ನವದೆಹಲಿ : ಉತ್ತರ ಕೊರಿಯಾದಲ್ಲಿ ಕೊರೊನಾವೈರಸ್‌ನ ಮೊದಲ ಪ್ರಕರಣ ಬೆಳಕಿಗೆ ಬಂದ ನಂತರ, ಈಗ ನಿಗೂಢ 'ಜ್ವರ' ದಿಂದ ಸಂಭವಿಸುತ್ತಿರುವ ಸಾವಿನಿಂದ ದೇಶದಲ್ಲಿ ಆತಂಕ ಮನೆ ಮಾಡಿದೆ.  ಪಯೋಂಗ್ಯಾಂಗ್ ಸೇರಿದಂತೆ ಇಡೀ ದೇಶದಲ್ಲಿ ಕರೋನಾ ಭೀತಿ ಎದುರಾಗಿದೆ. ಈ ಮಧ್ಯೆ, 'ಜ್ವರ'ದಿಂದ ಆರು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ತಮ್ಮ ದೇಶದಲ್ಲಿ ಜನರ ಸಾವು ಸಂಭವಿಸುತ್ತಿರುವುದಕ್ಕೆ ಯಾವ ಜ್ವರ ಕಾರಣ ಎನ್ನುವುದನ್ನು ಕಿಮ್ ಜೊಂಗ್-ಉನ್ ಅವರ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. 


COMMERCIAL BREAK
SCROLL TO CONTINUE READING

ಐಸೊಲೆಶನ್ ನಲ್ಲಿ ಸುಮಾರು ಎರಡು ಲಕ್ಷ :   
 ಉತ್ತರ ಕೊರಿಯಾದ ಸರ್ಕಾರದ ಪ್ರಕಾರ, ದೇಶಾದ್ಯಂತ ಸುಮಾರು 1,87,000 ಜನರನ್ನು ಐಸೊಲೆಶನ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕರೋನಾ ಪ್ರಾರಂಭವಾದ ಸುಮಾರು ಎರಡು ವರ್ಷಗಳ ನಂತರ, ಕರೋನಾ ಸೋಂಕಿನ ಮೊದಲ ಪ್ರಕರಣ ಉತ್ತರ ಕೊರಿಯಾದಲ್ಲಿ ಕಂಡು ಬಂದಿತ್ತು.  ಮೊದಲ ಮತ್ತು ಹೊಸ ಪ್ರಕರಣದ ದೃಢೀಕರಣದ ನಂತರ, ಕಿಮ್ ಜೊಂಗ್ ಉನ್ ದೇಶದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲಾಗಿತ್ತು. 


ಇದನ್ನೂ ಓದಿ :   China plane crash Video : ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್ ವಿಮಾನ ‌- 40 ಜನರಿಗೆ ಗಾಯ


ಚೀನಾವು ಉತ್ತರ ಕೊರಿಯಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ .  ಮತ್ತು ಚೀನಾದಲ್ಲಿ ಕಳೆದ ಕೆಲವು ತಿಂಗಳುಗಳಿಂದ, ಕೆಲವು ನಗರಗಳಲ್ಲಿ ಕರೋನಾ ವ್ಯಾಪಕವಾಗಿ ಹರಡುತ್ತಿದೆ. ಹೀಗಿರುವಾಗ ಈ ನಿಗೂಢ ಜ್ವರ ಅಲ್ಲಿನ ಜನಸಾಮಾನ್ಯರ ಟೆನ್ಷನ್ ಹೆಚ್ಚಿಸಿದೆ. ವಿಶ್ವದಲ್ಲಿ ಕರೋನಾ ವೈರಸ್ ಕಾಣಿಸಿಕೊಂಡು ಎರಡು ವರ್ಷಗಳಿಗಿಂತ ಹೆಚ್ಚು ಸಮಯವಾಗಿದ್ದರೂ, ಉತ್ತರ ಕೊರಿಯಾದಲ್ಲಿ ಮೇ 2022 ರಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು ಎನ್ನಲಾಗಿದೆ.  ಇದಾದ ನಂತರ ಈ ಬಗ್ಗೆ ತಮ್ಮ ಪಕ್ಷದ ಪಾಲಿಟ್‌ಬ್ಯೂರೋ ಮತ್ತು ಆಡಳಿತಾತ್ಮಕ ಅಧಿಕಾರಿಗಳಸಭೆ ಕರೆದ ಕಿಮ್ ಜಾಂಗ್ ಉನ್,  ಕರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದ್ದಾರೆ. ಆದರೆ ಉತ್ತರ ಕೊರಿಯಾದ ಕಳಪೆ ಆರೋಗ್ಯ ವ್ಯವಸ್ಥೆಯ ಕಾರಣದಿಂದಾಗಿ , ಈ ಬಾರಿ ಅಲ್ಲಿನ ಜನರು ಕರೋನದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಜಾಗತಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 


ಇದನ್ನೂ ಓದಿ :   "ಭಾರತಕ್ಕೆ ಪಲಾಯನ ಮಾಡಿದ ರಾಜಪಕ್ಸೆ": ವರದಿಗಳ ಬಗ್ಗೆ ಹೈಕಮಿಷನ್‌ ಹೇಳಿದ್ದೇನು?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.