ಅಫ್ಘಾನಿಸ್ತಾನ್ ನಲ್ಲಿ ಭೂಕಂಪ, 1000 ಕ್ಕೂ ಅಧಿಕ ಸಾವು, 1500 ಜನರಿಗೆ ಗಾಯ
ಅಫ್ಘಾನಿಸ್ತಾನದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪದ ನಂತರ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ನವದೆಹಲಿ: ಅಫ್ಘಾನಿಸ್ತಾನದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪದ ನಂತರ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ದೇಶದ ಆಗ್ನೇಯ ಭಾಗದಲ್ಲಿರುವ ಖೋಸ್ಟ್ ನಗರದ ಬಳಿ ಇಂದು ಮುಂಜಾನೆ ತೀವ್ರ ಭೂಕಂಪ ಸಂಭವಿಸಿದ್ದು, ಖೋಸ್ಟ್ ಪ್ರಾಂತ್ಯದ ಸ್ಪೆರಾ ಜಿಲ್ಲೆ ಮತ್ತು ಪಕ್ಟಿಕಾ ಪ್ರಾಂತ್ಯದ ಬರ್ಮಲಾ, ಜಿರುಕ್, ನಾಕಾ ಮತ್ತು ಗಯಾನ್ ಜಿಲ್ಲೆಗಗಳಲ್ಲಿ ಅತಿ ಹೆಚ್ಚು ಹಾನಿಗೊಳಗಾಗಿವೆ ಎನ್ನಲಾಗಿವೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪಕ್ಟಿಕಾ ಪ್ರಾಂತ್ಯದ ಸಂಸ್ಕೃತಿ ಮತ್ತು ಮಾಹಿತಿ ವಿಭಾಗದ ಮುಖ್ಯಸ್ಥ ಅಮೀನ್ ಹುಝೈಫಾ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1,500 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ.ಇದೆ ವೇಳೆ ಅನೇಕ ಹಳ್ಳಿಗಳಲ್ಲಿ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Maharashtra Political Crisis: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯ ಹಿಂಟ್ ಕೊಟ್ಟ ರಾವತ್
ಕಳೆದ ರಾತ್ರಿ 1:30 ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎನ್ನಲಾಗಿದ್ದು, ಸಾವನ್ನಪ್ಪಿದವರಲ್ಲಿ ಬಹುತೇಕರು ಗಿಯಾನ್ ಜಿಲ್ಲೆಯವರು ಎಂದು ಎನ್ನಲಾಗಿದೆ.ಈಗ ಭೂಕಂಪ ಸಂಭವಿಸಿದ ನಂತರ ರಕ್ಷಣಾ ಕಾರ್ಯಕ್ಕಾಗಿ ಹೆಲಿಕಾಪ್ಟರ್ ಮತ್ತು ರಕ್ಷಣಾ ತಂಡಗಳು ಪ್ರದೇಶಕ್ಕೆ ಆಗಮಿಸಿವೆ.ಇದೇ ವೇಳೆ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಮಾತನಾಡಿ, ಭೂಕಂಪದಿಂದ ಹಾನಿಗೊಳಗಾದ ಜನರಿಗೆ ನೆರವು ನೀಡುವ ಕುರಿತು ಚರ್ಚಿಸಲು ಇಂದು ತುರ್ತು ಕ್ಯಾಬಿನೆಟ್ ಸಭೆ ನಡೆಸಲಾಯಿತು ಎಂದು ಅವರು ತಿಳಿಸಿದರು.
ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಭೂಕಂಪದ ಕೇಂದ್ರವು ಖೋಸ್ಟ್ ನಗರದಿಂದ 44 ಕಿಮೀ ದೂರದಲ್ಲಿದೆ ಮತ್ತು ರಿಕ್ಟರ್ ಮಾಪಕದಲ್ಲಿ 6.1 ರಷ್ಟಿದೆ ಎಂದು ಹೇಳಿದೆ.ಈಗ ಅಧಿಕಾರಿಗಳ ನೇತೃತ್ವದಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ವರದಿಗಳು ತಿಳಿಸಿವೆ.
ಎರಡು ದಶಕಗಳ ಯುದ್ಧದ ನಂತರ ಯುಎಸ್ ನೇತೃತ್ವದ ಅಂತರಾಷ್ಟ್ರೀಯ ಪಡೆಗಳು ಹಿಂತೆಗೆದುಕೊಂಡ ಕಾರಣ, ತಾಲಿಬಾನ್ ವಹಿಸಿಕೊಂಡ ನಂತರ ಅಫ್ಘಾನಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಟವನ್ನು ಮುಂದುವರೆಸುತ್ತಿರುವಾಗ ಈ ದುರಂತವು ಸಂಭವಿಸಿದೆ.ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡುವಂತೆ ಅಫ್ಘಾನಿಸ್ತಾನವು ಮಾನವೀಯ ಏಜೆನ್ಸಿಗಳಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈಗ ಭೂಕಂಪ ಪೀಡಿತ ಪ್ರದೇಶಕ್ಕೆ ತಂಡಗಳನ್ನು ಕಳುಹಿಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: BCCI : ಕೊಹ್ಲಿಗೆ ಕೋವಿಡ್ ಪಾಸಿಟಿವ್ : ಬಿಸಿಸಿಐಯಿಂದ ಎಚ್ಚರಿಕೆ ಕರೆ!
ಅಫ್ಘಾನಿಸ್ತಾನದ ಸೆಕ್ರೆಟರಿ ಜನರಲ್‌ನ ಡೆಪ್ಯುಟಿ ಸ್ಪೆಷಲ್ ರೆಪ್ರೆಸೆಂಟೇಟಿವ್ ಡಾ ರಮಿಜ್ ಅಲಕ್‌ಬರೋವ್, ಕಳೆದ ರಾತ್ರಿ ಭೂಕಂಪದ ನಂತರ ಯುಎನ್ ಅಗತ್ಯಗಳನ್ನು ನಿರ್ಣಯಿಸಿ ಅದರ ಆಧಾರದ ಮೇಲೆ ಪ್ರತಿಕ್ರಿಯಿಸುತ್ತಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.