Corona Pandemic ಕುರಿತು ಚೀನಾಗೆ ಮೊದಲೇ ಗೊತ್ತಿತ್ತು! ಭಾರತೀಯ ವೈರಾಲಾಜಿಸ್ಟ್ ಗಂಭೀರ ಹೇಳಿಕೆ ಇದು

Was China Ready With Vaccine Before Corona Pandemic? - ಕೊರೊನಾ ವೈರಸ್ (Coronavirus) ಎಲ್ಲಿಂದ ಮತ್ತು ಹೇಗೆ ಹರಡಿತು ಎಂಬುದರ ಕುರಿತು ವಿಶ್ವಾದ್ಯಂತದ ದೇಶಗಳಲ್ಲಿ ಶಂಕೆ ಆಳವಾಗತೊಡಗಿದೆ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ (Wuhan) ಕೊರೊನಾ ಉತ್ಪತ್ತಿಯಾಗಿದೆ (Covid-19)ಎಂಬ ವಾದಕ್ಕೆ ಇದೀಗ ಬಲ ಸಿಗಲಾರಂಭಿಸಿದೆ.

Written by - Nitin Tabib | Last Updated : Jun 9, 2021, 04:23 PM IST
  • ಬಲಗೊಂಡ ಕೊರೊನಾ ವೈರಸ್ ಚೈನಾ ಲ್ಯಾಬ್ ಉತ್ಪತ್ತಿಯ ವಾದ.
  • ಕೊರೊನಾ ಮಹಾಮಾರಿಗೂ ಮುನ್ನವೆ ಚೀನಾ ಬಳಿ ಲಸಿಕೆ ಇತ್ತೇ?
  • ಭಾರತೀಯ ಪ್ರಸಿದ್ಧ ವೈರಾಲಾಜಿಸ್ಟ್ ವ್ಯಕ್ತಪಡಿಸಿರುವ ಶಂಕೆ ಏನು?
Corona Pandemic ಕುರಿತು ಚೀನಾಗೆ ಮೊದಲೇ ಗೊತ್ತಿತ್ತು! ಭಾರತೀಯ ವೈರಾಲಾಜಿಸ್ಟ್ ಗಂಭೀರ ಹೇಳಿಕೆ ಇದು title=
Was China Ready With Vaccine Before Corona Pandemic? (File Photo)

ನವದೆಹಲಿ: Was China Ready With Vaccine Before Corona Pandemic? - ಕೊರೊನಾ ವೈರಸ್ (Coronavirus) ಎಲ್ಲಿಂದ ಮತ್ತು ಹೇಗೆ ಹರಡಿತು ಎಂಬುದರ ಕುರಿತು ವಿಶ್ವಾದ್ಯಂತದ ದೇಶಗಳಲ್ಲಿ ಶಂಕೆ ಆಳವಾಗತೊಡಗಿದೆ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ (Wuhan) ಕೊರೊನಾ ಉತ್ಪತ್ತಿಯಾಗಿದೆ (Covid-19)ಎಂಬ ವಾದಕ್ಕೆ ಇದೀಗ ಬಲ ಸಿಗಲಾರಂಭಿಸಿದೆ. ಆದರೆ, ಇದೇ ಅವಧಿಯಲ್ಲಿ ಮತ್ತೊಂದು ಪ್ರಶ್ನೆ ತಲೆ ಎತ್ತತೊಡಗಿದೆ. ಅದೇನೆಂದರೆ, ಒಂದು ವೇಳೆ ಚೀನಾದಿಂದ ಕೊರೊನಾ ವೈರಸ್ ಹೊರಹೊಮ್ಮಿದೆ ಎಂಬುದೇ ನಿಜವಾದರೆ, ಇಷ್ಟೊಂದು ಕಡಿಮೆ ಅವಧಿಯಲ್ಲಿ ಚೀನಾ ವೈರಸ್ (China Virus) ಮೇಲೆ ನಿಯಂತ್ರಣ ಹೇಗೆ ಸಾಧಿಸಿತು? ವೈರಸ್ ಬರುವ ಮುನ್ನವೇ ಚೀನಾ ವ್ಯಾಕ್ಸಿನ್ ಅಭಿವೃದ್ಧಿಗೊಳಿಸಿದೆಯೇ?. ವಿಶ್ವದ ಟಾಪ್ ವೈರಾಲಾಜಿಸ್ಟ್ ಗಳ ಅನಿಸಿಕೆ ಕೂಡ ಇದೆ ಆಗಿದೆ. ಚೀನಾ (China) ಜಗತ್ತಿನಿಂದ ಈ ಅಂಶವನ್ನು ಬಚ್ಚಿಡುತ್ತಿದ್ದು, ಮಹಾಮಾರಿಗೂ ಮುನ್ನವೇ ವ್ಯಾಕ್ಸಿನ್ ಅಭಿವೃದ್ಧಿಗೊಳಿಸಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಚೀನಾ ವೈರಸ್ ನಿಂದ ವಿಶ್ವಾದ್ಯಂತ ಸುಮಾರು 37 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸುಮಾರು 18 ಕೋಟಿಗೂ ಅಧಿಕ ಜನ ಸೋಂಕಿತರಾಗಿದ್ದಾರೆ.

