Jammu-Kashmir: ಜಮ್ಮು-ಕಾಶ್ಮೀರದ ಮೂರು ಸ್ಥಳಗಳಲ್ಲಿ ಅನುಮಾನಾಸ್ಪದ ಡ್ರೋನ್‌ಗಳು ಪತ್ತೆ, ಹೆಚ್ಚಿದ ಅಲರ್ಟ್

ಸಾಂಬಾದಲ್ಲಿನ ಕ್ಲಿಯಾರಿ ಅಂತಾರಾಷ್ಟ್ರೀಯ ಗಡಿಯ ಬಳಿ ಶಂಕಿತ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ ಕೆಲವು ಸುತ್ತಿನ ಗುಂಡುಗಳನ್ನು ಹಾರಿಸಿತು. ಆದಾಗ್ಯೂ, ಡ್ರೋನ್ ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಯಿತು ಎಂದು ತಿಳಿದುಬಂದಿದೆ.

Written by - ZH Kannada Desk | Last Updated : Jul 30, 2021, 06:40 AM IST
  • ಸಾಂಬಾದ ಗಜ್ವಾಲ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮತ್ತು ಐಟಿಬಿಪಿ ಕೇಂದ್ರದಲ್ಲಿ ಮೊದಲ ಡ್ರೋನ್ ಕಂಡುಬಂದಿದೆ
  • ಒಂದು ವಾರದೊಳಗೆ ಇದು ಎರಡನೇ ಬಾರಿಗೆ ಅಂತರರಾಷ್ಟ್ರೀಯ ಗಡಿಯ ಬಳಿ ಡ್ರೋನ್ ಪತ್ತೆಯಾಗಿದೆ
  • ಮೂರು ಸ್ಥಳಗಳಲ್ಲಿ ಅನುಮಾನಾಸ್ಪದ ಡ್ರೋನ್‌ಗಳು ಪತ್ತೆಯಾದ ಹಿನ್ನಲೆಯಲ್ಲಿ ಇಡೀ ಸಾಂಬಾ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ
Jammu-Kashmir: ಜಮ್ಮು-ಕಾಶ್ಮೀರದ ಮೂರು ಸ್ಥಳಗಳಲ್ಲಿ ಅನುಮಾನಾಸ್ಪದ ಡ್ರೋನ್‌ಗಳು ಪತ್ತೆ, ಹೆಚ್ಚಿದ ಅಲರ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಮೂರು ವಿಭಿನ್ನ ಸ್ಥಳಗಳಲ್ಲಿ ಗುರುವಾರ (ಜುಲೈ 30) ಸಂಜೆ ಡ್ರೋನ್‌ಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ಸ್ಥಳಗಳಲ್ಲಿ ಅನುಮಾನಾಸ್ಪದ ಡ್ರೋನ್‌ಗಳು ಪತ್ತೆಯಾದ ಹಿನ್ನಲೆಯಲ್ಲಿ ಅಧಿಕಾರಿಗಳು ಈ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿದರು.

ಸಾಂಬಾದ ಗಜ್ವಾಲ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮತ್ತು ಐಟಿಬಿಪಿ ಕೇಂದ್ರದಲ್ಲಿ ಮೊದಲ ಡ್ರೋನ್ ಕಂಡುಬಂದಿದೆ. ಪೊಲೀಸ್ ಠಾಣೆ ಉಸ್ತುವಾರಿ ರಾಕೇಶ್ ಶರ್ಮಾ ಮತ್ತು ಪೊಲೀಸ್ ಸಿಬ್ಬಂದಿ ಕೊನೆ ಕ್ಷಣದವರೆಗೂ ಇದರ ಮೇಲೆ ನಿಗಾ ಇಟ್ಟಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ- Chhota Rajan : ಆಸ್ಪತ್ರೆಗೆ ದಾಖಲಾದ ಭೂಗತ ಪಾತಕಿ ಛೋಟಾ ರಾಜನ್..! 

