ಕ್ವೆಟ್ಟಾ: ಪಾಕಿಸ್ತಾನದ ಸಮಸ್ಯಾತ್ಮಕ ನೈರುತ್ಯ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಐಷಾರಾಮಿ ಹೋಟೆಲ್ ಬಳಿ ಪೊಲೀಸ್ ವ್ಯಾನ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ಸ್ಪೋಟದಲ್ಲಿ ಕನಿಷ್ಠ ಇಬ್ಬರು ಪೊಲೀಸರು ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ.


Balochistan) ರಾಜಧಾನಿ ಕ್ವೆಟ್ಟಾದ ಸೆರೆನಾ ಹೋಟೆಲ್ ಬಳಿಯ ತಂಜೀಮ್ ಚೌಕದಲ್ಲಿ ಪೋಲಿಸ್ ಮೊಬೈಲ್ ವ್ಯಾನ್ ಅನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ಸ್ಫೋಟದಲ್ಲಿ ನಾಲ್ವರು ಪಾದಚಾರಿಗಳು ಕೂಡ ಗಾಯಗೊಂಡಿದ್ದಾರೆ ಎಂದು ಶಹವಾನಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-  PM Imran Khan : ಭಾರತೀಯರಿಗೆ ಮಣಿದು ಹಿಂದೂ ದೇವಾಲಯ ಪುನಃನಿರ್ಮಿಸಲು ಮುಂದಾದ ಪಾಕ್ ಪ್ರಧಾನಿ 


ಸ್ಫೋಟದಿಂದಾಗಿ (Quetta Blast) ಹತ್ತಿರದ ಕಟ್ಟಡಗಳ ಕಿಟಕಿಗಳು ಒಡೆದು ಹೋಗಿವೆ. ಘಟನೆಯಲ್ಲಿ ಗಾಯಗೊಂಡವರನ್ನು ನಗರದ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


ಬಲೂಚಿಸ್ತಾನದ ಮುಖ್ಯಮಂತ್ರಿ ಜಮ್ ಕಮಲ್ ಖಾನ್ ಘಟನೆಯನ್ನು ಖಂಡಿಸಿದ್ದಾರೆ:-
ಭಯೋತ್ಪಾದಕ ಅಂಶಗಳು ಪ್ರಾಂತ್ಯದ ಶಾಂತಿಯನ್ನು ಹಾಳುಮಾಡಲು ಬಯಸುತ್ತವೆ. ಆದರೆ ಭಯೋತ್ಪಾದಕರು (Terrorist) ತಮ್ಮ ನೀಚ ಯೋಜನೆಗಳಲ್ಲಿ ಯಶಸ್ವಿಯಾಗಲು ನಾವು ಎಂದಿಗೂ ಅನುಮತಿಸುವುದಿಲ್ಲ ಎಂದು ಬಲೂಚಿಸ್ತಾನದ ಮುಖ್ಯಮಂತ್ರಿ ಜಮ್ ಕಮಲ್ ಖಾನ್ (Jam Kamal Khan) ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ- Viral Video: ಎಮ್ಮೆಯ ಸಂದರ್ಶನ ಮಾಡಿದ ಪಾಕ್ ಪತ್ರಕರ್ತ, ನೀವು ನೋಡಿ ನಕ್ಕುಬಿಡಿ..!


ಏತನ್ಮಧ್ಯೆ, ಘಟನೆಯನ್ನು ತೀವ್ರವಾಗಿ ಖಂಡಿಸಿರುವ ನ್ಯಾಷನಲ್ ಅಸೆಂಬ್ಲಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನ ಪ್ರತಿಪಕ್ಷದ ನಾಯಕ ಶೆಹ್ಬಾಜ್ ಷರೀಫ್, ಜನರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಇಮ್ರಾನ್ ಸರ್ಕಾರದ ವಿರುದ್ಧ ಬಿಲಾವಲ್ ಭುಟ್ಟೋ ವಾಗ್ಧಾಳಿ:
ಮತ್ತೊಂದೆಡೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಲಿರುವ ಪಾಕಿಸ್ತಾನದ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ (Bilawal Bhutto), ಪಾಕಿಸ್ತಾನ ಸರ್ಕಾರ ಭಯೋತ್ಪಾದಕರನ್ನು ಸಮಾಧಾನಪಡಿಸುವುದನ್ನು ನಿಲ್ಲಿಸಬೇಕು ಮತ್ತು ಭಯೋತ್ಪಾದನೆಯನ್ನು ನಿಲ್ಲಿಸಲು ರಾಷ್ಟ್ರೀಯ ಕ್ರಿಯಾ ಯೋಜನೆಯಲ್ಲಿ ಗಂಭೀರವಾಗಿ ಕೆಲಸ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