Mysterious light seen at the sky in America : ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್) ದ ಸ್ಯಾಕ್ರಮೆಂಟೊ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಆಕಾಶದಲ್ಲಿ ನಿಗೂಢ ದೀಪಗಳು ಕಾಣಿಸಿಕೊಂಡವು. ಸೇಂಟ್ ಪ್ಯಾಟ್ರಿಕ್ಸ್ ಡೇ ಆಚರಿಸಲು ಸಮುದ್ರತೀರದಲ್ಲಿ ಸೇರಿದ್ದವರಿಗೆ ಇದು ಅಚ್ಚರಿ ಮೂಡಿಸಿದೆ. AP ವರದಿಯ ಪ್ರಕಾರ, ಜನರು ಘಟನೆಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಜೇಮೀ ಹೆರ್ನಾಂಡೆಜ್ 40 ಸೆಕೆಂಡುಗಳ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಅವರು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಕಿಂಗ್ ಕಾಂಗ್ ಬ್ರೂಯಿಂಗ್ ಕಂಪನಿಯಲ್ಲಿ ಸೇಂಟ್ ಪ್ಯಾಟ್ರಿಕ್ಸ್ ಡೇ ಅನ್ನು ಆಚರಿಸುತ್ತಿದ್ದರು. ಈ ವೇಳೆ ಆಕಾಶದಲ್ಲಿ ಇದ್ದಕ್ಕಿದ್ದಂತೆ ಕಂಡ ನಿಗೂಢ ಬೆಳಕು ಕಾಣಿಸಿಕೊಂಡಿದೆ. ಈ ಅದ್ಭುತ ದೃಶ್ಯವನ್ನು ನೋಡಿದ ಜನರು ಕೂಡಲೇ ಅದನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರು.


ಇದನ್ನೂ ಓದಿ:  Ecuador Earthquake : 6.8 ತೀವ್ರತೆಯ ಭೂಕಂಪ, 13 ಕ್ಕೂ ಹೆಚ್ಚು ಜನ ಮೃತ


AP ಗೆ ಇಮೇಲ್‌ನಲ್ಲಿ ಜೇಮೀ ಹೆರ್ನಾಂಡೆಜ್ ಎಂಬುವವರು, 'ನಾವು ಅಚ್ಚರಿಗೊಂಡೆವು, ಆದರೆ ಇದನ್ನು ನೋಡಿ ನಾವು ಆಶ್ಚರ್ಯಚಕಿತರಾಗಿದ್ದೇವೆ. ನಮ್ಮಲ್ಲಿ ಯಾರೂ ಈ ಹಿಂದೆ ಇಂತಹದ್ದನ್ನು ನೋಡಿರಲಿಲ್ಲ.' ಎಂದು ಹೇಳಿದ್ದಾರೆ.


 



 


ಅಷ್ಟಕ್ಕೂ ಈ ಬೆಳಕು ಏನಾಗಿತ್ತು?


ಆಕಾಶದಲ್ಲಿ ಕಂಡ ಈ ಬೆಳಕು ಯಾವುದು ಎಂಬುದು ಪ್ರಶ್ನೆ ಮೂಡಿದೆ. ಹಾರ್ವರ್ಡ್-ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್‌ನ ಖಗೋಳಶಾಸ್ತ್ರಜ್ಞರ ಪ್ರಕಾರ, ಇದು ಬಾಹ್ಯಾಕಾಶ ಅವಶೇಷಗಳು. APಗೆ ನೀಡಿದ ಸಂದರ್ಶನದಲ್ಲಿ, ಖಗೋಳಶಾಸ್ತ್ರಜ್ಞರು 99.99 ಪ್ರತಿಶತದಷ್ಟು ಬೆಳಕಿನ ಗೆರೆಗಳು ಸುಡುವ ಬಾಹ್ಯಾಕಾಶ ಅವಶೇಷಗಳಿಂದ ಕಾಣುತ್ತವೆ ಎಂದು ಹೇಳಿದ್ದಾರೆ.


ಇದು ಜಪಾನಿನ ಅಂತರ-ಕಕ್ಷೆಯ ಸಂವಹನ ವ್ಯವಸ್ಥೆಯ ಅವಶೇಷಗಳು ಎಂದು ನಂಬಲಾಗಿದೆ, ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಉಪಗ್ರಹಕ್ಕೆ ಮಾಹಿತಿಯನ್ನು ರವಾನಿಸಿತು ಮತ್ತು 2017 ರಲ್ಲಿ ನಿವೃತ್ತವಾಯಿತು. 310 ಕೆಜಿ ತೂಕದ ಸಾಧನವನ್ನು 2020 ರಲ್ಲಿ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದುಹಾಕಲಾಗಿದೆ ಎಂದು ಯುಎಸ್ ಬಾಹ್ಯಾಕಾಶ ಪಡೆ ದೃಢಪಡಿಸಿದೆ.


ಇದನ್ನೂ ಓದಿ:  ಯುದ್ಧಾಪರಾಧ ಆರೋಪದಡಿ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದ ಅಂತರರಾಷ್ಟ್ರೀಯ ನ್ಯಾಯಾಲಯ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.