Coronavirus Pandemic: ಕೊರೊನಾ ಅಂತಿಮ ಮಹಾಮಾರಿ ಅಲ್ಲ, ಎಚ್ಚರಿಕೆ ನೀಡಿದ WHO ಮುಖ್ಯಸ್ಥ

Coronavirus Pandemic:ನಾವು ಹಣ ಬಳಕೆ ಮಾಡುವ ಮೂಲಕ ಇಂತಹ ಪ್ರಕೋಪವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದೇವೆ. ಆದರೆ, 'ಇದೊಂದು ಅಪಾಯಕಾರಿ ಅದೂರದೃಷ್ಟಿ'ಯಿಂದ ಕೂಡಿದ ಮಾರ್ಗವಾಗಿದೆ ಎಂದು WHO ಮುಖ್ಯಸ್ಥ Tedros Adhanom Ghebreyesus ಹೇಳಿದ್ದಾರೆ.

Written by - Nitin Tabib | Last Updated : Dec 27, 2020, 01:00 PM IST
  • ಕೊವಿಡ್-19 ನಿಂದ ಜನ ಪಾಠ ಕಲಿಯಬೇಕು ಎಂದ ಟೆಡ್ರೋಸ್.
  • ಮುಂಬರುವ ಸಂಕಷ್ಟಗಳಿಗೆ ನಾವು ಏಕೆ ಸಿದ್ಧರಾಗುವುದಿಲ್ಲ?
  • ದೀರ್ಘ ಕಾಲದಿಂದ ಜಗತ್ತು ಭಯ ಹಾಗೂ ಅಜಾಗರೂಕತೆಯ ಚಕ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
Coronavirus Pandemic: ಕೊರೊನಾ ಅಂತಿಮ ಮಹಾಮಾರಿ ಅಲ್ಲ, ಎಚ್ಚರಿಕೆ ನೀಡಿದ WHO ಮುಖ್ಯಸ್ಥ title=
Coronavirus Pandemic (File Photo)

ನವದೆಹಲಿ: Coronavirus Pandemic: ಕರೋನಾ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್(Tedros Adhanom Ghebreyesus) ಗಂಭೀರ ಹೇಳಿಕೆ ನೀಡಿದ್ದಾರೆ. ಡಿಸೆಂಬರ್ 26 ರ ಶನಿವಾರದಂದು ಮಹತ್ವದ ಘೋಷಣೆ ಮಾಡಿದ WHO ಮುಖ್ಯಸ್ಥರು, ಕರೋನವೈರಸ್ ವಿಶ್ವದ ಕೊನೆಯ ಸಾಂಕ್ರಾಮಿಕ ಬಿಕ್ಕಟ್ಟು ಅಲ್ಲ ಎಂದು ಹೇಳಿದ್ದಾರೆ. ಹವಾಮಾನ ಬದಲಾವಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ನಾವು ಪರಿಹಾರ ಕಂಡುಹಿಡಿಯದೆ ಹೋದಲ್ಲಿ, ಮಾನವನ ಆರೋಗ್ಯ ಸುಧಾರಿಸುವ ನಮ್ಮ ಎಲ್ಲಾ ಪ್ರಯತ್ನಗಳು ವ್ಯರ್ಥವೆಂದು ಸಾಬೀತಾಗುತ್ತವೆ ಎಂದು ಟೆಡ್ರೊಸ್ ಹೇಳಿದ್ದಾರೆ.

ನಾವು ಹಣ ಬಳಕೆ ಮಾಡುವ ಮೂಲಕ ಇಂತಹ ಮಹಾಮಾರಿಯ ಪ್ರಕೋಪವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದೇವೆ. ಆದರೆ, 'ಇದೊಂದು ಅಪಾಯಕಾರಿ ಅದೂರದೃಷ್ಟಿ'ಯಿಂದ ಕೂಡಿದ ಮಾರ್ಗವಾಗಿದೆ ಎಂದು Tedros Adhanom Ghebreyesus ಹೇಳಿದ್ದಾರೆ.

ಇದನ್ನು ಓದಿ- Google Play Storeನಲ್ಲಿ ಪಟ್ಟಿಯಾದ WHO Covid-19 ಅಂಡ್ರಾಯಿಡ್ ಆಪ್, ಸಿಗಲಿದೆ ಈ ಮಾಹಿತಿ

ಮುಂದಿನ ಮಹಾಮಾರಿಗೆ ಸಿದ್ಧರಾಗಬೇಕಿದೆ
International Day of Epidemic Preparedness ನ ಮೊದಲ ದಿನ ಭಾನುವಾರ ವಿಡಿಯೋ ಸಂದೇಶವೊಂದನ್ನು ನೀಡಿರುವ WHO ಮುಖ್ಯಸ್ಥರು ಜನರು ಅಪಾಯಕಾರಿ ಅದೂರದೃಷ್ಟಿ ಹೊಂದಿದ್ದಾರೆ. ಕೊರೊನಾ ಪ್ರಕೋಪ ತಡೆಗಟ್ಟಲು ಅವರು ನೀರಿನ ಹಾಗೆ ಹಣ ವ್ಯಯಿಸುತ್ತಿದ್ದಾರೆ. ಆದರೆ ಮುಂಬರುವ ಮಹಾಮಾರಿಯಿಂದ ಪಾರಾಗಲು ಯಾವುದೇ ಪ್ರಯತ್ನಗಳನ್ನು ಅವು ನಡೆಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. 

