ಕರೋನಾ ಲಸಿಕೆಯ 'ಸ್ಪ್ರಿಂಗ್ ಬೂಸ್ಟರ್' ಡೋಸ್ ಹೆಚ್ಚು ಪ್ರಯೋಜನಕಾರಿ

Covid Spring Booster Dose: ಬ್ರಿಟನ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ, ಕರೋನಾ ಲಸಿಕೆಯ ನಾಲ್ಕನೇ ಡೋಸ್ ಮೂರನೇ ಡೋಸ್‌ಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಕೋವಿಡ್-19 ಲಸಿಕೆಯ ನಾಲ್ಕನೇ ಡೋಸ್ ಅನ್ನು 'ಸ್ಪ್ರಿಂಗ್ ಬೂಸ್ಟರ್' ಆಗಿ ನೀಡಲಾಗುತ್ತಿದೆ.

Written by - Yashaswini V | Last Updated : May 12, 2022, 01:21 PM IST
  • ನಾಲ್ಕನೇ ಡೋಸ್ ಅನ್ನು ಸ್ಪ್ರಿಂಗ್ ಬೂಸ್ಟರ್ ಆಗಿ ನೀಡಲಾಗಿದೆ
  • ಮೂರನೇ ಡೋಸ್ ಪಡೆದ ಸುಮಾರು ಏಳು ತಿಂಗಳ ನಂತರ ಸ್ಪ್ರಿಂಗ್ ಬೂಸ್ಟರ್
  • ಕರೋನಾ ಲಸಿಕೆಯ ನಾಲ್ಕನೇ ಡೋಸ್ ಮೂರನೇ ಡೋಸ್‌ಗಿಂತ ಹೆಚ್ಚು ಪ್ರಯೋಜನಕಾರಿ ಎಂದು ತಿಳಿದುಬಂದಿದೆ.
ಕರೋನಾ ಲಸಿಕೆಯ 'ಸ್ಪ್ರಿಂಗ್ ಬೂಸ್ಟರ್' ಡೋಸ್ ಹೆಚ್ಚು ಪ್ರಯೋಜನಕಾರಿ  title=
Spring Booster Dose

ಕೋವಿಡ್ ಸ್ಪ್ರಿಂಗ್ ಬೂಸ್ಟರ್ ಡೋಸ್: ಬ್ರಿಟನ್‌ನಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ, ಕರೋನಾ ಲಸಿಕೆ ಬಗ್ಗೆ ದೊಡ್ಡ ವಿಷಯ ಹೊರಬಂದಿದೆ. ರಾಷ್ಟ್ರವ್ಯಾಪಿ ನಡೆಸಳಾದ ಅಧ್ಯಯನದಲ್ಲಿ, ನಾಲ್ಕನೇ ಡೋಸ್ ಫಿಜರ್ ಅಥವಾ ಮಾಡರ್ನಾ ಲಸಿಕೆ ಸುರಕ್ಷಿತವಾಗಿದೆ ಮತ್ತು ಮೂರನೇ ಡೋಸ್‌ಗಿಂತ ಪ್ರತಿಕಾಯಗಳ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ.

ನಾಲ್ಕನೇ ಡೋಸ್ ಅನ್ನು ಸ್ಪ್ರಿಂಗ್ ಬೂಸ್ಟರ್ ಆಗಿ ನೀಡಲಾಗಿದೆ:
ಕೋವಿಡ್-19 ಲಸಿಕೆಯ ನಾಲ್ಕನೇ ಡೋಸ್ ಅನ್ನು ಬ್ರಿಟನ್‌ನಲ್ಲಿ ಬಹಳ ಸೂಕ್ಷ್ಮವಾಗಿರುವ ಜನರಿಗೆ 'ಸ್ಪ್ರಿಂಗ್ ಬೂಸ್ಟರ್' ಆಗಿ ನೀಡಲಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಅಧ್ಯಯನದ ಮಾಹಿತಿ ಲಭ್ಯವಾಗುವ ಮೊದಲು ಹೆಚ್ಚಿನ ಮಟ್ಟದ ಪ್ರತಿಕಾಯಗಳನ್ನು ಕಾಪಾಡಿಕೊಳ್ಳಲು ಇದು ಮುನ್ನೆಚ್ಚರಿಕೆಯ ತಂತ್ರವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ- Tomato Flu symptoms : 80 ಮಕ್ಕಳಿಗೆ ತಗುಲಿರುವ ಟೊಮೆಟೊ ಜ್ವರ .! ಏನಿದರ ಲಕ್ಷಣಗಳು ಗೊತ್ತಾ?

ನಾಲ್ಕನೇ ಡೋಸ್ ಉತ್ತಮ ಫಲಿತಾಂಶಗಳನ್ನು ತೋರಿಸಿದೆ:
'ದಿ ಲ್ಯಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸ್ ಜರ್ನಲ್' ನಲ್ಲಿ ಪ್ರಕಟವಾದ ಫಲಿತಾಂಶಗಳು, ಕೋವಿಡ್-19 ಲಸಿಕೆಯ ನಾಲ್ಕನೇ ಡೋಸ್ ಮೂರನೇ ಡೋಸ್ ಫಿಜರ್ ಲಸಿಕೆಯನ್ನು ಪಡೆದ ಜನರಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸುತ್ತದೆ ಎಂದು ತೋರಿಸುತ್ತದೆ.  