ಆಂಗ್ಲ ಮಾಧ್ಯಮದ ವೃತ್ತಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಪ್ರಸಿದ್ಧ ಭಾರತೀಯ ವೈರಾಲಾಜಿಸ್ಟ್ ಒಬ್ಬರು ಕೊರೊನಾ ವೈರಸ್ (Coronavirus) ಹರಡುವಿಕೆ ಅಥವಾ ಸೋರಿಕೆಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮೊದಲೇ ವ್ಯಾಕ್ಸಿನ್ ಅಭಿವೃದ್ಧಿಗೊಳಿಸಿರುವ ಸಾಧ್ಯತೆಯನ್ನು ವರ್ತಿಸಿದ್ದಾರೆ. ವಿಶ್ವಾದ್ಯಂತ ಹಲವು ವರದಿಗಳು ಈ ವೈರಸ್ (Virus) ಅನ್ನು ಒಂದು ಲ್ಯಾಬ್ ನಲ್ಲಿ  ಅಭಿವೃದ್ಧಿಗೊಳಿಸಲಾಗಿದೆ ಎಂದಿವೆ. ಆರಂಭಿಕ ದಿನಗಳಿಂದಲೇ ಈ ವೈರಸ್ ಗಾಗಿ ಚೀನಾದಲ್ಲಿ ವ್ಯಾಕ್ಸಿನ್ ಇದ್ದ ಕಾರಣ ಚೀನಾಗೆ ಅದರ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು ಎಂಬ ಶಂಕೆ ವ್ಯಕ್ತವಾಗುತ್ತಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಅಂದರೆ 140ಕೋಟಿ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಡಿಸೆಂಬರ್ 2019 ರಲ್ಲಿ ಕೇವಲ 91,300 ಸೋಂಕಿನ ಪ್ರಕರಣಗಳು ದಾಖಲಾಗಿದ್ದವು ಹಾಗೂ 4636 ಜನರು ಮೃತಪಟ್ಟಿದ್ದರು. ಪ್ರಸ್ತುತ ಕೊರೊನಾ ವೈರಸ್ ನ ದಾಖಲಾಗಿರುವ ಪ್ರಕರಣಗಳಲ್ಲಿ ಚೀನಾ 98ನೇ ಸ್ಥಾನದಲ್ಲಿದೆ.

ಜಾನ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ವೆಲ್ಲೋರ್ (John Christian Medical College, Vellore)ನ ಕ್ಲಿನಿಕಲ್ ವೈರಾಲಾಜಿ ವಿಭಾಗದಲ್ಲಿ (Clinica Virology Department) ಪ್ರಮುಖ ವೈರಾಲಾಜಿಸ್ಟ್ (Chief Virologist) ಆಗಿ ಕಾರ್ಯನಿರ್ವಹಿಸುತ್ತಿರುವ ಟಿ. ಜೇಕಬ್ ಹೇಳುವ ಪ್ರಕಾರ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಲಾಜಿ (Wuhan Institute Of Virology)ಯಿಂದ ವೈರಸ್ ಸೋರಿಕೆಯ ಶಂಕೆ ಇದೀಗ ರಹಸ್ಯವಾಗಿದೆ ಎಂದಿದ್ದಾರೆ. ಚೀನಾದ ಕೊರೊನಾ ಮಹಾಮಾರಿ ವಿಶ್ವದ ಮಹಾಮಾರಿಗಿಂತ ಭಿನ್ನವಾಗಿತ್ತು. ಇದರರ್ಥ ಚೀನಾ ಸಂಗತಿಗಳನ್ನು ಬಚ್ಚಿಡುತ್ತಿದೆ ಎಂದರ್ಥ. ಚೀನಾ ಮಹಾಮಾರಿ ಭಿನ್ನವಾಗಿತ್ತು ಅಥವಾ ಚೀನಾ ಈ ಮಹಾಮಾರಿಗೆ ಮೊದಲಿನಿಂದಲೇ ಸಿದ್ಧತೆ ಮಾಡಿಕೊಂಡಿತ್ತು. ಕಣ್ಣಿಗೆ ಕಾಣಿಸುತ್ತಿರುವುದು ಮಾತ್ರವಷ್ಟೇ ನಿಜವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ-Viral News:ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ, ಈ ದಾಖಲೆ ನಿರ್ಮಾಣಗೊಂಡಿದ್ದು ಎಲ್ಲಿ?

