ಗಗನ ಯಾತ್ರೆಗೆ ಹೊರಟ ‘ಸಮೋಸಾ’ ..! ಹೇಗಿತ್ತುಅದರ ಬಾಹ್ಯಾಕಾಶ ಅಭಿಯಾನ.?
ಸಮೋಸ ಗಗನ ಯಾತ್ರೆಗೆ ಹೊರಟರೆ ಹೇಗಿರುತ್ತೆ..? ಒಂದಲ್ಲ ಎರಡಲ್ಲ.. ಬರೋಬ್ಬರಿ ಮೂರು ಸಲ ಸಮೋಸಾ ಗಗನ ಯಾತ್ರೆ ನಡೆದಿತ್ತು. ಸಮೋಸಾ ಗಗನ ಯಾತ್ರೆ ಹೇಗಿತ್ತು. ?
ಬ್ರಿಟನ್ : ಭಾರತೀಯರ (Indians) ಜನಪ್ರಿಯ ಖಾದ್ಯ ಸಮೋಸ (Samosa). ಸಮೋಸಾ ಇಲ್ಲದೇ ಭಾರತೀಯರಿಗೆ ದಿನವೇ ಸಾಗುವುದಿಲ್ಲ. ಬೆಳಗ್ಗಿನ ಉಪಾಹಾರಕ್ಕೆ ಸಂಜೆಯ ಸ್ನ್ಯಾಕ್ಸ್ ಗೆ ಸಮೋಸಾ ಬೇಕೇ ಬೇಕು. ಇಂತಹ ಸಮೋಸ ಗಗನ (Space Mission) ಯಾತ್ರೆಗೆ ಹೊರಟರೆ ಹೇಗಿರುತ್ತೆ..? ಒಂದಲ್ಲ ಎರಡಲ್ಲ.. ಬರೋಬ್ಬರಿ ಮೂರು ಸಲ ಸಮೋಸಾ ಗಗನ ಯಾತ್ರೆ ನಡೆದಿತ್ತು. ಸಮೋಸಾ ಗಗನ ಯಾತ್ರೆ ಹೇಗಿತ್ತು. ? ತನ್ನ ಗಮ್ಯ ತಲುಪಿತಾ ಸಮೋಸಾ..? ಅದರ ವಿಡಿಯೋ ಇದೆಯಾ..? ಅದಕ್ಕೆಲ್ಲಾ ಈ ವಿಸ್ತ್ರತ ವರದಿ ನೋಡಲೇ ಬೇಕು.
ಬ್ರಿಟನಿನ ಬಾಥ್ ಎಂಬಲ್ಲಿ ಚಾಯ್ ವಾಲಾ (Chaiwala) ಎಂಬ ಭಾರತೀಯ ರೆಸ್ಟೋರೆಂಟ್ (Indian Restaurant) ಇದೆ. ಅದರ ಮಾಲೀಕನ ಹೆಸರು ನೀರಜ್ ಗಧೇರ್ (Neeraj Gadher). ಭಾರತೀಯರ ಸ್ಪೆಷಲ್ ಡಿಶ್ ಸಮೋಸಾವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದರೆ ಹೇಗೆ ? ಎಂಬ ಕಲ್ಪನೆ ಮೊದಲು ಮೂಡಿದ್ದು ಇವರಲ್ಲೇ..ಕಲ್ಪನೆ ಮೂಡಿದ್ದೇ ತಡ, ಕೂಡಲೇ ಸಮೋಸಾ ಗಗನ ಯಾತ್ರೆಗೆ ಸಿದ್ದತೆ ಮಾಡುತ್ತಾರೆ ನೀರಜ್. ಇದು ಕಾಸ್ಲಿ ಮಿಶನ್ ಏನೂ ಆಗಿರಲಿಲ್ಲ. ಸಮೋಸಾ ಗಗನ ಯಾತ್ರೆ ಅವರು ಆಯ್ದುಕೊಂಡಿದ್ದು ರಾಕೇಟ್ ಗಳನ್ನಲ್ಲ(Rocket). ಬದಲಿಗೆ ಹೀಲಿಯಂ ಬೆಲೂನ್ (Hellium Balloon). ಮಾಡಿದಿಷ್ಟೇ.. ಹೀಲಿಯಂ ಬೆಲೂನ್ ಸಿದ್ದಪಡಿಸಿದ್ರು. ಅದರಲ್ಲಿ ಒಂದು ಬಾಕ್ಸ್ ಸಮೋಸಾ ಇಟ್ರು. ಅದರಲ್ಲೊಂದು ಕೆಮೆರಾ ಮತ್ತು ಜಿಪಿಎಸ್ (GPS) ಸಿಸ್ಟಮ್ ಫಿಕ್ಸ್ ಮಾಡಿದ್ರು. ಸಮೋಸಾ ಗಗನಯಾನಕ್ಕೆ ಇಟ್ಟುಕೊಂಡ ಪರಿಕರ ಇಷ್ಟೆ..ನೀರಜ್ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಈ ಅದ್ಭುತ ಅಭಿಯಾನದ ವಿಡಿಯೋ ಚಿತ್ರಣ ಕೂಡಾ ಮಾಡಿದ್ದಾರೆ.