ಇದನ್ನು ಓದಿ- Good News! Zydus Cadila ಲಸಿಕೆಯ ಪರೀಕ್ಷೆ ಯಶಸ್ವಿ, No Side Effect

ಕೋವಿಡ್ -19 (COVID-19) ಸಾಂಕ್ರಾಮಿಕದಿಂದ ಜನರು ಪಾಠ ಕಲಿಯುವ ಅವಶ್ಯಕತೆ ಇದೆ.ದೀರ್ಘಕಾಲದವರೆಗೆ, ಜಗತ್ತು ಭಯ ಮತ್ತು ಅಜಾಗರೂಕತೆಯ ಚಕ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾವು ಸಾಂಕ್ರಾಮಿಕ ರೋಗಕ್ಕೆ ಹಣವನ್ನು ಖರ್ಚು ಮಾಡುತ್ತೇವೆ, ಆದರೆ, ಅದು ಮುಗಿದ ನಂತರ ಮರೆತು ಮುಂಬರುವ ಬಿಕ್ಕಟ್ಟಿಗೆ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳುವುದಿಲ್ಲ. ನಮ್ಮ ಆಲೋಚನೆ ಏಕೆ ಹೀಗಿದೆ ಎಂಬುದು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟಕರ. ನಾವು ಮುಂದಾಲೋಚನೆ ಏಕೆ ಮಾಡುವುದಿಲ್ಲ? ಎಂದು ಟೆಡ್ರೋಸ್ ಪ್ರಶ್ನಿಸಿದ್ದಾರೆ.

ಇದನ್ನು ಓದಿ- 'ಭಾರತದ ಕೊರೊನಾ ಲಸಿಕೆ Covaxin ಜಗತ್ತಿನ ಗಮನ ಸೆಳೆದಿದೆ'

ಮಹಾಮಾರಿಗಳು ಜೀವನದ ವಾಸ್ತವಿಕತೆ
ಇದು ಕೊನೆಯ ಮಹಾಮಾರಿ ಅಲ್ಲ ಮತ್ತು ಇಂತಹ ಸಾಂಕ್ರಾಮಿಕ ರೋಗಗಳು ಜೀವನದ ನೈಜ ಇತಿಹಾಸ ಹೇಳುತ್ತವೆ. ಕರೋನವೈರಸ್ ಸಾಂಕ್ರಾಮಿಕವು ಮಾನವರು, ಪ್ರಾಣಿಗಳ ಆರೋಗ್ಯ ಮತ್ತು ಈ ಗ್ರಹದ ನಡುವಿನ ಪ್ರಮುಖ ಸಂಬಂಧವನ್ನು ಬಹಿರಂಗಪಡಿಸಿದೆ. ಆದ್ದರಿಂದ, ಮಾನವರು ಮತ್ತು ಪ್ರಾಣಿಗಳ ನಡುವಿನ ಈ ಸಂಪರ್ಕ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ನಾವು ಕೆಲಸ ಮಾಡದಿದ್ದರೆ, ಮಾನವನ ಆರೋಗ್ಯವನ್ನು ಸುಧಾರಿಸುವ ನಮ್ಮ ಎಲ್ಲಾ ಪ್ರಯತ್ನಗಳು ವಿಫಲ ಎಂದು ಸಾಬೀತಾಗಳಿವೆ. ಹವಾಮಾನ ವೈಪರೀತ್ಯದಿಂದಾಗಿ, ನಮ್ಮ ಭೂಮಿಯು ವಾಸಿಸಲು ಯೋಗ್ಯವಾಗಿಲ್ಲಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- Coronavirus ಗಿಂತ ಭಯಾನಕ ವೈರಸ್ ಬರಲಿದೆ ಎಚ್ಚರ! ಎಂದ Ebola ಪತ್ತೆಹಚ್ಚಿದ ವಿಜ್ಞಾನಿ

ಕಳೆದ 12 ತಿಂಗಳುಗಳಲ್ಲಿ ನಮ್ಮ ಜಗತ್ತು ಸಂಪೂರ್ಣ ಬದಲಾಗಿದೆ. ಮಹಾಮಾರಿಯ ಪ್ರಕೋಪ ಕೇವಲ ಒಂದು ರೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಸಮುದಾಯ ಹಾಗೂ ಅರ್ಥವ್ಯವಸ್ಥೆಗಳ ಮೇಲೆ ಇವು ದೀರ್ಘಕಾಲದ ವರೆಗೆ ಪರಿಣಾಮ ಬೀರುತ್ತವೆ ಎಂದು ಟೆಡ್ರೋಸ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News