ಮೊನಾಕೊ: ನೀವು ಕೇವಲ ಒಂದೇ ಗಂಟೆಯಲ್ಲಿ ಯಾವುದಾದರೊಂದು ದೇಶವನ್ನು ಸುತ್ತಾಡಬಹದು ಎಂಬ ವಿಷಯ ಕೇಳಿದ್ದೀರಾ? ಇಲ್ಲ ಎನ್ನುವುದಾದರೆ ನಾವು ಹೇಳುತ್ತೇವೆ. ಆ ದೇಶದ ಹೆಸರು ಮೊನಾಕೊ (Monaco).


COMMERCIAL BREAK
SCROLL TO CONTINUE READING

ಅಂದಹಾಗೆ, ಇದನ್ನು ದೇಶದ ಬದಲು ನಗರ ಎಂದು ಕರೆಯುವುದೇ ಸೂಕ್ತವಾಗಬಹುದೇನೊ... ಏಕೆಂದರೆ ಇಡೀ‌ ದೇಶದ ಸುತ್ತಳತೆ ಕೇವಲ 1.95 ಚದರ ಕಿಲೋ ಮೀಟರ್‌. ಕಡಿಮೆ ಜಾಗದಲ್ಲಿ ಹರಡಿದ್ದರಿಂದ ಇದನ್ನು ಮೊನಾಕೊ ಸಿಟಿ (Monaca City)ಎಂದೂ ಕರೆಯುತ್ತಾರೆ. ಈ ದೇಶದಲ್ಲಿ ನೀವು ವಾಕ್ (Walk) ಮಾಡಲು ಹೊರಟರೆ ಇಡೀ ನಗರವನ್ನು ನೋಡಲು 56 ನಿಮಿಷಗಳಿಗಿಂತ ಹೆಚ್ಚು ಸಮಯ ಬೇಕಾಗುವುದಿಲ್ಲ.


ಬಡತನದ ಪ್ರಮಾಣ ಶೂನ್ಯ
ಅಂದಹಾಗೆ, ವಿಶ್ವದ ಅತಿ ಚಿಕ್ಕ ದೇಶ ವ್ಯಾಟಿಕನ್ ನಗರ (Vatican City). ಅದು 0.49 ಚದರ ಕಿ.ಮೀ ವಿಸ್ತೀರ್ಣ ಮತ್ತು ಒಟ್ಟು 825 ಜನಸಂಖ್ಯೆಯನ್ನು ಹೊಂದಿದೆ. ಆದರೆ ಮೊನಾಕೊ ನಗರದ ಹೆಸರನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. 1927 ರಿಂದ ಇಲ್ಲಿ ರಾಜಪ್ರಭುತ್ವ ಇದೆ. ಈ‌ ದೇಶದ ಸುರಕ್ಷತೆಗೆ ಫ್ರಾನ್ಸ್ (France) ಕಾರಣವಾಗಿದೆ.


ಇದನ್ನೂ ಓದಿ: Corona new strain: ಈ ದೇಶದಲ್ಲಿ ಪ್ರಯಾಣ ಇತಿಹಾಸ ಹೊಂದಿರದ ಯುವಕನಲ್ಲೂ ಸೋಂಕು ಪತ್ತೆ


ಗಾತ್ರದಲ್ಲಿ ಸಣ್ಣದಾಗಿದ್ದರೂ ಈ ದೇಶದ ಹಲವು ಗುಣಲಕ್ಷಣಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಉದಾಹರಣೆಗೆ ಮೊನಾಕೊದಲ್ಲಿ ಒಬ್ಬ ವ್ಯಕ್ತಿಯು ಬಡವನಲ್ಲ, ಇಲ್ಲಿ ಬಡತನದ ಪ್ರಮಾಣ ಶೂನ್ಯವಾಗಿದೆ. ಮೊನಾಕೊದಲ್ಲಿ ಅಪರಾಧಗಳೂ ಕಡಿಮೆಯಾಗಲು (Crime Rate) ಇದು ಪ್ರಮುಖ ಕಾರಣವಾಗಿದೆ.


ಇಟಲಿ-ಫ್ರಾನ್ಸ್ ಗಡಿಗಳು:
ವಾಯುವ್ಯ ಯುರೋಪಿನ ಮೆಡಿಟರೇನಿಯನ್ ಸಮುದ್ರದ (Mediterranean Sea) ಉದ್ದಕ್ಕೂ ಇರುವ ಮೊನಾಕೊ ನೋಡಲು ಬಹಳ ಸುಂದರವಾಗಿರುತ್ತದೆ. ಈ ದೇಶದ ಬೀದಿಗಳು ಬಹುಮಹಡಿ ಕಟ್ಟಡಗಳಿಂದ ತುಂಬಿವೆ. ಇಲ್ಲಿ ಒಟ್ಟು ಜನಸಂಖ್ಯೆ ಸುಮಾರು 39 ಸಾವಿರ. ಮೊನಾಕೊವನ್ನು ಹೆಚ್ಚು ಸಾಂದ್ರತೆ ಹೊಂದಿರುವ ದೇಶಗಳಲ್ಲಿ ಒಂದು ಎಂದು‌ ಹೇಳಲಾಗುತ್ತದೆ. ಈ ಸಣ್ಣ ದೇಶದ ಗಡಿ ಫ್ರಾನ್ಸ್ ಮತ್ತು ಇಟಲಿ (Italy)ಗೆ ಸಂಪರ್ಕ ಹೊಂದಿದೆ.


