಫಜೀತಿ ಅನುಭವಿಸಿದ್ದಾನೆ. @SriLankaTweet ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಗಾಳಪಟದ ಜೊತೆಜೊತೆಗೆ ವ್ಯಕ್ತಿ ಕೂಡ ಹಗ್ಗದಲ್ಲಿ ತೂಗಾಡುತ್ತಿರುವ ದೃಶ್ಯ(Viral Video) ಭಯಾನಕವಾಗಿದೆ. ಕೆಳಗಿದ್ದವರು ಆ ವ್ಯಕ್ತಿಗೆ ಧೈರ್ಯ ತುಂಬುತ್ತಾ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೋ ಅಂತಾ ಚೀರಾಡುತ್ತಿದ್ದರು. ಬಳಿಕ ಗಾಳಿಪಟವನ್ನು ಸ್ವಲ್ಪ ಕೆಳಗಿಳಿಸಿದ ಬಳಿಕ ‘ಬದುಕಿತು ಬಡಜೀವ’ ಎಂಬಂತೆ ವ್ಯಕ್ತಿ ಮೇಲಿನಿಂದ ಕೆಳಗೆ ಜಿಗಿದು ಬಚಾವ್ ಆಗಿದ್ದಾನೆ.
ಇದನ್ನೂ ಓದಿ: ‘ಇಮ್ರಾನ್ ಖಾನ್ ಆತ್ಮಹತ್ಯೆಗಾಗಿ ನಾನು ಕಾಯುತ್ತಿದ್ದೇನೆ’: ಹೀಗೆ ಹೇಳಿದ್ಯಾರು?
ಗಾಳಿಪಟದಿಂದ ವ್ಯಕ್ತಿ ನೆಲಕ್ಕೆ ಬಿದ್ದಿದ್ದನ್ನು ನೋಡಿ ಅನೇಕರು ಚಿತ್ರ-ವಿಚಿತ್ರವಾಗಿ ಕಾಮೆಂಟ್ ಮಾಡಿದ್ದಾರೆ. ಹೇಗಿತ್ತು ಗಾಳಿಪಟದ ಸವಾರಿ ಅಂತಾ ಕೆಲವು ಗೇಲಿ ಮಾಡಿದ್ದಾರೆ. ಇನ್ನೂ ಕೂಡ ಈ ವಿಡಿಯೋ ವೈರಲ್ ಆಗುತ್ತಿದ್ದ ನೋಡುಗರ ಗಮನ ಸೆಳೆಯುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.