ನವದೆಹಲಿ:  ಬರಾಕ್ ಒಬಾಮಾ ಎರಡು ಬಾರಿಗೆ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ಪತ್ನಿ ಮಿಚೆಲ್ ಒಬಾಮಾ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹಗಳು ಈಗ ಹರಿದಾಡುತ್ತಿವೆ.


COMMERCIAL BREAK
SCROLL TO CONTINUE READING

ಈ ಬೆನ್ನಲ್ಲೇ ಮಿಚೆಲ್ ಒಬಾಮಾ ಈ ಎಲ್ಲ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ. ದೇಶಕ್ಕೆ ಸಹಾಯ ಮಾಡಬೇಕೆಂದರೆ ಹಲವು ಮಾರ್ಗಗಳಿವೆ ಎಂದ ಅವರು ಅಧ್ಯಕ್ಷ  ಸ್ಥಾನಕ್ಕೆ ತಾವು ಸ್ಪರ್ಧಿಯೇ  ? ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸುತ್ತಾ 'ಜೀರೋ ಸಾಧ್ಯತೆ' ಇದೆ ಎಂದು ಹೇಳುವ ಮೂಲಕ ತಾವು ಆಕಾಂಕ್ಷಿ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.


"ಈ ದೇಶವನ್ನು ಸುಧಾರಿಸಲು ಮತ್ತು ಉತ್ತಮ ಜಗತ್ತನ್ನು ನಿರ್ಮಿಸಲು ಹಲವು ಮಾರ್ಗಗಳಿವೆ, ಮತ್ತು ಯುವಜನರೊಂದಿಗೆ ಕೆಲಸ ಮಾಡುವುದರಿಂದ ಹಿಡಿದು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುವವರೆಗಿನ ಎಲ್ಲ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ. ಆದರೆ ಓವಲ್ ಕಚೇರಿಯಲ್ಲಿ ಮೇಜಿನ ಹಿಂದೆ ಕುಳಿತುಕೊಳ್ಳುವುದು ಎಂದಿಗೂ ಒಂದಾಗುವುದಿಲ್ಲ. ಅದು ನನಗೆ ಮಾತ್ರವಲ್ಲ, "ಎಂದು ಅವರು ಹೇಳಿದರು.


ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಪರಿಗಣಿಸಲು ಮಿಚೆಲ್ ಒಬಾಮ ಅವರಿಗೆ ಒತ್ತಾಯಿಸಲಾಗುತ್ತಿದೆ. ಇತ್ತೀಚಿಗೆ ಅಮೆರಿಕ ಮೂಲದ ಚಲನಚಿತ್ರ ನಿರ್ಮಾಪಕ ಮೈಕೆಲ್ ಮೂರ್ ಅವರು ಮಿಚೆಲ್ ಒಬಾಮಾ ಮಾತ್ರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಗೊಳಿಸಬಹುದು ಎಂದು ದಿ ಹಿಲ್ ವರದಿ ಮಾಡಿದೆ.