Viral News: ‘ಪ್ರೀತಿ’ಯ ಹುಡುಕಾಟದಲ್ಲಿರುವ 66ರ ಹರೆಯದ ಅಂಕಲ್ ಏನು ಮಾಡಿದ್ದಾನೆ ನೋಡಿ..!

ಅಮೆರಿಕದ ಟೆಕ್ಸಾಸ್ ನಿವಾಸಿ ಜಿಮ್ ತನಗೆ ಸೂಕ್ತವಾದ ವಧು ಬೇಕೆಂದು ದೊಡ್ಡದಾಗಿ ತಮ್ಮ ಭಾವಚಿತ್ರ,  ಸ್ವ-ವಿವರ ಮತ್ತು ಫೋನ್ ನಂಬರ್ ಸಹಿತ ದೊಡ್ಡ ಜಾಹೀರಾತನ್ನೇ ಹೆದ್ದಾರಿಯಲ್ಲಿ ಹಾಕಿಸಿದ್ದಾರೆ.

Last Updated : Dec 22, 2021, 07:35 PM IST
  • ಇಳಿವಯಸ್ಸಿನಲ್ಲೂ ‘ಪ್ರೀತಿ’ಗಾಗಿ ಹಂಬಲಿಸುತ್ತಿರುವ ಜಿಮ್ ಬೇಸ್
  • ಸೂಕ್ತವಾದ ವಧುವಿಗಾಗಿ ದೊಡ್ಡ ಜಾಹೀರಾತನ್ನೇ ಹಾಕಿಸಿದ ಅಂಕಲ್
  • ಸಂಗಾತಿಗಾಗಿ ಹುಡುಕಾಡುತ್ತಿರುವ 66ರ ಹರೆಯದ ಅಮೆರಿಕದ ಜಿಮ್
Viral News: ‘ಪ್ರೀತಿ’ಯ ಹುಡುಕಾಟದಲ್ಲಿರುವ 66ರ ಹರೆಯದ ಅಂಕಲ್ ಏನು ಮಾಡಿದ್ದಾನೆ ನೋಡಿ..! title=
‘ಪ್ರೀತಿ’ಗಾಗಿ ಹುಡುಕಾಡುತ್ತಿರುವ 66ರ ಅಂಕಲ್

ನವದೆಹಲಿ: ಈ ಅಂಕಲ್ ಗೆ ಸರಿಯಾದ ಸಂಗಾತಿ(Life Partner) ಯಾವಾಗ ಸಿಗುತ್ತಾರೋ ಗೊತ್ತಿಲ್ಲ. ಸಿಕ್ಕರೂ ಈತನಿಗೆ ಆ ಸಂಗಾತಿ ಹೇಗೆ ಹೊಂದಿಕೆಯಾಗುತ್ತಾಳೋ ಅನ್ನೋದೇ ದೊಡ್ಡ ಪ್ರಶ್ನೆ. ಇಂತಹ ಇಳಿವಯಸ್ಸಿನಲ್ಲಿಯೂ ಪ್ರೀತಿಗಾಗಿ ಹಂಬಲಿಸುತ್ತಿರುವ ಈತನಿಗೆ ಸರಿಯಾದ ಜೋಡಿ ಸಿಕ್ಕರೆ ಅದೃಷ್ಟ. ಹೌದು, 66ರ ಹರೆಯದ ಜಿಮ್ ಬೇಸ್(Jim Bays) ಸದ್ಯ ‘ಪ್ರೀತಿ’ಯ ಹುಟುಕಾಟದಲ್ಲಿ ಬ್ಯುಸಿಯಾಗಿದ್ದಾರೆ. ತನಗೊಂದು ಸೂಕ್ತ ವಧು ಸಿಗಲಿ ಎಂದು ಇವರು ಮಾಡಿರುವ ಕೆಲಸ ನೋಡಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಹಾಗಾದ್ರೆ 66 ವಯಸ್ಸಿನ ಈ ಅಂಕಲ್ ಮಾಡಿರುವ ಕೆಲಸವಾದರೂ ಏನು ಅಂತೀರಾ..? ಈ ವಯಸ್ಸಿನಲ್ಲಿಯೂ ‘ಪ್ರೀತಿ’ಗಾಗಿ ಹಂಬಲಿಸುತ್ತಿರುವ ಈತ ವಾಹನ ಸಂಚಾರ ಹೆಚ್ಚಿರುವ ಹೆದ್ದಾರಿಯನ್ನು ಆಯ್ಕೆ ಮಾಡಿಕೊಂಡು ತನಗೆ ಹೊಂದಿಕೆಯಾಗುವ ವಧು ಬೇಕೆಂದು ದೊಡ್ಡದೊಂದು ಜಾಹೀರಾತನ್ನೇ ಹಾಕಿದ್ದಾರೆ. ಇದು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದ್ದು, ನೆಟಿಜನ್ ಗಳು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಆಟಿಕೆಯಲ್ಲಿ ಈ ಬಣ್ಣ ಇದೆ ಎಂಬ ಕಾರಣಕ್ಕೆ ಬ್ಯಾನ್ ಹೇರಿದ ಮುಸ್ಲಿಂ ರಾಷ್ಟ್ರ

ಬಿಲ್‌ಬೋರ್ಡ್‌ನಿಂದ ಜೀವನ ಸಂಗಾತಿಯ ಹುಡುಕಾಟ!  

