ಇಸ್ಲಾಮಾಬಾದ್: ಮುಂಬೈ 26/11ದಾಳಿಯ ಪ್ರಮುಖ ರೂವಾರಿ ಹಾಗೂ ಲಷ್ಕರ್-ಎ-ತೊಯ್ಬಾ ಸಂಘಟನೆಯ ಮುಖ್ಯಸ್ಥ ಝಾಕೀವುರ್ ರಹಮಾನ್ ಲಖವಿಯನ್ನು ಪಾಕಿಸ್ತಾನದಲ್ಲಿ ಬಂಧನಕ್ಕೋಳಪಡಿಸಲಾಗಿದೆ. ಪಾಕ್ ಮಾಧ್ಯಮಗಳು ಪ್ರಕಟಿಸಿರುವ ವರದಿಗಳ ಪ್ರಕಾರ ಉಗ್ರರಿಗೆ ಆರ್ಥಿಕ ನೆರವು ಒದಗಿಸುತ್ತಿದ್ದ ಎಂಬ ಕಾರಣಕ್ಕೆ ಝಾಕೀವುರ್ ರಹಮಾನ್ ನನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಹಾಫೀಸ್ ಸಯೀದ್ ಜೊತೆ ಸೇರಿ ಝಾಕೀವುರ್ ರಹಮಾನ್ 26/11 ಮುಂಬೈ ದಾಳಿಯ ಸಂಚು ರೂಪಿಸಿದ್ದ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನು ಓದಿ- 26/11 ಮುಂಬೈ ದಾಳಿಯಲ್ಲಿ ಲಕ್ಷ್ಕರ್ ಉಗ್ರರು ಶಾಮೀಲಾಗಿದ್ದರು, ಸತ್ಯವನ್ನೋಪ್ಪಿಕೊಂಡ ಪಾಕಿಸ್ತಾನ
26 ನವೆಂಬರ್ 2008 ರಂದು, 10 ಲಷ್ಕರ್-ಎ-ತೊಯ್ಬಾ ಸಂಘಟನೆಯ ಭಯೋತ್ಪಾದಕರು ಮುಂಬೈನಲ್ಲಿ(Mumbai Terror Attack) ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿ ನಡೆಸಿದ್ದರು. ಈ ಭಯೋತ್ಪಾದಕ ದಾಳಿ ನಡೆದು 12 ವರ್ಷ ಗತಿಸಿವೆ, ಆದರೂ ಕೂಡ ಇದು ಭಾರತದ ಇತಿಹಾಸದಲ್ಲಿ ಯಾರೂ ಮರೆಯಲಾಗದ ಕರಾಳ ದಿನವಾಗಿದೆ. ದಾಳಿಯಲ್ಲಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಹಾಗೂ 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಬೈ ದಾಳಿ ನೆನೆಸಿಕೊಂಡರೆ ಇದಿಗೂ ಕೂಡ ಜನರ ಎದೆ ಝೆಲ್ಲೆನ್ನುತ್ತದೆ.
ಇದನ್ನು ಓದಿ- 26/11 ಉಗ್ರ ದಾಳಿಯ ಕುರಿತು ಸ್ಫೋಟಕ ಮಾಹಿತಿ ಬಹಿರಂಗ
ಈ ಉಗ್ರದಾಳಿಯ ಕುರಿತು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದ ಮುಂಬೈ ಮಾಜಿ ಪೋಲೀಸ್ ಕಮೀಷ್ಣರ್ರಕೆಶ್ ಮಾರಿಯಾ, '2008 ರಲ್ಲಿ ನಡೆದ ಉಗ್ರದಾಳಿಯನ್ನು ಲಷ್ಕರ್ ಹಿಂದೂ ಉಗ್ರವಾದ ಎನ್ನುವಂತೆ ಬಿಂಬಿಸಲು ಸಂಚು ರೂಪಿಸಿತ್ತು. ಅಷ್ಟೇ ಅಲ್ಲ ಉಗ್ರ ಕಸಬ್ ನನ್ನು ಬೆಂಗಳೂರು ಮೂಲದ ಸಮೀರ ಚೌಧರಿ ಎಂದು ಬಿಂಬಿಸಿ ಆತನ ಹತ್ಯೆ ನಡೆಸಲು ಬಯಸಿತ್ತು' ಎಂದು ಹೇಳಿದ್ದರು.
ಇದನ್ನು ಓದಿ- ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯಷ್ಟು ಮನಮೋಹನ್ ಸಿಂಗ್ ಪ್ರಬಲರಾಗಿರಲಿಲ್ಲ: ಶೀಲಾ ದೀಕ್ಷಿತ್
ತಮ್ಮ ಪುಸ್ತಕ 'ಲೇಟ್ ಮೀ ಸೇ ಇಟ್ ನೌ' ಪುಸ್ತಕದಲ್ಲಿ ಮುಂಬೈ ದಾಳಿ ಸೇರಿದಂತೆ ಇನ್ನೂ ಹಲವು ಪ್ರಕರಣಗಳ ಕುರಿತು ಗಂಭೀರ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ. ಅವರು ಪುಸ್ತಕದಲ್ಲಿ ಉಲ್ಲೇಖಿಸಿರುವ ಪ್ರಕಾರ, ISI ಹಾಗೂ ಲಷ್ಕರ್ ಉಗ್ರರು ಕಸಬ್ ನನ್ನು ಜೈಲಿನಲ್ಲೆಯೇ ಹತ್ಯೆಗೈಯಲು ಬಯಸಿದ್ದರು ಎನ್ನಲಾಗಿದೆ. ಈ ಜವಾಬ್ದಾರಿಯನ್ನು ಅವರು ದಾವುದ್ ಗ್ಯಾಂಗ್ ಗೆ ವಹಿಸಿದ್ದರು. ಲಷ್ಕರ್ ಮುಂಬೈ ದಾಳಿಯ ಕುರಿತು ಬರೆದಿದ್ದ ಮಾರಿಯಾ , ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಸಬ್ ಚೌಧರಿ ರೂಪದಲ್ಲಿ ಹತ್ಯೆಯಾಗುತ್ತಿದ್ದ ಹಾಗೂ ದಾಳಿಯ ಹಿಂದೆ ಹಿಂದೂ ಉಗ್ರವಾದ ಸಾಬೀತಾಗುತ್ತಿತ್ತು" ಎಂದಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.