ಕಾಬೂಲ್‌ನ ಮಸೀದಿಯಲ್ಲಿ ಭೀಕರ ಸ್ಫೋಟ:  ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಉತ್ತರ ಭಾಗದಲ್ಲಿರುವ ಮಸೀದಿಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಇದುವರೆಗೆ 20 ಜನರು ಮೃತಪಟ್ಟಿದ್ದರೆ, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ. 


COMMERCIAL BREAK
SCROLL TO CONTINUE READING

ಕಾಬೂಲ್‌ನ ಉತ್ತರ ಭಾಗದಲ್ಲಿರುವ ಖೈರ್ ಖಾನಾ ಪ್ರದೇಶದ ಮಸೀದಿಯೊಂದರಲ್ಲಿ  ಬುಧವಾರ (ಆಗಸ್ಟ್ 17) ಸಂಜೆ ಪ್ರಾರ್ಥನೆ ವೇಳೆ ಈ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಭದ್ರತಾ ಮೂಲವು ಕತಾರಿ ಪ್ರಸಾರಕ ಅಲ್ ಜಜೀರಾಗೆ ಬುಧವಾರ ತಿಳಿಸಿದೆ. ಮೃತಪಟ್ಟವರಲ್ಲಿ ಅಮೀರ್ ಮೊಹಮ್ಮದ್ ಕಾಬೂಲಿ ಎಂಬ ಉನ್ನತ ಇಸ್ಲಾಮಿಕ್ ಧರ್ಮಗುರು ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.


ಅಫ್ಘಾನಿಸ್ತಾನದ ಮೇಲೆ ತಮಗೆ ಸಂಪೂರ್ಣ ನಿಯಂತ್ರಣವಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ, ಆದರೆ ಇಸ್ಲಾಮಿಕ್ ಸ್ಟೇಟ್ ದೇಶಾದ್ಯಂತ ನಾಗರಿಕರು ಮತ್ತು ಪೊಲೀಸರ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದೆ. ಅಫ್ಘಾನ್ ಸುದ್ದಿ ಸಂಸ್ಥೆಯ ಪ್ರಕಾರ, ತಾಲಿಬಾನ್ ಸಾವುನೋವುಗಳ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.


ಇದನ್ನೂ ಓದಿ- ಹಿಂದೂ ಮಹಾ ಸಾಗರದಲ್ಲಿ ಚೀನಾದ ಬೇಹುಗಾರಿಕೆ ಹಡಗು: ಭಾರತಕ್ಕೆ ಏಕೆ ಕಳವಳ?


ಎರಡು ವಾರಗಳ ಹಿಂದೆ ಕಾಬೂಲ್‌ನಲ್ಲಿ ನಡೆದ ಎರಡು ಮಾರಣಾಂತಿಕ ಸ್ಫೋಟಗಳಲ್ಲಿ 10 ಜನರು ಸಾವನ್ನಪ್ಪಿದ್ದರೆ, 40 ಜನರು ಗಾಯಗೊಂಡಿದ್ದಾರ. ಆ ಎರಡೂ ದಾಳಿಗಳ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ.


ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯ ಒಂದು ವರ್ಷದ ನಂತರ ಸ್ಫೋಟ ಸಂಭವಿಸಿದೆ. ಮಾನವ ಹಕ್ಕುಗಳು ಮತ್ತು ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಹಲವಾರು ಭರವಸೆಗಳನ್ನು ತಾಲಿಬಾನ್ ಉಲ್ಲಂಘಿಸಿದೆ ಎಂದು ಆಫ್ಘಾನಿಸ್ತಾನದ ಹಕ್ಕುಗಳ ಗುಂಪುಗಳು ಹೇಳಿವೆ.


ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಬೂಲ್ ವಶಪಡಿಸಿಕೊಂಡ ನಂತರ, ಇಸ್ಲಾಮಿಕ್ ಅಧಿಕಾರಿಗಳು ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿದರು, ಮಾಧ್ಯಮವನ್ನು ನಿಗ್ರಹಿಸಲಾಯಿತು. 


ಇದನ್ನೂ ಓದಿ- ನಿಮಗಿದು ಗೊತ್ತೇ? ಇಲ್ಲಿನ ಜನರು ಸಂತೋಷವಾಗಿರಲು ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಾರಂತೆ!


ನ್ಯೂಯಾರ್ಕ್ ಮೂಲದ ಅಫ್ಘಾನಿಸ್ತಾನ ಹಕ್ಕುಗಳ ಗುಂಪು ತನ್ನ ವರದಿಯಲ್ಲಿ ತಾಲಿಬಾನ್‌ನ ಮಾನವ ಹಕ್ಕುಗಳ ಉಲ್ಲಂಘನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ ಮತ್ತು ದೇಶದ ಭೀಕರ ಮಾನವೀಯ ಪರಿಸ್ಥಿತಿಯನ್ನು ಎದುರಿಸಲು ಅಂತರರಾಷ್ಟ್ರೀಯ ಪ್ರಯತ್ನಗಳು ಬೆದರಿಕೆಯಲ್ಲಿವೆ ಎಂದು ಹೇಳಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.