ನವದೆಹಲಿ: ಚೀನಾದಲ್ಲಿ ಮತ್ತೆ ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿದೆ. ಈ ಹಿನ್ನೆಲೆ ಜಿನ್‌ಪಿಂಗ್ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಹಲವು ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಕೂಡ ಜಾರಿಯಲ್ಲಿದೆ. ಚೀನಾದಲ್ಲಿ ಏಕಾಏಕಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ಇಡೀ ಪ್ರಪಂಚದ ಮೇಲೆಯೇ ಪರಿಣಾಮ ಬೀರುತ್ತಿದೆ. ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ಪಾದರಕ್ಷೆಗಳು, ಆಟೋ ವಲಯದ ಸರಬರಾಜು ಮತ್ತು ಗ್ಯಾಜೆಟ್‌ಗಳಂತಹ ಎಲ್ಲಾ ಸರಕುಗಳ ಮೇಲೆ ನೇರ ಪರಿಣಾಮ ಬೀರಿದೆ.
ಬಾಹ್ಯ ಪೂರೈಕೆಯಲ್ಲಿನ ನಿರ್ಬಂಧ
ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರಿಸುತ್ತಿರುವ ಪರಿಣಾಮ ಅಮೆರಿಕದಿಂದ ಹಿಡಿದು ಆಸ್ಟ್ರೇಲಿಯಾದವರೆಗೂ ಆಸ್ಪತ್ರೆಗಳು ಎಕ್ಸ್-ರೇಗಳಲ್ಲಿ ಬಳಸುವ ರಾಸಾಯನಿಕಗಳ ಕೊರತೆಯನ್ನು ಎದುರಿಸುತ್ತಿವೆ. ಸದ್ಯದ ಸಂಕಷ್ಟದ ಸಮಯದಲ್ಲಿ ಪೂರೈಕೆ ಸರಪಳಿಯು ಹದಗೆಟ್ಟಿದೆ. ಚೀನಾದಲ್ಲಿ ಕೋವಿಡ್‌ನಿಂದಾಗಿ ಪೂರೈಕೆ ಸರಪಳಿ ಮೇಲೆ ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಕಂಪನಿಗಳು ಹೇಳಿವೆ.
ಇದನ್ನೂ ಓದಿ: Viral Video: ಜೀವನದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ನೀವು ಈ ವಿಡಿಯೋ ನೋಡಲೇಬೇಕು!
ಲಾಕ್‌ಡೌನ್‌ನಿಂದ ಈ ಕಂಪನಿಗಳ ಕೆಲಸದ ಮೇಲೆ ಪರಿಣಾಮ
ವರದಿಯ ಪ್ರಕಾರ ಲಾಕ್‌ಡೌನ್‌ನಿಂದಾಗಿ Adidas ಸ್ನೀಕರ್ಸ್ ಮತ್ತು ಬ್ಯಾಂಗ್ ಮತ್ತು ಒಲುಫ್‌ಸೆನ್ ಸ್ಪೀಕರ್‌ಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಟೊಯೋಟಾದಿಂದ ಟೆಸ್ಲಾವರೆಗಿನ ವಾಹನ ತಯಾರಕರು ಭಾರೀ ವೆಚ್ಚದ ನಷ್ಟ ಮತ್ತು ಉತ್ಪಾದನಾ ನಿರ್ಬಂಧಗಳನ್ನು ಎದುರಿಸುತ್ತಿವೆ. ಇದಲ್ಲದೆ ಸೋನಿ ಕಂಪನಿಯು ಪ್ಲೇಸ್ಟೇಷನ್ ಮಾರಾಟ ಮಾಡಲು ಸಾಕಷ್ಟು ಹೆಣಗಾಡುತ್ತಿದೆ.
ಅಮೆರಿಕನ್ ಕಂಪನಿಗಳ ವ್ಯವಹಾರದ ಮೇಲೆ ಪರಿಣಾಮ
ಅಮೆರಿಕದಲ್ಲಿ ಐಷಾರಾಮಿ ಯೋಜನೆಗಳಿಗಾಗಿ ಸ್ನಾನಗೃಹ ಮತ್ತು ಅಡಿಗೆ ಪರಿಕರಗಳ ತಯಾರಕರಾದ ಜೇಕ್ ಫಿಪ್ಸ್ ಕೂಡ ಶಾಂಘೈನಿಂದ ಸರಕುಗಳನ್ನು ಪೂರೈಸುತ್ತಾರೆ. ಲಾಕ್‌ಡೌನ್ ಪರಿಣಾಮ ಸರಕುಗಳ ಅಲಭ್ಯತೆಯಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೀನಾದಲ್ಲಿನ ಕೊರೊನಾ ಹೆಚ್ಚಳವು ಅಮೆರಿಕನ್ ಕಂಪನಿಗಳ ವ್ಯವಹಾರದ ಮೇಲೆ ನೇರ ಪರಿಣಾಮ ಬೀರಿದೆ.
ಇದನ್ನೂ ಓದಿ: Shocking Video : ಹುಲಿಯನ್ನು ಸಾಕು ನಾಯಿಯಂತೆ ಸುತ್ತಾಡಿಸುತ್ತಾಳೆ ಈ ಯುವತಿ, ನೀವೂ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.