ಇದನ್ನೂಓದಿ : Indonesia Earthquake 2021: ಇಂಡೊನೆಷ್ಯಾದಲ್ಲಿ ಪ್ರಬಲ ಭೂಕಂಪ, 7 ಸಾವು 100 ಕ್ಕೂ ಅಧಿಕ ಜನರಿಗೆ ಗಾಯ
ಗಗನಕ್ಕೆ ಚಿಮ್ಮಿದ ಸಮೋಸಾ ಕಥೆ ಏನಾಯ್ತು..?
ಸಮೋಸಾ ಗಗನ ಯಾತ್ರೆ ಅಷ್ಟೊಂದು ಸುಲಭ ಇರಲಿಲ್ಲ. ಮೊದಲ ಸಲ ಗಗನ ಯಾತ್ರೆಗೆ ಸಜ್ಜಾಗುವಾಗ ಬೆಲೂನು ಕೈಯಿಂದ ಜಾರಿ ಹೋಯಿತು. ಎರಡನೇ ಸಲ ಪ್ರಯತ್ನ ಮಾಡಿದಾಗ ಬೆಲೂನ್ ನಲ್ಲಿ ಬೇಕಾಗುವಷ್ಟು ಹೀಲಿಯಂ ಇರಲೇ ಇಲ್ಲ. ಆದರೆ, ಮೂರನೇ ಪ್ರಯತ್ನದಲ್ಲಿ ಸಮೋಸಾ ಗಗನಯಾತ್ರೆ ಶುರುವಾಗಿ ಬಿಟ್ಟಿತು. ಗಗನಕ್ಕೆ ಚಿಮ್ಮಿದ ಸಮೋಸಾದ (Samosa) ವಿಡಿಯೋ ಚಿತ್ರಣ ಕೂಡಾ ನಡೆಯಿತು. ದೂರ ದೂರ ಹಾರಿದ ಸಮೋಸಾ ತನ್ನ ಗಮ್ಯ ತಲುಪಲೇ ಇಲ್ಲ. ಕೊನೆಗೂ ಫ್ರಾನ್ಸ್ ನಲ್ಲಿ (France) ಅದು ಕ್ರ್ಯಾಶ್ ಲ್ಯಾಂಡಿಂಗ್ (Crash Landing) ಆಯ್ತು
Britain) ಜನ ಹೊಟ್ಟೆ ತುಂಬಾ ನಕ್ಕಿದ್ರು. ಅದರ ವಿಡಿಯೋ ಕೂಡಾ ವೈರಲ್ ಆಗ್ತಾ ಇದೆ. ಜೊತೆಗೆ ಗರಿ ಗರಿ, ಬಿಸಿಬಿಸಿ ಸಮೋಸಾ ಕೂಡಾ ಬ್ರಿಟಿಷ್ ನಾಡಲ್ಲಿ ಜನಪ್ರಿಯವಾಗುತ್ತಿದೆ.
ಇದನ್ನೂಓದಿ : ಈ ದೇಶದಲ್ಲಿ ಈಗ ಗೊರಿಲ್ಲಾಗಳಿಗೂ ಬಂತೂ ಕೊರೊನಾ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.