ಇದನ್ನೂ ಓದಿ: Coronavirus Pandemic: ಕೊರೊನಾ ಅಂತಿಮ ಮಹಾಮಾರಿ ಅಲ್ಲ, ಎಚ್ಚರಿಕೆ ನೀಡಿದ WHO ಮುಖ್ಯಸ್ಥ


ಆಸ್ತಿ ಬೆಲೆಗಳು ತುಂಬಾ ಹೆಚ್ಚು:
ಅದರ ಗಾತ್ರವನ್ನು ಹೊರತುಪಡಿಸಿ ಮೊನಾಕೊ ಮತ್ತೊಂದು ಕಾರಣಕ್ಕಾಗಿ ಚರ್ಚೆಯಲ್ಲಿದೆ. ಅವರು ಇಲ್ಲಿ ನೆಲೆಸಿದ ಮಿಲಿಯನೇರ್. ಈ ದೇಶವು ವಿಶ್ವದಲ್ಲೇ ಅತಿ ಹೆಚ್ಚು ಶ್ರೀಮಂತರನ್ನು ಹೊಂದಿದೆ. 1 ಚದರ ಮೈಲಿ ಪ್ರದೇಶದಲ್ಲಿ 12, 261 ಮಿಲಿಯನೇರ್‌ಗಳು ವಾಸಿಸುತ್ತಿದ್ದಾರೆ. ಮೊನಾಕೊದ ಪ್ರತಿ ಮೂರನೇ ವ್ಯಕ್ತಿ ಮಿಲಿಯನೇರ್. ಮೊನಾಕೊದಲ್ಲಿ ಸಿಂಗಲ್ ಬೆಡ್ ರೂಂ ಮನೆಯೊಂದರ ಅಂದಾಜು 12 ಕೋಟಿ ರೂಪಾಯಿ ಪಾವತಿಸಬೇಕಾಗುತ್ತದೆ.


ಜಿಡಿಪಿ ಎರಡನೇ ಸ್ಥಾನದಲ್ಲಿದೆ:
ಈ ದೇಶದ ಅತ್ಯಂತ ವಿಶೇಷವೆಂದರೆ ಇಲ್ಲಿ ಕಳ್ಳತನದ ಘಟನೆಗಳು ನಗಣ್ಯ. 100 ನಾಗರಿಕರ ಮೇಲೆ 1 ಪೊಲೀಸ್ ಇದ್ದಾರೆ. ಮೊನಾಕೊದ ಜಿಡಿಪಿ (GDP) ವಿಶ್ವದ ಎರಡನೇ ಸ್ಥಾನದಲ್ಲಿದೆ. ಇಲ್ಲಿ ತಲಾ ಆದಾಯ ಸುಮಾರು 1 ಕೋಟಿ 21 ಲಕ್ಷ 40 ಸಾವಿರ. ದೇಶದ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಮೊನಾಕೊದಲ್ಲಿ ವಾಸಿಸುತ್ತಿರುವ 39 ಸಾವಿರ ನಾಗರಿಕರಲ್ಲಿ ಕೇವಲ 9 ಸಾವಿರ 200 ಜನರು ಮಾತ್ರ ಈ ದೇಶದಲ್ಲಿ ಜನಿಸಿದ್ದಾರೆ. ಉಳಿದ ನಾಗರಿಕರು ವಿದೇಶದಲ್ಲಿ ಜನಿಸಿದವರು. ಮೊನಾಕೊದಲ್ಲಿ ಜನರ ಸರಾಸರಿ ವಯಸ್ಸು 85 ವರ್ಷಗಳು, ಇದು ವಿಶ್ವದಲ್ಲೇ ಅತಿ ಹೆಚ್ಚು ಎನ್ನುವುದು ಮತ್ತೊಂದು ವಿಶೇಷ.


ಇದನ್ನೂ ಓದಿ: 2020ರಲ್ಲಿ Wikipediaದಲ್ಲಿ ಕರೋನಾ ಹೊರತುಪಡಿಸಿ ಅತಿ ಹೆಚ್ಚು ಓದಿರುವ ವಿಷಯಗಳಿವು...


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.