ಎರಡನೇ ಡ್ರೋನ್ ಅನ್ನು ಚಿಲಿಯಾರಿ ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ ಮತ್ತು ಮೂರನೇ ಡ್ರೋನ್ (Drones) ಅನ್ನು ಬರಿ ಬ್ರಹ್ಮ ಪ್ರದೇಶದಲ್ಲಿ ಕಂಡು ಹಿಡಿಯಲಾಗಿದೆ. ಈ ರೀತಿಯಾಗಿ ಮೂರು ಸ್ಥಳಗಳಲ್ಲಿ ಅನುಮಾನಾಸ್ಪದ ಡ್ರೋನ್‌ಗಳು ಪತ್ತೆಯಾದ ಹಿನ್ನಲೆಯಲ್ಲಿ ಇಡೀ ಸಾಂಬಾ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಡ್ರೋನ್ ಏನನ್ನಾದರೂ ಬೀಳಿಸುವಲ್ಲಿ ಯಶಸ್ವಿಯಾಗಿದೆಯೇ ಎಂದು ಪತ್ತೆ ಹಚ್ಚಲು ಪೊಲೀಸರು ಈ ಮೂರು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ರಾತ್ರಿ 8: 30 ರಿಂದ 9: 30 ರ ನಡುವೆ ಡ್ರೋನ್‌ಗಳನ್ನು ಗುರುತಿಸಲಾಗಿದೆ. ಸಾಂಬಾದ ಕ್ಲಿಯಾರಿ ಅಂತರರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾ ಪಡೆಗಳು (Border Security Forces) ಶಂಕಿತ ಡ್ರೋನ್ ಮೇಲೆ ಕೆಲವು ಸುತ್ತಿನ ಗುಂಡುಗಳನ್ನು ಹಾರಿಸಿದವು. ಆದಾಗ್ಯೂ, ಡ್ರೋನ್ ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಯಿತು ಎಂದು ತಿಳಿದುಬಂದಿದೆ.

ಇದನ್ನೂ ಓದಿ- Viral Video: ಆಟೋ ಗುದ್ದಿಸಿ ನ್ಯಾಯಾಧೀಶರ ಹತ್ಯೆ, ಉನ್ನತಮಟ್ಟದ ತನಿಖೆ ಆದೇಶ

ಒಂದು ವಾರದೊಳಗೆ ಇದು ಎರಡನೇ ಬಾರಿಗೆ ಅಂತರರಾಷ್ಟ್ರೀಯ ಗಡಿಯ ಬಳಿ ಡ್ರೋನ್ ಪತ್ತೆಯಾಗಿದೆ. ಇದನ್ನೂ ಮೊದಲು ಜುಲೈ 23 ರಂದು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರು ಜಮ್ಮು ಜಿಲ್ಲೆಯ ಅಖ್ನೂರ್ ಪ್ರದೇಶದಲ್ಲಿ ಐದು ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನ ಸಾಮಗ್ರಿಗಳನ್ನು ಹೊತ್ತ ಡ್ರೋನ್ ಅನ್ನು ಹೊಡೆದುರುಳಿಸಿದರು. ಡ್ರೋನ್ ಗಡಿಯೊಳಗೆ ಸುಮಾರು ಏಳರಿಂದ ಎಂಟು ಕಿಲೋಮೀಟರ್ ಒಳಗೆ ಹಾರಾಡುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದು ಆರು ದೊಡ್ಡ ರೆಕ್ಕೆಗಳನ್ನು ಹೊಂದಿದ್ದು ಟೆಟ್ರಾ ಕಾಪ್ಟರ್ ಆಗಿದೆ. ಹಾರುವ ವಸ್ತುವಿಗೆ ಐಇಡಿ ವಸ್ತುವನ್ನು ಲಗತ್ತಿಸಲಾಗಿತ್ತು ಎಂದವರು ತಿಳಿಸಿದ್ದರು.

ಏತನ್ಮಧ್ಯೆ, ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಯಾವುದೇ ಹಾರುವ ವಸ್ತುಗಳ ಬಗ್ಗೆ ಹದ್ದಿನ ಕಣ್ಣಿಡುವಂತೆ ಕೇಂದ್ರ ಸರ್ಕಾರವು ಎಲ್ಲಾ ಭದ್ರತಾ ಸಂಸ್ಥೆಗಳಿಗೆ ಸೂಚಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News