Monkeypox Community Transmission In UK - ಕರೋನಾ ನಂತರ, ಇದೀಗ ಜಗತ್ತು ಹೊಸ ರೀತಿಯ ಕಾಯಿಲೆಯ ಹಿಡಿತದಲ್ಲಿ ಸಿಲುಕಿಕೊಳ್ಳುತ್ತಿದೆ. ಈ ರೋಗದ ಹೆಸರು ಮಂಕಿಪಾಕ್ಸ್ ವೈರಸ್, ಇದು ಇದೀಗ ಸಮುದಾಯ ಹರಡುವಿಕೆ ರೂಪ ಪಡೆದುಕೊಳ್ಳುತ್ತಿದೆ. ಬ್ರಿಟನ್‌ನ ಆರೋಗ್ಯ ಸಂಸ್ಥೆಯ ಪ್ರಕಾರ, ದೇಶದಲ್ಲಿ ಮಂಕಿಪಾಕ್ಸ್ ವೈರಸ್ ಹರಡಲು ಪ್ರಾರಂಭಿಸಿದೆ. ಈ ಕುರಿತು ಮಾತನಾಡಿರುವ UKHSA ಮುಖ್ಯ ವೈದ್ಯಕೀಯ ಸಲಹೆಗಾರ ಸುಸಾನ್ ಹಾಪ್ಕಿನ್ಸ್, ' ನಾವು ಪಶ್ಚಿಮ ಆಫ್ರಿಕಾದ ವ್ಯಕ್ತಿಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರದ ಪ್ರಕರಣಗಳನ್ನು ನೋಡುತ್ತಿದ್ದೇವೆ. ಅವರು ರೋಗಕ್ಕೆ ಗುರಿಯಾಗುತ್ತಿದ್ದಾರೆ. ಈ ಕಾಯಿಲೆಯಿಂದ ಬಳಲುತ್ತಿರುವವರ ದೈನಂದಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸುಸಾನ್ ಹಾಪ್ಕಿನ್ಸ್ ಪ್ರಕಾರ, ಈ ರೋಗವು ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ವೇಗವಾಗಿ ಹರಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Monkeypox: ವಿಶ್ವದ ಹಲವು ದೇಶಗಳಲ್ಲಿ ಹರಡಿದ ಮಂಕಿಪಾಕ್ಸ್, ಭಾರತದ ವಿಮಾನ ನಿಲ್ದಾಣಗಳಲ್ಲಿಯೂ ಕೂಡ ಕಟ್ಟೆಚ್ಚರ

ಈ ರೋಗದ ಬಗ್ಗೆ ಜನರು ಜಾಗೃತರಾಗಬೇಕು. ಹೆಚ್ಚಿನ ವಯಸ್ಕರಲ್ಲಿ ಈ ರೋಗದ ಲಕ್ಷಣಗಳು ಸ್ವಲ್ಪಮಟ್ಟಿಗೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಮಂಗನ ಕಾಯಿಲೆಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿ ವೈದ್ಯರನ್ನು ಸಂಪರ್ಕಿಸಿ ಎಂದು ಸುಸಾನ್ ಹಾಪ್ಕಿನ್ಸ್ ಹೇಳಿದ್ದಾರೆ. ಬ್ರಿಟನ್‌ನಲ್ಲಿ ಮೇ 7 ರಂದು ಇತ್ತೀಚೆಗೆ ನೈಜೀರಿಯಾಕ್ಕೆ ಪ್ರಯಾಣಿಸಿದ ರೋಗಿಯಲ್ಲಿ ಈ ರೋಗದ ಲಕ್ಷಣಗಳು ಮೊದಲ ಬಾರಿಗೆ ಕಂಡುಬಂದಿದ್ದವು ಎಂಬುದು ಇಲ್ಲಿ ಗಮನಾರ್ಹ. ಕ್ರಮೇಣ ಈ ರೋಗವು ಈಗ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿಯೂ ಹರಡುತ್ತಿದೆ.


ಇದನ್ನೂ ಓದಿ-ಚೀನಾದಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೊನಾ: ಇಡೀ ಜಗತ್ತಿಗೆ ಕಾದಿದೆ ಗಂಡಾಂತರ..!

ಮಂಕಿ ಪಾಕ್ಸ್ ಸೋಂಕಿತ ವ್ಯಕ್ತಿ ಬಳಸಿದ ಹಾಸಿಗೆ ಅಥವಾ ಟವೆಲ್ ಅನ್ನು ಮರುಬಳಕೆ ಮಾಡುವ ಮೂಲಕ ಸಾಮಾನ್ಯವಾಗಿ ಮಂಕಿಪಾಕ್ಸ್ ವೈರಸ್ ಹರಡುತ್ತದೆ.  ಜ್ವರ, ಸ್ನಾಯು ನೋವು, ಶೀತ, ಸುಸ್ತು, ಮತ್ತು ಕೈ ಮತ್ತು ಮುಖದ ಮೇಲೆ ಚಿಕನ್ಪಾಕ್ಸ್ ತರಹದ ದದ್ದುಗಳು ಏಳುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ರೋಗಕ್ಕೆ ಯಾವುದೇ ಪ್ರತ್ಯೇಕ ಚಿಕಿತ್ಸೆ ಇಲ್ಲ, ಆದರೆ ಸಿಡುಬು ವಿರುದ್ಧದ ಲಸಿಕೆಯು ಮಂಕಿಪಾಕ್ಸ್ ಅನ್ನು ತಡೆಗಟ್ಟುವಲ್ಲಿ ಸುಮಾರು ಶೇ.85 ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ. ಯುಕೆ ಅಧಿಕಾರಿ ನಾದಿಮ್ ಜಾಹ್ವಿ ಪ್ರಕಾರ, ಸರ್ಕಾರವು ಸಿಡುಬು ಲಸಿಕೆಯ ದಾಸ್ತಾನುಗಳನ್ನು ಖರೀದಿಸಲು ಪ್ರಾರಂಭಿಸಿದೆ ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.