ಪ್ರತಿಕಾಯಗಳನ್ನು ಹೆಚ್ಚಿಸಲು ಸಹಕಾರಿ:
"ಈ ಫಲಿತಾಂಶಗಳು ಪ್ರಸ್ತುತ ಸ್ಪ್ರಿಂಗ್ ಡೋಸ್ ಅನ್ನು ಸ್ವೀಕರಿಸುವ ಹೆಚ್ಚು ದುರ್ಬಲ ಜನರಿಗೆ ಪ್ರಯೋಜನಗಳನ್ನು ವಿವರಿಸುತ್ತದೆ ಮತ್ತು ಯುಕೆಯಲ್ಲಿ ಯಾವುದೇ ಸಂಭಾವ್ಯ ವ್ಯಾಕ್ಸಿನೇಷನ್‌ಗಳಿಗೆ ವಿಶ್ವಾಸವನ್ನು ನೀಡುತ್ತದೆ" ಎಂದು  NIHR ಸೌತಾಂಪ್ಟನ್ ಕ್ಲಿನಿಕಲ್ ರಿಸರ್ಚ್ ಫೆಸಿಲಿಟಿಯ ನಿರ್ದೇಶಕ ಮತ್ತು ಟ್ರಯಲ್ ಮುಖ್ಯಸ್ಥ ಪ್ರೊಫೆಸರ್ ಸಾಲ್ ಫೌಸ್ಟ್ ಹೇಳಿದರು. 

ಇದನ್ನೂ ಓದಿ- Corona Symptoms: ಕರೋನಾದ ಈ 2 ಲಕ್ಷಣಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ

ಮೂರನೇ ಡೋಸ್ ಪಡೆದ ಸುಮಾರು ಏಳು ತಿಂಗಳ ನಂತರ ಸ್ಪ್ರಿಂಗ್ ಬೂಸ್ಟರ್ ನೀಡಲಾಗುತ್ತದೆ:
ಅಧ್ಯಯನದಲ್ಲಿ, ಜೂನ್ 2021 ರಲ್ಲಿ ಫಿಜರ್ ಅಥವಾ ಅಸ್ಟ್ರಾಜೆನೆಕಾದ ಆರಂಭಿಕ ಡೋಸ್ ಅನ್ನು ತೆಗೆದುಕೊಂಡ ನಂತರ, ಮೂರನೇ ಡೋಸ್ ಆಗಿ ಫಿಜರ್ ಲಸಿಕೆಯನ್ನು ಪಡೆದ ಅಂತಹ 166 ಜನರನ್ನು ಆಯ್ಕೆ ಮಾಡಲಾಗಿದೆ. ಈ ಜನರನ್ನು ಯಾವುದೇ ನಿಗದಿತ ಅನುಕ್ರಮವಿಲ್ಲದೆ ನಾಲ್ಕನೇ ಡೋಸ್‌ನಂತೆ ಫಿಜರ್‌ನ ಪೂರ್ಣ ಡೋಸ್ ಅಥವಾ ಅರ್ಧದಷ್ಟು ಮಾಡರ್ನಾವನ್ನು ತೆಗೆದುಕೊಳ್ಳಲು ಆಯ್ಕೆಮಾಡಲಾಗಿದೆ. ಈ ಜನರಿಗೆ ಮೂರನೇ ಡೋಸ್ ನಂತರ ಸುಮಾರು ಏಳು ತಿಂಗಳ ನಂತರ ನಾಲ್ಕನೇ ಡೋಸ್ ನೀಡಲಾಯಿತು ಎಂದು ತಿಳಿದುಬಂದಿದೆ.

ನಾಲ್ಕನೇ ಡೋಸ್‌ನ ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲ:
ನಾಲ್ಕನೇ ಡೋಸ್‌ ಪಡೆದವರಲ್ಲಿ ನೋವು ಮತ್ತು ಆಯಾಸವು ಸಾಮಾನ್ಯ ಲಕ್ಷಣಗಳಾಗಿವೆ, ಆದರೆ ಲಸಿಕೆಗೆ ಸಂಬಂಧಿಸಿದ ಯಾವುದೇ ಗಂಭೀರ ಅಡ್ಡಪರಿಣಾಮಗಳು ಕಂಡುಬಂದಿಲ್ಲ  ಎಂದು ಸಂಶೋಧಕರು ಹೇಳಿದ್ದಾರೆ. ಈ ಜನರು ಸುರಕ್ಷಿತವಾಗಿ ಮತ್ತು ಸುಲಭವಾಗಿ ನಾಲ್ಕನೇ ಡೋಸ್ ಪಡೆದರು. ಕೋವಿಡ್-19 ಲಸಿಕೆ ಕಾರ್ಯಕ್ರಮಕ್ಕಾಗಿ  'ವರ್ಷದ ಆರಂಭದಲ್ಲಿ ಹೆಚ್ಚು ದುರ್ಬಲರಾದ(ರೋಗದ ವಿಷಯದಲ್ಲಿ) ಜನರಿಗೆ ನಾಲ್ಕನೇ ಡೋಸ್ ಅನ್ನು ನೀಡುವುದು ಅಗತ್ಯವೆಂದು ನಮಗೆ ತಿಳಿದಿತ್ತು ಎಂದು NIHR ನ ಕ್ಲಿನಿಕಲ್ ಮುಖ್ಯಸ್ಥ ಪ್ರೊ. ಆಂಡ್ರ್ಯೂ ಉಸ್ಟ್ಯಾನೋವ್ಸ್ಕಿ ಹೇಳಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News