Monkeypox: ಕೊರೊನಾ ಪ್ರಕೋಪದ ನಡುವೆ ತಲೆ ಎತ್ತುತ್ತಿದೆ ಈ ಹೊಸ ಕಾಯಿಲೆ, 100ರಲ್ಲಿ 10 ಜನರ ಸಾವಿನ ಅಪಾಯ
Monkeypox In North Wales: UKಯಲ್ಲಿ 2 ಮಂಕಿ ಪಾಕ್ಸ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸೋಂಕು ಹರಡುವುದನ್ನು ತಡೆಯಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸಾರ್ವಜನಿಕ ಆರೋಗ್ಯ ವಿಭಾಗದ ವೇಲ್ಸ್ ನ ಆರೋಗ್ಯ ರಕ್ಷಣಾ ಸಲಹೆಗಾರರು ಹೇಳಿದ್ದಾರೆ.
ಇಂಗ್ಲೆಂಡ್: Monkeypox In North Wales - ಮಾರಣಾಂತಿಕ ಕೊರೊನಾವೈರಸ್ ಸೋಂಕಿನ ವಿರುದ್ಧ ನಡೆಯುತ್ತಿರುವ ಹೋರಾಟದ ನಡುವೆಯೇ, ಯುಕೆಯ ನಾರ್ತ್ ವೇಲ್ಸ್ನಲ್ಲಿ 2 ಮಂಕಿಪಾಕ್ಸ್ (Monkeypox) ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿಯಾಗಿದೆ. ನಾರ್ತ್ ವೇಲ್ಸ್‌ನ (North Wales) ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ. ಒಂದೇ ಕುಟುಂಬದ 2 ಸದಸ್ಯರಲ್ಲಿ ಈ ರೋಗವು ಕಂಡುಬಂದಿದೆ ಬಂದಿದೆ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದಾಗಿ, ಎರಡೂ ರೋಗಿಗಳಿಗೆ ದೇಹದಲ್ಲಿ ದದ್ದು, ತುರಿಕೆ, ಜ್ವರ ಮತ್ತು ನೋವಿನ ಸಮಸ್ಯೆ (Monkey Pox Symptoms) ಎದುರಾಗಿದೆ.
ಇದನ್ನೂ ಓದಿ-Corona Pandemic ಕುರಿತು ಚೀನಾಗೆ ಮೊದಲೇ ಗೊತ್ತಿತ್ತು! ಭಾರತೀಯ ವೈರಾಲಾಜಿಸ್ಟ್ ಗಂಭೀರ ಹೇಳಿಕೆ ಇದು
ಸಾರ್ವಜನಿಕರಿಗೆ ಇದರಿಂದ ಅಪಾಯ ತೀರಾ ಕಮ್ಮಿ
ಈ ಇಬ್ಬರೂ ರೋಗಿಗಳ ಮೇಲೆ ವೇಲ್ಸ್ ಮತ್ತು ಇಂಗ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಇಲಾಖೆಯ (UK Public Health Agencies) ಅಧಿಕಾರಿಗಳು ತೀವ್ರ ನಿಗಾವಹಿಸಿದ್ದಾರೆ. . ಏತನ್ಮಧ್ಯೆ, ಸಾರ್ವಜನಿಕ ಆರೋಗ್ಯ ವೇಲ್ಸ್‌ನ ಆರೋಗ್ಯ ಸುರಕ್ಷತಾ ಸಲಹೆಗಾರ ರಿಚರ್ಡ್ ಫಿರ್ತ್, 'ಯುಕೆ ನಲ್ಲಿ 2 ಮಂಕಿಪಾಕ್ಸ್ ಪ್ರಕರಣಗಳು (Monkeypox Cases In UK) ದೃಢಪಟ್ಟಿರುವುದು ಅಪರೂಪದ ಘಟನೆಯಾಗಿದೆ. ಸಾರ್ವಜನಿಕರಿಗೆ ಇದರಿಂದ ಅಪಾಯವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಅವರು ಹೇಳಿದ್ದಾರೆ. ಹಲವಾರು ಪ್ರೋಟೋಕಾಲ್ಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ ಜನರನ್ನು ನಾವು ಗುರುತಿಸಿದ್ದೇವೆ, ಹಲವಾರು ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಸೋಂಕು ಇತರ ಜನರಿಗೆ ಹರಡದಂತೆ ನಾವು ಎಲ್ಲಾ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Viral News:ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ, ಈ ದಾಖಲೆ ನಿರ್ಮಾಣಗೊಂಡಿದ್ದು ಎಲ್ಲಿ ಗೊತ್ತಾ?
ಏನಿದು ಮಂಕಿಪಾಕ್ಸ್ (What Is Monkeypox?)
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಇದರ ಲಕ್ಷಣಗಳು(Symptoms) ಸಿಡುಬು ರೋಗಕ್ಕೆ(Smallpox)ಹೋಲುತ್ತವೆ. ಆದರೆ ಅದಕ್ಕಿಂತ ಕಡಿಮೆ ಅಪಾಯಕಾರಿಯಾಗಿದೆ. ಜ್ವರ, ಶರೀರದಲ್ಲಿ ದದ್ದು ಕಾಣಿಸಿಕೊಳ್ಳುವುದು ಇವು ಈ ರೋಗದ ಸಾಮಾನ್ಯ ಲಕ್ಷಣಗಳು. ಈ ರೋಗವು ಇಲಿಗಳು ಮತ್ತು ಕೋತಿಗಳಂತಹ ಕಾಡು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇದಲ್ಲದೆ, ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ 100 ರೋಗಿಗಳಲ್ಲಿ 10 ಮಂದಿ ಸಾಯುವ (Monkeypox Death Rate) ಅಪಾಯ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.