Serial Blast In Sialkot Of Pakistan - ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಹಲವಾರು ಸ್ಫೋಟಗಳು (Sialkot Blast) ಸಂಭವಿಸಿವೆ, ಸೇನಾ ನೆಲೆಗೆ (Pakistan Army) ಬೆಂಕಿ ಹಚ್ಚಲಾಗಿದೆ. ಈ ಸ್ಫೋಟಗಳಿಂದ ಪಾಕಿಸ್ತಾನ ತತ್ತರಿಸಿದೆ. ಮಾಹಿತಿ ಪ್ರಕಾರ, ಪಾಕಿಸ್ತಾನದ ಸೇನಾ ನೆಲೆಯನ್ನು ಗುರಿಯಾಗಿಸಲಾಗಿದೆ. ಆದರೆ, ಈ ಸ್ಫೋಟಗಳು ಹೇಗೆ ಸಂಭವಿಸಿದವು ಎಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

COMMERCIAL BREAK
SCROLL TO CONTINUE READING

ಸಿಯಾಲ್‌ಕೋಟ್‌ನಲ್ಲಿ ಭಾರೀ ಸ್ಫೋಟ
ಪಾಕಿಸ್ತಾನದಲ್ಲಿ  ಸರ್ಕಾರ ಬದಲಾವಣೆಯ ಕೂಗು ಹೆಚ್ಚಾಗುತ್ತಿರುವುದರ ನಡುವೆಯೇ, ಸಿಯಾಲ್ಕೋಟ್ನಲ್ಲಿ ದೊಡ್ಡ ಸ್ಫೋಟಗಳು ಸಂಭವಿಸಿರುವ ಕಾರಣ ಭಾರಿ ಮಹತ್ವ ಪಡೆದುಕೊಂಡಿದೆ. ಪ್ರಸ್ತುತ ದೇಶದಲ್ಲಿ, ವಿರೋಧ ಪಕ್ಷಗಳು ಪಾಕಿಸ್ತಾನದ ಇಮ್ರಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ನಿರಂತರವಾಗಿ ಒತ್ತಾಯಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಿಯಾಲ್‌ಕೋಟ್‌ನಲ್ಲಿ ಸ್ಫೋಟಗಳು ಸಂಭವಿಸುವುದು ಇಮ್ರಾನ್ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ ಸಂಭವಿಸಿತ್ತು
ಇದೇ ತಿಂಗಳು ಪೇಶಾವರದ ಶಿಯಾ ಮಸೀದಿಯಲ್ಲಿ (Peshawar Blast) ಆತ್ಮಾಹುತಿ ದಾಳಿ ನಡೆದಿದ್ದು ಇಲ್ಲಿ ಉಲ್ಲೇಖನೀಯ, ಈ ದಾಳಿಯಲ್ಲಿ ಕನಿಷ್ಠ 64 ಮಂದಿ ಸಾವನ್ನಪ್ಪಿದ್ದರು ಮತ್ತು ಸುಮಾರು 200 ಜನರು ಗಾಯಗೊಂಡಿದ್ದರು. ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಪ್ರಕರಣಕ್ಕೆ ಕಾರಣರಾದ ಮೂವರು ಉಗ್ರರನ್ನು ಈಗಾಗಲೇ ಹತ್ಯೆಗೈಯಲಾಗಿದೆ.


ಇದನ್ನೂ ಓದಿ-International Day of Happiness 2022: ಅಂತರಾಷ್ಟ್ರೀಯ ಸಂತೋಷ ದಿನದ ಮಹತ್ವ ಮತ್ತು ಇತಿಹಾಸ

ಇಮ್ರಾನ್ ಖಾನ್ ಮೇಲೆ ಪ್ರತಿಪಕ್ಷಗಳ ಒತ್ತಡ
ಇನ್ನೊಂದೆಡೆ, ಪಾಕಿಸ್ತಾನದಲ್ಲಿ ಇಮ್ರಾನ್ ಸರ್ಕಾರದ ಮೇಲೆ ಪ್ರತಿಪಕ್ಷಗಳಿಂದ ಬಹುಮತ ಸಾಬೀತುಪಡಿಸಲು ಒತ್ತಡ ಹೇರಲಾಗುತ್ತಿದೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ಹೆಚ್ಚಾಗಲು ಇಮ್ರಾನ್ ಸರ್ಕಾರವೇ ಕಾರಣ ಎಂದು ಹೇಳಿ ವಿರೋಧ ಪಕ್ಷಗಳು ಮಾರ್ಚ್ 8 ರಂದು ರಾಷ್ಟ್ರೀಯ ಅಸೆಂಬ್ಲಿ ಸೆಕ್ರೆಟರಿಯೇಟ್‌ನಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದವು. ಈ ನಡುವೆ ಇಮ್ರಾನ್ ಸರ್ಕಾರದ 24 ಸಂಸದರು ಪಕ್ಷದ ವಿರುದ್ಧ ಬಂಡಾಯವೆದ್ದು, ವಿರೋಧ ಪಕ್ಷದ ಬಣದಲ್ಲಿ ಶಾಮೀಲಾಗಿದ್ದಾರೆ. ಇದೇ ವೇಳೆ ಮಾ.21ರಂದು ಅವಿಶ್ವಾಸ ಗೊತ್ತುವಳಿ ಕುರಿತು ಅಧಿವೇಶನ ಕರೆಯಬೇಕು ಹಾಗೂ ಮಾ.28ರಂದು ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆಸಬೇಕು ಎಂದು ಪ್ರತಿಪಕ್ಷಗಳು ನಿರಂತರವಾಗಿ ಒತ್ತಾಯಿಸುತ್ತಿವೆ.


ಇದನ್ನೂ ಓದಿ-ಕಾಗದದ ಕೊರತೆಯಿಂದ ಶಾಲಾ ಪರೀಕ್ಷೆಗಳನ್ನು ರದ್ದುಗೊಳಿಸಿದ ಶ್ರೀಲಂಕಾ..!

ಆದರೆ, ಸರ್ಕಾರವನ್ನು ಉಳಿಸಲು ಇಮ್ರಾನ್ ಖಾನ್ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸಿಂಧ್ ಹೌಸ್‌ನಲ್ಲಿ ಹಾಜರಿದ್ದ ಅತೃಪ್ತ ಸಂಸದರ ಬಗ್ಗೆ ಇಮ್ರಾನ್ ಬೆಂಬಲಿಗರು ಸಾಕಷ್ಟು ಕೋಲಾಹಲ ಸೃಷ್ಟಿಸಿದ್ದಾರೆ. ಇನ್ನೊಂದೆಡೆ ಸಾರ್ವಜನಿಕರ ಕೋಪ ಈ ಸಂಸದರನ್ನು ಹಿಂತಿರುಗುವಂತೆ ಒತ್ತಾಯಿಸುತ್ತದೆ ಎಂದು ಇಮ್ರಾನ್ ಖಾನ್ ಹೇಳುತ್ತಿದ್ದಾರೆ. ಇಮ್ರಾನ್ ಬೆಂಬಲಿಗರ ಈ ಕೋಲಾಹಲಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಉಭಯ ಪಕ್ಷಗಳು ಸಹಕರಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.


ಇದನ್ನೂ ಓದಿ-ಏಪ್ರಿಲ್ 2 ರಂದು ಭಾರತಕ್ಕೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭೇಟಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.