ಇಂದು ಬಹುತೇಕರು ತಮಗೆ ಸೂಕ್ತವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮ್ಯಾಟ್ರಿಮೋನಿಯಲ್(Matrimony) ಸೈಟ್‌ಗಳನ್ನು ತಡಕಾಡುತ್ತಿರುತ್ತಾರೆ. ಆದರೆ ಅಮೆರಿಕದ ಟೆಕ್ಸಾಸ್ ನಿವಾಸಿ ಜಿಮ್ ತನಗೆ ಸೂಕ್ತವಾದ ವಧು ಬೇಕೆಂದು ದೊಡ್ಡದಾಗಿ ತಮ್ಮ ಭಾವಚಿತ್ರ,  ಸ್ವ-ವಿವರ ಮತ್ತು ಫೋನ್ ನಂಬರ್ ಸಹಿತ ದೊಡ್ಡ ಜಾಹೀರಾತನ್ನೇ ಹೆದ್ದಾರಿಯಲ್ಲಿ ಹಾಕಿಸಿದ್ದಾರೆ. ನನ್ನ ಜೀವನದ ಸಂತೋಷ ಮತ್ತು ದುಃಖಗಳಲ್ಲಿ ಪಾಲುದಾರರಾಗಲು ಯಾರಾದರೂ ಒಬ್ಬ ಮಹಿಳೆ ಬೇಕು ಅಂತಾ ಹೇಳಿಕೊಂಡಿದ್ದಾರೆ.  

ಜಾಹೀರಾತು ಫಲಕದಲ್ಲಿ ಏನು ಬರೆಯಲಾಗಿದೆ?

ಜಾಹೀರಾತು ಫಲಕದಲ್ಲಿ ‘50 ರಿಂದ 55 ವರ್ಷ ವಯಸ್ಸಿನ ಒಳ್ಳೆಯ ಮಹಿಳೆ ಬೇಕಾಗಿದ್ದಾರೆ. ಅವರು ನನ್ನ ಸುಖ-ದುಃಖಗಳ ಪಾಲುದಾರರಾಗಬಹುದು ಮತ್ತು ದಯಾಮಯಿ ಭಾವ ಹೊಂದಿರಬೇಕು’ ಎಂದು ಹೇಳಲಾಗಿದೆ. ಈ ಜಾಹೀರಾತು ಫಲಕದ ಕೆಳಭಾಗದಲ್ಲಿ ಫೋನ್ ಸಂಖ್ಯೆಯೂ ಇದೆ. ಜಿಮ್ ಟೋಪಿ ಧರಿಸಿರುವ ಚಿತ್ರವನ್ನು ಜಾಹೀರಾತು ಫಲಕದ ಎಡಭಾಗದಲ್ಲಿ ಮುದ್ರಿಸಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಡಲು ಅಮೆರಿಕವೇ ಕಾರಣ: ಪಾಕ್ ಪ್ರಧಾನಿ ಇಮ್ರಾನ್ ಖಾನ್

2 ಬಾರಿ ವಿಚ್ಛೇದನ ಪಡೆದಿರುವ ಜಿಮ್!

ವರದಿಗಳ ಪ್ರಕಾರ ಜಿಮ್ ಬೇಜ್ 2 ಬಾರಿ ವಿಚ್ಛೇದನ ಪಡೆದಿದ್ದಾರೆ. ಇಬ್ಬರು ಮಾಜಿ ಪತ್ನಿಯವರಿಂದ ಅವರಿಗೆ 5 ಮಕ್ಕಳಿದ್ದಾರೆ. ಒಂಟಿ ಜೀವನ ಸರಿಯಲ್ಲವೆಂದು ಸೂಕ್ತ ಸಂಗಾತಿಗಾಗಿ ನಾನು ಡೇಟಿಂಗ್ ಅಪ್ಲಿಕೇಶನ್‌(Dating Apps) ಮೂಲಕ ಹುಡುಕಾಟ ಪ್ರಾರಂಭಿಸಿದ್ದೇನೆ ಎಂದು ಹೇಳಿದ್ದಾರೆ. ಡೇಟಿಂಗ್ ಆಪ್ ಗಳು ತಮಗೆ ನಿಖರ ಮಾಹಿತಿ ನೀಡುವುದಿಲ್ಲವೆಂದು ಭಾವಿಸಿ ಹೆದ್ದಾರಿ ಬದಿಯ ದೊಡ್ಡ ಜಾಹೀರಾತು ಫಲಕವನ್ನೇ ಹಾಕಿಸಿದ್ದಾರೆ. ಪ್ರತಿದಿನ ವಿವಿಧ ಕಂಪನಿಗಳ ಜಾಹೀರಾತುಗಳನ್ನು ನೋಡುತ್ತಿದ್ದ ವಾಹನ ಸವಾರರಿಗೆ ಇದೀಗ ಜಿಮ್ ಅವರ ಈ ಜಾಹೀರಾತು ಗಮನ ಸೆಳೆದಿದೆ. ಶೀಘ್ರವೇ ನನಗೆ ಸೂಕ್ತ ಸಂಗಾತಿ ಸಿಗುತ್ತಾಳೆಂದು ಜಿಮ್ ಭರವಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಅವರಿಷ್ಟದ ವಧು ಆದಷ್ಟು ಶೀಘ್ರವೇ ಸಿಗಲಿ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಶುಭ ಹಾರೈಸಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News