ಯುವ ಚೀನಾ ವಿಜ್ಯಾನಿಯೋಬ್ಬರಿಂದ  ಫೆಬ್ರುವರಿ 24, 2020ರಲ್ಲಿ ಕೊರೊನಾ ವ್ಯಾಕ್ಸಿನ್ (Corona Vaccine License) ನ ಲೈಸನ್ಸ್ ಗಾಗಿ ಸಲ್ಲಿಸಿದ್ದ ಅರ್ಜಿಯ ಕುರಿತು ಅವರು ಉಲ್ಲೇಖಿಸಿದ್ದಾರೆ. ಕೊರೊನಾ(Covid-19) ವಿಸ್ಫೋಟದ ಕೇವಲ ಎರಡು ತಿಂಗಳುಗಳ ಒಳಗೆ ವ್ಯಾಕ್ಸಿನ್ ಮೇಲೆ ಕೆಲಸ ಆರಂಭವಾಗುವ ನಿರ್ಣಯ ತರಾತುರಿ ಎಂಬಂತೆ ತೋರುತ್ತಿದೆ. ವ್ಯಾಕ್ಸಿನ್ ಅಭಿವೃದ್ಧಿಯ ಕೆಲಸ ಚೀನಾದಲ್ಲಿ ಒಂದು ವರ್ಷ ಮೊದಲೇ ಆರಂಭಗೊಂಡಿದೆ ಎಂಬಂತೆ ಗೋಚರಿಸುತ್ತಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Good News: Coronavirus Third Wave ಮಕ್ಕಳಿಗೆ ಅಪಾಯಕಾರಿ ಎಂಬ ಸಂಗತಿ ತಪ್ಪು: AIIMS

ಇಂದು ಆ ಯುವ ವಿಜ್ಞಾನಿ ಮೃತಪಟ್ಟಿದ್ದಾರೆ.  ಇದರಲ್ಲಿ ಇನ್ನೂ ಹಲವು ರಹಸ್ಯಗಳು ಅಡಗಿವೆ. ಓರ್ವ ಅಪರಾಧಿಯ ಹಾಗೆ ಚೀನಾ ಬಹಳಷ್ಟು ಸಂಗತಿಗಳನ್ನು ಬಚ್ಚಿಡಲು ಪ್ರಯತ್ನಿಸುತ್ತಿದೆ ಎಂಬಂತೆ ತೋರುತ್ತಿದೆ. ಈ ಸಾಕ್ಷಾಧಾರ ವೈರಸ್ ಲ್ಯಾಬ್ (Wuhan Lab) ನಲ್ಲಿಯೇ ಉತ್ಪತ್ತಿಯಾಗಿದೆ ಎಂಬುದರ ಸಂಕೇತ ನೀಡುತ್ತಿದೆ. ಕೊರೊನಾ ವೈರಸ್ ನ ಉತ್ಪತ್ತಿಯ ಕುರಿತಾದ ತನಿಖೆಯಿಂದ ಚೀನಾ ನಾಲ್ಕು ದಿಕ್ಕುಗಳಿಂದ ಸುತ್ತುವರೆಯಲ್ಪಡುತ್ತಿದೆ. ಇಂದು ಕೇವಲ ಜರ್ನಲ್ (Journals) ಅಥವಾ ಅಧ್ಯಯನಗಳು (Studies) ಮಾತ್ರವಲದೆ ಅಮೇರಿಕಾ (America), ಭಾರತ (India) ಹಾಗೂ ಬ್ರಿಟನ್ (Britain) ದೇಶಗಳು ಕೂಡ ಈ ಕುರಿತು ನಿಸ್ಪಕ್ಷ ತನಿಖೆಯ ಒತ್ತಡ ಹೆಚ್ಚಿಸಲಾರಂಭಿಸಿವೆ ಎಂಬ ಸಂಗತಿ ಮಾತ್ರ ನಿಜ.

ಇದನ್ನೂ ಓದಿ-ಕೇಂದ್ರ ಸರ್ಕಾರದಿಂದ 44 ಕೋಟಿ ಲಸಿಕೆಗಳಿಗೆ ಆರ್ಡರ್, ಶೇ.30 ರಷ್ಟು ಅಡ್ವಾನ್ಸ್ ಕೂಡ ಪಾವತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News