ಇಸ್ಲಾಮಾಬಾದ್: Zakiur Rehman Lakhvi Sentenced - ಮುಂಬೈ ಉಗ್ರದಾಳಿಯ ಪ್ರಮುಖ ರೂವಾರಿಯಾಗಿರುವ ಹಾಗೂ ಲಕ್ಷರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಝಾಕೀವುರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನದ ನ್ಯಾಯಾಲಯ 15 ವರ್ಷ ಜೈಲುಶಿಕ್ಷೆ ವಿಧಿಸಿದೆ. ಟೆರರ್ ಫಂಡಿಂಗ್ ಪ್ರಕರಣದಲ್ಲಿ ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ.


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಒದಗಿಸಿದ ಆರೋಪದ ಮೇಲೆ ಝಾಕೀವುರ್  ರೆಹಮಾನ್ ಲಖ್ವಿಯನ್ನು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬಂಧಿಸಿತ್ತು. ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿದ್ದಕ್ಕಾಗಿ ಉಗ್ರ ಲಖ್ವಿ(Zakirur Rehman Lakhvi) ತಪ್ಪಿತಸ್ಥನೆಂದು ಸಾಬೀತಾಗಿದೆ. ವರದಿಗಳ ಪ್ರಕಾರ, ಝಾಕಿವುರ್  ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಯಾವುದೇ ಅವಕಾಶವನ್ನು ಬಿರುತ್ತಿರಲಿಲ್ಲ ಮತ್ತು ಭಯೋತ್ಪಾದಕರಿಗೆ ನಿರಂತರವಾಗಿ ಆರ್ಥಿಕ ಸಹಾಯಒದಗಿಸುತ್ತಿದ್ದ ಎನ್ನಲಾಗಿದೆ.


ಇದನ್ನು ಓದಿ- 26/11 ಉಗ್ರ ದಾಳಿಯ ಕುರಿತು ಸ್ಫೋಟಕ ಮಾಹಿತಿ ಬಹಿರಂಗ


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೇಳಿಕೆ ನೀಡಿದ್ದ ಸಿಟಿಡಿ, ನಿಷೇಧಿತ ಲಷ್ಕರ್-ಎ-ತೊಯ್ಬಾ ಜೊತೆ ಸಂಬಂಧ ಹೊಂದಿದ್ದರಲ್ಲದೆ, ವಿಶ್ವಸಂಸ್ಥೆ ಘೋಷಿಸಿದ ಭಯೋತ್ಪಾದಕರ ಪಟ್ಟಿಯಲ್ಲಿಯೂ ಸಹ ಲಖ್ವಿ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಿತ್ತು ಹಾಗೂ ಲಾಹೋರ್ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಆತನ ವಿರುದ್ಧ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿತ್ತು.


ಪಾಕಿಸ್ತಾನದಲ್ಲಿ ಆಸ್ಪತ್ರೆಯೊಂದನ್ನು ತೆರೆದು ತಮ್ನೂಲಕ ಬಂದ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುತ್ತಿದ್ದ ಆರೋಪ ಲಖ್ವಿ ಎದುರಿಸುತ್ತಿದ್ದಾನೆ. ಆತ ಮತ್ತು ಆತನ ಸಹಚರರು ಈ ಆಸ್ಪತ್ರೆಯ ಮೂಲಕ ಹಣವನ್ನು ಸಂಗ್ರಹಿಸಿ ಉಗ್ರರಿಗೆ ಆರ್ಥಿಕ ನೆರವು ಒದಗಿಸುತ್ತಿದ್ದರು. ತನ್ನ ಖಾಸಗಿ ವೆಚ್ಚಕ್ಕೂ ಕೂಡ ಆತ ಈ ಹಣವನ್ನು ಬಳಸುತ್ತಿದ್ದ ಎಂದು ಆರೋಪಿಸಲಾಗಿದೆ.


ಇದನ್ನು ಓದಿ- Mumbai Attack ಮಾಸ್ಟರ್ ಮೈಂಡ್ ಝಾಕೀವುರ್ ರಹಮಾನ್ ಲಖವಿ ಬಂಧನ


ಜಮಾತ್-ಉದ್-ದಾವಾ ಸಂಘಟನೆಯ ಪ್ರಮುಖ ಹಾಫೀಜ್ ಸಯೀದ್ ನೇತೃತ್ವದಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರರು 2008 ರಲ್ಲಿ ಮುಂಬೈನಲ್ಲಿ ಉಗ್ರದಾಳಿ ನಡೆಸಿದ್ದರು. ಈ ದಾಳಿಯಲ್ಲಿ 6 ಅಮೆರಿಕಾದ ನಾಗರಿಕರು ಸೇರಿದಂತೆ 166 ಜನರು ಮೃತಪಟ್ಟಿದ್ದರು. 


ಅಲ್ ಕೈದಾ ಸಂಘಟನೆಯ ಜೊತೆಗೆ ನಿಕಟ ಸಂಪರ್ಕ ಹೊಂದಿರುವುದರ ಜೊತೆಗೆ ಉಗ್ರರಿಗೆ ಆರ್ಥಿಕ ನೆರವು ನೀಡುವುದು, ಯೋಜನೆ ರೂಪಿಸುವುದು, ಸಹಾಯ ಒದಗಿಸುವುದು, ಷಡ್ಯಂತ್ರ ರೂಪಿಸಿದ್ದಕ್ಕಾಗಿ ಲಖ್ವಿಯನ್ನು ಸಂಯುಕ್ತ ರಾಷ್ಟ್ರ ಡಿಸೆಂಬರ್ 2008ರಲ್ಲಿ ಜಾಗತಿಕ ಉಗ್ರ ಎಂದು ಘೋಷಿಸಿತ್ತು.


ಇದನ್ನು ಓದಿ- 26/11 ಮುಂಬೈ ದಾಳಿಯಲ್ಲಿ ಲಕ್ಷ್ಕರ್ ಉಗ್ರರು ಶಾಮೀಲಾಗಿದ್ದರು, ಸತ್ಯವನ್ನೋಪ್ಪಿಕೊಂಡ ಪಾಕಿಸ್ತಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.