ಪಾಕ್ ನಲ್ಲಿ ಮಿಲಿಟರಿ ಆಡಳಿತ ಎನ್ನುವುದು ಸಂಪ್ರದಾಯವಾಗಿದೆ- ಕಾಮನ್ವೆಲ್ತ್ ಸಭೆಯಲ್ಲಿ ಭಾರತ ಟೀಕೆ
ಉಗಾಂಡಾದಲ್ಲಿ ನಡೆದ ಕಾಮನ್ವೆಲ್ತ್ ಪಾರ್ಲಿಮೆಂಟರಿ ಸಮ್ಮೇಳನದಲ್ಲಿ ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನದ ನಿಲುವು ಪ್ರಚಾರದಿಂದ ಕೂಡಿದೆ ಎಂದು ಭಾರತ ತೀವ್ರವಾಗಿ ಟೀಕಿಸಿತು ಮತ್ತು ಮಿಲಿಟರಿ ಆಡಳಿತವು ಪಾಕಿಸ್ತಾನದ ಸಂಪ್ರದಾಯವಾಗಿದೆ ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ನವದೆಹಲಿ: ಉಗಾಂಡಾದಲ್ಲಿ ನಡೆದ ಕಾಮನ್ವೆಲ್ತ್ ಪಾರ್ಲಿಮೆಂಟರಿ ಸಮ್ಮೇಳನದಲ್ಲಿ ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನದ ನಿಲುವು ಪ್ರಚಾರದಿಂದ ಕೂಡಿದೆ ಎಂದು ಭಾರತ ತೀವ್ರವಾಗಿ ಟೀಕಿಸಿತು ಮತ್ತು ಮಿಲಿಟರಿ ಆಡಳಿತವು ಪಾಕಿಸ್ತಾನದ ಸಂಪ್ರದಾಯವಾಗಿದೆ ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಕಂಪಾಲಾದಲ್ಲಿ ನಡೆದ ಕಾಮನ್ವೆಲ್ತ್ ಸಂಸದೀಯ ಸಂಘದ 64 ನೇ ಸಭೆಯಲ್ಲಿ ಪಾಕಿಸ್ತಾನದ ನಿಯೋಗವು ಕಾಶ್ಮೀರ್ ಕಣಿವೆಯಲ್ಲಿನ ಭದ್ರತಾ ಪಡೆಗಳ ಭಾರಿ ಉಪಸ್ಥಿತಿ ಬಗ್ಗೆ ಅಪಸ್ವರ ಎತ್ತಿತು.
ಸಂಸದರಾದ ಅಧೀರ್ ರಂಜನ್ ಚೌಧರಿ, ರೂಪಾ ಗಂಗೂಲಿ, ಮತ್ತು ಎಲ್ ಹನುಮಂತಯ್ಯ ಅವರನ್ನೊಳಗೊಂಡ ಭಾರತೀಯ ನಿಯೋಗವು ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತದ ಸಂಪ್ರದಾಯವು ಪ್ರಚಲಿತದಲ್ಲಿದೆ ಮತ್ತು ದೇಶವು 33 ವರ್ಷಗಳಿಂದ ಇಂತಹ ಆಡಳಿತದಲ್ಲಿದೆ ಎಂದು ಲೋಕಸಭಾ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ. ಪಾಕಿಸ್ತಾನದ ಪ್ರಚಾರವನ್ನು ಸಂಸದೆ ರೂಪಾ ಗಂಗೂಲಿ ಮತ್ತು ಭಾರತೀಯ ಸಂಸದೀಯ ನಿಯೋಗದ ಸದಸ್ಯರು ತೀವ್ರವಾಗಿ ವಿರೋಧಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇತೃತ್ವದ ಭಾರತೀಯ ನಿಯೋಗ ಭಾನುವಾರದಂದು ಮುಕ್ತಾಯಗೊಳ್ಳಲಿರುವ ಸಮ್ಮೇಳನದಲ್ಲಿ ಭಾಗವಹಿಸಿದೆ.
ಕಾಮನ್ವೆಲ್ತ್ ಸಂಸದೀಯ ಸಂಘದ ಸದಸ್ಯರಾಗಿರುವ ರಾಜ್ಯ ಶಾಸಕಾಂಗಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಮಾಲ್ಡೀವ್ಸ್‌ನಲ್ಲಿ ನಡೆದ ದಕ್ಷಿಣ ಏಷ್ಯಾದ ಸ್ಪೀಕರ್ ಶೃಂಗಸಭೆಯಲ್ಲಿ ಪಾಕಿಸ್ತಾನವೂ ಕಾಶ್ಮೀರ ವಿಷಯವನ್ನು ಎತ್ತಿತು. ಆದರೆ ಭಾರತದ ತೀವ್ರ ವಿರೋಧದ ನಂತರ ಇದನ್ನು ತಿರಸ್ಕರಿಸಲಾಯಿತು.